ಅರ್ಜುನ್ ಜನ್ಯಗೆ 'ರೋಸಿ' ಬಿಟ್ಟುಕೊಟ್ಟ ಲೂಸ್ ಮಾದ ಯೋಗಿ: ಶಿವಣ್ಣ–ಉಪ್ಪಿಗೆ ಟೈಟಲ್ ಫಿಕ್ಸ್

By ಫಿಲ್ಮಿಬೀಟ್ ಡೆಸ್ಕ್

ಒಂದೇ ತಂಡ ಎರಡೆರಡು ಟೈಟಲ್ ಇಟ್ಕೊಂಡು ಪೇಚಿಗೆ ಸಿಕ್ಕಿಕೊಳ್ಳುವುದನ್ನು ನೋಡಿದ್ದೇವೆ. ಇತ್ತ ವಾಣಿಜ್ಯ ಮಂಡಳಿ ಕೂಡ ಒಂದೇ ಟೈಟಲ್‌ ಅನ್ನು ಎರಡೆರಡು ತಂಡಕ್ಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಉದಾಹರಣೆಗಳೂ ಇವೆ. ಇಂತಹದ್ದೇ ಒಂದು ಸನ್ನಿವೇಶಕ್ಕೀಗೆ ಪರಿಹಾರ ಸಿಕ್ಕಿದೆ.

ಲೂಸ್ ಮಾದ ಯೋಗಿ ನಟಿಸುತ್ತಿರುವ 50ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಡಾಲಿ ಧನಂಜಯ್ ಈ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು. ಅಲ್ಲದೆ ಮುಹೂರ್ತಕ್ಕೆ ಬಂದು ಗೆಳೆಯನನ್ನು ಹಾರೈಸಿದ್ದರು. ಅದೇ ಟೈಟಲ್ 'ರೋಸಿ' ಈಗ ವಿವಾದಕ್ಕೆ ಸಿಲುಕಿದೆ.

ಕೆಲವು ದಿನಗಳ ಹಿಂದೆ ನಿರ್ಮಾಪಕ ರಮೇಶ್ ರೆಡ್ಡಿ 'ರೋಸಿ' ವಿರುದ್ಧ ವಾಣಿಜ್ಯ ಮಂಡಳಿ ಮೆಟ್ಟಿಲೇರಿದ್ದರು. ಯಾಕಂದ್ರೆ, ಅರ್ಜುನ್ ಜನ್ಯ ನಿರ್ದೇಶಿಸುತ್ತಿರುವ ಚೊಚ್ಚಲ ಸಿನಿಮಾವನ್ನು ಇವರೇ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ಆ ಸಿನಿಮಾಗೆ 'ರೋಸಿ 45' ಅನ್ನೋ ಟೈಟಲ್ ರಿಜಿಸ್ಟರ್ ಮಾಡಿದ್ದರು.

Loose Mada Yogi 50th Movie Didnt Get Rosy Title It goes to Arjun Janya Film

ಈಗ ಲೂಸ್ ಮಾದ ನಟಿಸುತ್ತಿರುವ 50ನೇ ಸಿನಿಮಾದ ಟೈಟಲ್‌ 'ರೋಸಿ' ಅಂತಾನೇ ಅನಾವರಣ ಮಾಡಲಾಗಿತ್ತು. ಹೀಗಾಗಿ ರಮೇಶ್ ರೆಡ್ಡಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದಿದ್ದರು. ಕೊನೆಗೂ ವಾಣಿಜ್ಯ ಮಂಡಳಿ ಈ ಟೈಟಲ್ ಯಾರಿಗೆ ಸೇರಬೇಕು ಅನ್ನೋದನ್ನು ನಿರ್ಧರಿಸಿದೆ.

