ಹೆಣ್ಣು ಮಗುವಿಗೆ ತಂದೆಯಾದ ಲೂಸ್ ಮಾದ ಯೋಗಿ
Recommended Video
ಕನ್ನಡ ನಟ ಲೂಸ್ ಮಾದ ಯೋಗಿ ತಂದೆಯಾಗಿದ್ದಾರೆ
ಕನ್ನಡ ನಟ ಲೂಸ್ ಮಾದ ಯೋಗಿ ತಂದೆಯಾಗಿದ್ದಾರೆ. ಯೋಗಿ ಅವರ ಕುಟುಂಬಕ್ಕೆ ಮುದ್ದು ಲಕ್ಷ್ಮಿಯ ಆಗಮನ ಆಗಿದೆ.
ಯೋಗಿ ಪತ್ನಿ ಸಾಹಿತ್ಯ ನಿನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರದಲ್ಲಿರೋ ಮದರ್ವುಡ್ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 4.55ರ ಸುಮಾರಿಗೆ ಮಗು ಹುಟ್ಟಿದೆ.
ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತಂದೆಯಾದ ಖುಷಿಯಲ್ಲಿ ಯೋಗಿ ಇದ್ದರೆ, ಅವರ ಮನೆಗೆ ಮೊದಲ ಮೊಮ್ಮಗಳ ಆಗಮನ ಆಗಿದೆ. ಈ ಕಾರಣ ಇಡೀ ಕುಟುಂಬ ಆಕೆಯನ್ನು ಸ್ವಾಗತ ಮಾಡುತ್ತಿದೆ.

ಯೋಗಿ 2017ರಲ್ಲಿ ಬಹುಕಾಲದ ಗೆಳತಿ ಸಾಹಿತ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎರಡು ವರ್ಷದ ನಂತರ ಈಗ ಸಂತಸದ ಸುದ್ದಿಯನ್ನು ನೀಡಿದ್ದಾರೆ.
ಅಂದ್ಹಾಗೆ, 'ದುನಿಯಾ-2' ಮತ್ತು 'ಲಂಬೋದರ' ಸಿನಿಮಾಗಳ ನಂತರ ಯೋಗಿ ಅಭಿನಯದ ಚಿತ್ರ ಇನ್ನು ರಿಲೀಸ್ ಆಗಿಲ್ಲ. ಯೋಗಿ ಹೊಸ ಪ್ರಾಜೆಕ್ಟ್ ಬಗ್ಗೆ ಸದ್ಯಕ್ಕೆ ಕುತೂಹಲ ಮೂಡಿದ್ದು, ಈ ಖುಷಿಯಲ್ಲಿ ಹೊಸ ಸಿನಿಮಾ ಘೋಷಣೆ ಮಾಡಿದ್ರು ಅಚ್ಚರಿಯಿಲ್ಲ.
More from Filmibeat
English summary
Kannada actor Loose mada Yogi Sahithya wife blessed with baby girl. Yogi and Sahithya got married in 2017.


Click it and Unblock the Notifications











