For Quick Alerts
  ALLOW NOTIFICATIONS  
  For Daily Alerts

  ಜನವರಿ 28ಕ್ಕೆ "ಒಂಭತ್ತನೇ ದಿಕ್ಕು" ಗೋಚರ!

  |

  ಕೊರೊನಾ ಮತ್ತು ಲಾಕ್‌ಡೌನ್ ನಿಂದಾಗಿ‌ ರಿಲೀಸ್ ಆಗಬೆಕಿದ್ದ ಚಿತ್ರಗಳಿಗೆ ಸಂಕಷ್ಟ ಎದುರಾಗಿತ್ತು. ಕಳೆದ ಬಾರಿ ಅನ್ ಲಾಕ್ ಬಳಿಕ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಯಾಗಿದ್ದವು. ಆದರೆ ರಿಲೀಸ್ ಮಾಡಬೇಕು ಎನ್ನುವಷ್ಟರಲ್ಲೇ ಮತ್ತೇ ಕೊರೊನಾ ಕಾಟ ಹೆಚ್ಚಾಯ್ತು ಹಾಗಾಗಿ ಲಾಕ್ ಡೌನ್, ಕರ್ಫ್ಯೂ ಜಾರಿ ಆಯ್ತು. ಈಗ ಮತ್ತೆ ಕೊರೊನಾ ಹಾವಳಿ ಕಡಿಮೆ ಆಗುತ್ತಿದೆ. ಹಾಗಾಗಿ ಸಿನಿಮಾಗಳು ಚಿತ್ರ ಮಂದಿರಕ್ಕೆ ಬರಲು ಸಜ್ಜಾಗುತ್ತಿವೆ.

  ಅದಿತಿ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟ ಲೂಸ್ ಮಾದ ಯೋಗಿ

  ನಟ ಲೂಸ್ ಮಾದ ಯೋಗಿ ಮತ್ತು ಅದಿತಿ ಪ್ರಭುದೇವ ಅವರು ಅಭಿನಯದ "ಒಂಭತ್ತನೇ ದಿಕ್ಕು" ಚಿತ್ರ ಜನವರಿ 28ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಲಂಕೆ ಚಿತ್ರದ ಬಳಿಕ ತೆರೆಗೆ ಬರುತ್ತಿರುವ ಯೋಗಿ ಸಿನಿಮಾ ಇದು.

  ಲೂಸ್ ಮಾದ ಯೋಗಿ - ಅದಿತಿ ಪ್ರಭುದೇವ ನಾಯಕ - ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ

  ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ಸಂಪತ್ ಕುಮಾರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ಮುಂತಾದವರಿದ್ದಾರೆ. ಅವಿನಾಶ್ ಯು ಶೆಟ್ಟಿ ಈ ಚಿತ್ರದ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಹಾಗೂ ಗುರು ದೇಶಪಾಂಡೆ "ಒಂಭತ್ತನೇ ದಿಕ್ಕು" ಚಿತ್ರದ ಬ್ಯುಸಿನೆಸ್‌ ಅಸೋಸಿಯೇಟ್ ಆಗಿದ್ದಾರೆ.

  ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ. ಈಗಾಗಲೇ ಚಿತ್ರ ಟೀಸರ್, ಟ್ರೇಲರ್ ಸದ್ದು ಮಾಡಿವೆ. ಚಿತ್ರದಲ್ಲಿ ಲೂಸ್ ಮಾದ ಯೋಗಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಮಂದಿರಗಳಿಗೆ ಸದ್ಯ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೂ ಕೂಡ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಹಾಗೆ ಒಂದು ವೇಳೆ ಸಿನಿಮಾ ಈಗ ರಿಲೀಸ್ ಆಗದೇ ಹೋದರೆ ಮುಂದೆ ರಿಲೀಸ್ ಗೆ ಉತ್ತಮ ಅವಕಾಶ ಸಿಗುವುದಿಲ್ಲ. ಯಾಕೆಂದರೆ ಸದ್ಯಕ್ಕೆ ಜನವರಿಯಲ್ಲಿ ಹೆಚ್ಚು ಸಿನಿಮಾಗಳ ರಿಲೀಸ್ ಇಲ್ಲ. ಆದರೆ ಫೆಬ್ರವರಿ, ಮಾರ್ಚ್‌ನಿಂದ ಇಡೀ ವರ್ಷ ಭಾರತ ಚಿತ್ರರಂಗದ ಹಲವು ಸಿನಿಮಾಗಳು ರಿಲೀಸ್ ಆಗಲಿವೆ.

  English summary
  Loose mada Yogi And Aditi Prabhudeva Starter Ombatthane Dikku Movie Will Release On January 28th, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion