ದುನಿಯಾ ವಿಜಯ್ ಜೊತೆ ಮತ್ತೆ ಸಿನಿಮಾ: ಯೋಗಿ ಹೇಳಿದ್ದೇನು?

ನಟ ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗೇಶ್ ಸಂಬಂಧಿಕರು. ವಿಜಯ್ ಅವರ ಅಕ್ಕನ ಮಗ ಯೋಗೇಶ್. 'ದುನಿಯಾ' ಸಿನಿಮಾ ಬಳಿಕ ಇವರಿಬ್ಬರು ಒಟ್ಟಿಗೆ ಯಾವ ಚಿತ್ರದಲ್ಲೂ ನಟಿಸಿಲ್ಲ. ಎರಡು ಕುಟುಂಬದ ನಡುವೆ ವೈಯಕ್ತಿಕ ಕಾರಣಗಳಿಂದ ಮನಸ್ತಾಪ ಉಂಟಾಗಿ ದೂರವಾಗಿದ್ದರು.

Recommended Video

ನಾನು ದುನಿಯಾ ವಿಜಯ್ ಒಂದಾಗಿದ್ದು ತುಂಬಾ ಖುಷಿ ವಿಚಾರ

ವಿಜಯ್ ಅವರ ತಾಯಿ ನಿಧನದ ಸಂದರ್ಭದಲ್ಲಿ ಮತ್ತೆ ಎರಡು ಕುಟುಂಬ ಒಂದಾಗಿದೆ. ವಿಜಯ್ ಮತ್ತು ಯೋಗಿ ಸಂಬಂಧ ಸಹ ಮೊದಲಿನಂತಿದೆ ಎನ್ನುವುದು ಖುಷಿಯ ಸಂಗತಿ. ವಿಜಯ್ ಮತ್ತು ಲೂಸ್ ಮಾದ ಒಂದಾದರು ಎಂದು ತಿಳಿಯುತ್ತಿದ್ದಂತ ಈ ಕಾಂಬಿನೇಷನ್‌ನಲ್ಲಿ ಸಿನಿಮಾ ಯಾವಾಗ ಬರುತ್ತೆ ಎಂಬ ಕುತೂಹಲ ಕಾಡ್ತಿದೆ.

ಈ ಬಗ್ಗೆ 'ಲಂಕೆ' ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ಲೂಸ್ ಮಾದ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ ಸಂದರ್ಭದಲ್ಲಿ, ''ನಮ್ಮಿಬ್ಬರ ಕಾಂಬಿನೇಷನ್ ಸಿನಿಮಾ ಯಾವಾಗ ಬರುತ್ತೆ ಎನ್ನುವುದು ಗೊತ್ತಿಲ್ಲ. ಆದರೆ, ಒಟ್ಟಿಗೆ ನಟಿಸೋಕೆ ಇಷ್ಟ ಇದೆ. ಒಳ್ಳೆಯ ಕಥೆ, ಸಂದರ್ಭ, ಮುಂದಿನ ದಿನದಲ್ಲಿ ನೋಡೋಣ. ಯಾರು ನಿರ್ದೇಶನ ಮಾಡ್ತಾರೋ ಗೊತ್ತಿಲ್ಲ. ಒಟ್ಟಿಗೆ ಆಕ್ಟ್ ಮಾಡಬೇಕು ಅಷ್ಟೇ'' ಎಂದರು.

Loose Mada Yogesh Said That He is ready to Act With Duniya Vijay

ಇದಕ್ಕೂ ಮುಂಚೆ ಟಿವಿ ಮಾಧ್ಯಮಗಳ ಜೊತೆ ಸಂದರ್ಶನದಲ್ಲಿ ಮಾತನಾಡಿದ ದುನಿಯಾ ವಿಜಯ್ ಸಹ, ''ಯೋಗಿ ಜೊತೆ ಸಿನಿಮಾ ಮಾಡಬೇಕು, ಮುಂದಿನ ದಿನದಲ್ಲಿ ಏನಾಗುತ್ತದೆ ನೋಡೋಣ'' ಎಂದಿದ್ದರು.

ಇನ್ನು 'ಲಂಕೆ' ಸಿನಿಮಾದ ವಿಚಾರಕ್ಕೆ ಬಂದರೆ, ರಾಮ್ ಪ್ರಸಾದ್ ಈ ಚಿತ್ರ ನಿರ್ದೇಶನ ಮಾಡಿದ್ದು, ಯೋಗೇಶ್, ಕಾವ್ಯ ಶೆಟ್ಟಿ, ಕೃಷಿ ತಾಪಂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕಾರ್ತಿಕ್ ಶರ್ಮಾ ಸಂಗೀತ, ಪಟೇಲ್ ಶ್ರೀನಿವಾಸ್ ನಾಗವಾರ, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Kannada actor Loose Mada Yogesh said that he is ready to act with Duniya Vijay.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X