"ಭಿನ್ನವಾಗಿ ಒಂಭತ್ತನೇ ದಿಕ್ಕಿನಲ್ಲಿ ನಿಂತ ಲೂಸ್ ಮಾದ ಯೋಗಿ"
ಕನ್ನಡ ಸಿನಿಮಾರಂಗದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಕೊರೋನಾ ಕಾರಣದಿಂದಾಗಿ ಸಿನಿಮಾಗಳು ರಿಲೀಸ್ ಆಗದೆ ಹಾಗೆಯೇ ಉಳಿದು ಬಿಟ್ಟಿವೆ. ಹಾಗಾಗಿ ಈಗ ಪ್ರತೀ ವಾರವೂ ಒಂದಕ್ಕಿಂತ ಹೆಚ್ಚಿನ ಸಿನಿಮಾಗಳು ತೆರೆಗೆ ಬರುತ್ತಿವೆ. ಸದ್ಯ ಲೂಸ್ ಮಾದ ಯೋಗಿ ಅಭಿನಯದ ಒಂಭತ್ತನೇ ದಿಕ್ಕು ಸಿನಿಮಾ ರಿಲೀಸ್‌ಗೆ ರೆಡಿ ಇದ್ದು, ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಚಿತ್ರವನ್ನ ಇದೇ ನವೆಂಬರ್ 19ನೇ ತಾರೀಖಿನಂದು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಆ ಸಮಯಕ್ಕೆ ಯಾವುದೇ ಭಾಷೆಯ ಭಾಷೆಯ ದೊಡ್ಡ ಸಿನಿಮಾ ಇಲ್ಲ ಎಂದಾದರೆ ತಪ್ಪದೆ ಒಂಭತ್ತನೇ ದಿಕ್ಕು ಪ್ರೇಕ್ಷಕರ ಮುಂದೆ ಬಂದು ಬಿಡುತ್ತದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಚಿತ್ರತಂಡ ಮಾತನಾಡಿದೆ.
ಲೂಸ್ ಮಾದ ಯೋಗಿ ಅವರು ನಾಯಕನಾಗಿ ನಟಿಸಿರುವ ಒಂಭತ್ತನೆ ದಿಕ್ಕು ಚಿತ್ರದಲ್ಲಿ ನಾಯಕಿ ಅದಿತಿ ಪ್ರಭುದೇವ ಯೋಗಿಗೆ ಜೊತೆಯಾಗಿದ್ದಾರೆ. ಸದ್ಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಒಂಭತ್ತನೇ ದಿಕ್ಕು ಟ್ರೇಲರ್ ಸಿನಿಪ್ರಿಯರಿಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ನಟ ಲೂಸ್ ಮಾದ ಯೋಗಿ ಈ ಚಿತ್ರದಲ್ಲಿ ಇಲ್ಲಿ ತನಕ ಮಾಡಿರ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದಿದ್ದಾರೆ. "ನಾನು ಇಲ್ಲಿಯವರೆಗೂ ಮಾಡದ ಪತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ದಯಾಳ್ ಅವರು ಹೇಳಿದ ಕಥೆ ತುಂಬಾ ಹಿಡಿಸಿತು. ಕಂಟೆಂಟ್ ಇರುವಂತಹ ಕಮರ್ಷಿಯಲ್ ಸಿನಿಮಾ ಇದು. ಚಿತ್ರೀಕರಣ ಮುಗಿದ್ದು, ಚಿತ್ರ ನೋಡುವ ತನಕ ಸಿನಿಮಾ ಹೇಗೆ ಬಂದಿರಬಹುದು? ಎಂಬ ಕಾತುರದಲ್ಲಿರುತ್ತೇವೆ. ಇತ್ತೀಚೆಗೆ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಪ್ರೇಕ್ಷಕರು ನಮ್ಮ ಸಿನಿಮಾ ಇಷ್ಟಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನಾಯಕ ಲೂಸ್ ಮಾದ ಯೋಗಿ ಒಂಭತ್ತನೇ ದಿಕ್ಕು ಬಗ್ಗೆ ಮಾತನಾಡಿದ್ದಾರೆ.
ಮನುಷ್ಯ ತನಗೆ ಬೇಕಾದದನ್ನು ತನಗೆ ಹುಡುಕಲು ತನಗೆ ತೋಚುವ ಹಾದಿಯಲ್ಲಿ ಸಾಗುತ್ತಾನೆ ಆದರೆ, ಅದು ಇನ್ಯಾವುದೋ ದಿಕ್ಕಿನಲ್ಲಿ ಇರುತ್ತದೆ. ಇದೆ ಚಿತ್ರದ ಸಾರಾಂಶ. ಎಂದಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್.
"ನನ್ನ ನಿರ್ದೇಶನದ ಹತ್ತೊಂಭತ್ತನೆಯ ಚಿತ್ರವಿದು. ಕಳೆದ ಕೆಲವು ವರ್ಷಗಳಿಂದ ನಾನು ಹಗ್ಗದ ಕೊನೆ, ಆ ಕರಾಳ ರಾತ್ರಿ, ರಂಗನಾಯಕಿಯಂತಹ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೀನಿ. ಈಗ ಆಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದ ಕಥೆ ಎರಡು ಟೈಮ್‌ಲೈನ್‌ನಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ್ದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಮೂರು ಸಾಹಸ ಸನ್ನಿವೇಶಗಳಿವೆ,'' ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿದ್ದಾರೆ.

ಅದಿತಿ ಪ್ರಭುದೇವ ದಯಾಳ್ ಅವರ ಜೊತೆ ಈ ಹಿಂದೆ "ರಂಗನಾಯಕಿ" ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅದಿತಿ ಖುಷಿಯನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ ಜೊತೆಗೆ ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುಂತಾದರು ಅಭಿನಯಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಹಾಡುಗಳು ಮೂಡಿಬಂದಿದೆ. ರಾಕೇಶ್ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನೂ ಇದೇ ಹತ್ತೊಂಬತ್ತನೆಯ ತಾರೀಖು ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.


Click it and Unblock the Notifications