ಈ ಹಿಂದೆ ವಾಣಿಜ್ಯ ಮಂಡಳಿಯಲ್ಲಿ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾಗೆ ಟೈಟಲ್ ನೋಂದಣಿ ಮಾಡಲಾಗಿತ್ತು. ರಮೇಶ್ ರೆಡ್ಡಿ ಅವರ ಸೂರಜ್ ಪ್ರೊಡಕ್ಷನ್ ಬ್ಯಾನರ್ ಮೂಲಕ 'ರೋಸಿ 45' ಅನ್ನೋ ಟೈಟಲ್ ಅನ್ನು ರಿಜಿಸ್ಟರ್ ಆಗಿತ್ತು. ಹೀಗಾಗಿ ಯೋಗಿ 50ನೇ ಸಿನಿಮಾ ನಿರ್ಮಿಸುತ್ತಿರುವ ಡಿ.ವೈ.ಪ್ರೊಡಕ್ಷನ್ಸ್ 'ರೋಸಿ' ಅಂತಲೇ ಇಟ್ಟಿಕೊಂಡಿತ್ತು. ಇದೇ ರಮೇಶ್ ರೆಡ್ಡಿ ಗಮನಕ್ಕೆ ಬರುತ್ತಿದ್ದಂತೆ ವಾಣಿಜ್ಯ ಮಂಡಳಿಗೆ ಗಮನಕ್ಕೆ ತಂದಿದ್ದರು.

ಈ 'ರೋಸಿ' ಟೈಟಲ್ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ‌ಮಂಡಳಿ ಮಾಹಿತಿಯನ್ನು ರವಾನಿಸಿದೆ. ಏಪ್ರಿಲ್ 6, 2023ಯಂದು ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಮೂಲಕ 'ರೋಸಿ 45' ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿರುತ್ತಾರೆ. ಇದನ್ನು ಟೈಟಲ್ ರಿಜಿಸ್ಟೆಷನ್ ಕಮಿಟಿ ಮಂಜೂರು ಮಾಡಿದೆ ಎಂದು ವಾಣಿಜ್ಯ ಮಂಡಳಿ ಮಾಹಿತಿಯನ್ನು ನೀಡಿದೆ.

ಈ ಮೂಲಕ ಟೈಟಲ್ ಅನ್ನು ಮೊದಲು ನೋಂದಾಯಿಸಿದವರು ಮಾತ್ರ ಬಳಸಬಹುದು. ಅಲ್ಲದೆ ಈಗಾಗಲೇ ಮಂಜೂರು ಆಗಿರುವ ಟೈಟಲ್ ಹಿಂದೆ ಮುಂದೆ ಯಾವುದೇ ಹೆಸರು ಸೇರಿಸಿ ಬಳಸುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಸೂರಜ್ ಪ್ರೊಡಕ್ಷನ್ಸ್ ಗೆ ರೋಸಿ 45 ಟೈಟಲ್ ಸೇರಿದೆ. ಈ ಟೈಟಲ್‌ನ ಹಿಂದೆ ಮುಂದೆ ಯಾವುದೇ ಹೆಸರನ್ನು ಸೇರಿಸಿ, ಟೈಟಲ ಇಡುವಂತಿಲ್ಲ ಎಂದಿದೆ.

Loose Mada Yogi 50th Movie Didnt Get Rosy Title It goes to Arjun Janya Film

ಇನ್ನು ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, ರಿಯಲ್‌ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂವರೂ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಕೌತುಕ ಹೆಚ್ಚಾಗಿದ್ದು, ಅರ್ಜುನ್ ಜನ್ಯ ಸಿನಿಮಾ ಬಗ್ಗೆ ಅಪ್‌ಡೇಟ್ ಕೊಡಬೇಕಿದೆ.

ಇತ್ತ 'ಹೆಡ್ ಬುಷ್' ಸಿನಿಮಾ ನಿರ್ದೇಶನ ಮಾಡಿದ್ದ ಶೂನ್ಯ ಎರಡನೇ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಲೂಸ್ ಮಾದ ಯೋಗಿ 50ನೇ ಸಿನಿಮಾ ಆಗಿರುವುದರಿಂದ ಕಥೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಸದ್ಯ ಟೈಟಲ್ ಬಗ್ಗೆ ಯೋಗಿ ತಂಡ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ.

More from Filmibeat

English summary
Loose Mada Yogi 50th Movie Didn't Get Rosy Title It goes to Arjun Janya Film,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X