For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರರಂಗದಿಂದ ಲೂಸ್ ಮಾದನಿಗೆ ರತ್ನಗಂಬಳಿ

  By Harshitha
  |

  ಬೆಳ್ಳಿತೆರೆ ಮೇಲೆ ಮಾತ್ರ ಅಲ್ಲ. ಕಿರುತೆರೆಯಲ್ಲೂ ಲೂಸ್ ಮಾದ ಯೋಗಿ ಸಿಕ್ಕಾಪಟ್ಟೆ ಫೇಮಸ್. 'ಬಿಗ್ ಬಾಸ್', 'ಡಾನ್ಸಿಂಗ್ ಸ್ಟಾರ್' ಮತ್ತು 'ಲೈಫ್ ಸೂಪರ್ ಗುರು' ಕಾರ್ಯಕ್ರಮಗಳಲ್ಲಿ ಮಿಂಚಿರುವ ಯೋಗೀಶ್, ಅಸಲಿಗೆ ಯಾವ ಚಿತ್ರ ಮಾಡುತ್ತಿದ್ದಾರೆ.?

  ಈ ಪ್ರಶ್ನೆ ನಿಮಗೆ ಕಾಡಿರಬಹುದು. ಹಾಗೆ, ''ಯಾವುದೇ ಸಿನಿಮಾ ಇಲ್ಲಾ ಅನ್ಸುತ್ತೆ. ಅದಕ್ಕೆ ಟಿವಿಯಲ್ಲಿ ಮಿಂಚುತ್ತಿದ್ದಾರೆ'' ಅಂತ ಹಗುರವಾಗಿ ಮಾತನಾಡಿರಲೂ ಬಹುದು. ಆದರೆ, ವಾಸ್ತವ ಇದಲ್ಲ. ಲೂಸ್ ಮಾದ ಯೋಗಿ ಕೈಯಲ್ಲಿ 'ಸ್ನೇಕ್ ನಾಗ', 'ಝಂಡಾ', 'ಪ್ರಚಂಡ', ಸೇರಿದಂತೆ ಮೂರು-ನಾಲ್ಕು ಚಿತ್ರಗಳಿವೆ.

  ಇವೆಲ್ಲದರ ಮಧ್ಯೆ ಸದ್ದಿಲ್ಲದೇ ಯೋಗೀಶ್ ಕಾಲಿವುಡ್ ಗೆ ಹಾರುವ ತರಾತುರಿಯಲ್ಲಿದ್ದಾರೆ ಅನ್ನೋದು ಲೇಟೆಸ್ಟ್ ನ್ಯೂಸ್. ಹೌದು, ಕಾಲಿವುಡ್ ನಿಂದ ಯೋಗೀಶ್ ಗೆ ಬುಲಾವ್ ಬಂದಿದೆ. ತಮಿಳಿನಲ್ಲಿ ಇನ್ನೂ ಶೂಟಿಂಗ್ ಸಹ ಮಾಡದೇ ಇರುವ ಯೋಗಿ, ಒಟ್ಟಿಗೆ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ.

  ಅಂದ್ಹಾಗೆ, ಯೋಗೀಶ್ ರನ್ನ ಕಾಲಿವುಡ್ ಗೆ ಕರೆ ತಂದ ನಿರ್ದೇಶಕರು ಯಾರು ಹೇಳಿ? ಇದೇ ಯೋಗೀಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ 'ಯಾರೇ ಕೂಗಾಡಲಿ' ಸಿನಿಮಾ ನಿರ್ದೇಶನ ಮಾಡಿದ್ದ ಸಮುದ್ರಖಣಿ. [ಸಿಕ್ಸ್ ಪ್ಯಾಕ್ ಗಾಗಿ ಟೈಟ್ ಆದ ಲೂಸ್ ಮಾದ ಯೋಗಿ]

  Loose Mada Yogesh is all set to enter Kollywood

  'ಯಾರೇ ಕೂಗಾಡಲಿ' ಚಿತ್ರದಲ್ಲಿ ಯೋಗೀಶ್ ಪರ್ಫಾಮೆನ್ಸ್ ಕಂಡು ಖುಷಿ ಪಟ್ಟಿದ್ದ ಸಮುದ್ರಖಣಿ, ತಮ್ಮ ಮುಂದಿನ ತಮಿಳು ಚಿತ್ರಕ್ಕೆ ಯೋಗಿಯನ್ನೇ ಆಯ್ಕೆ ಮಾಡಿದ್ದಾರೆ. ಸಮುದ್ರಖಣಿ ಸ್ನೇಹಕ್ಕಾಗಿ ಕಾಲಿವುಡ್ ನಲ್ಲಿ ನಟಿಸುವುದಕ್ಕೆ ಒಪ್ಪಿದ ಯೋಗಿಗೆ, ಅದೇ ಸಮುದ್ರಖಣಿ ಪ್ರಭಾವದಿಂದ ಇನ್ನೆರಡು ಚಿತ್ರಗಳು ಸಿಕ್ಕಿವೆ.

  ಹುಡ್ಕೊಂಡು ಬರುತ್ತಿರುವ ಅವಕಾಶಗಳನ್ನ ಯಾರಾದರೂ ಬಿಡುತ್ತಾರಾ..? ಜೈ ಅನ್ನೋಣ ಅಂತ ಯೋಗಿ ಸೀದಾ ಚೆನ್ನೈಗೆ ಫ್ಲೈಟ್ ಹತ್ತೋಕೆ ನಿರ್ಧರಿಸಿದ್ದಾರೆ. ಆದ್ರೆ, ಅದಕ್ಕೂ ಮೊದಲು ಕನ್ನಡದಲ್ಲಿ ಒಪ್ಪಿಕೊಂಡಿರುವ ಚಿತ್ರಗಳನ್ನ ಮುಗಿಸಿಕೊಡುವ ಮನಸ್ಸು ಮಾಡಿದ್ದಾರೆ. (ಏಜೆನ್ಸೀಸ್)

  English summary
  Kannada Actor Loose Mada Yogesh has bagged three big offers in Kollywood. 'Ambari' Actor is gearing up for his Kollywood Debut now with well known director Samuthirakani.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X