twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತಿನ ಅತಿ ಅಪಾಯಕಾರಿ ಆಟದ ಕಥೆಯೇ 'ಲೌಡ್ ಸ್ಪೀಕರ್'

    By Bharath Kumar
    |

    ಕ್ರಿಕೆಟ್, ಫುಟ್ ಬಾಲ್, ಕಳ್ಳ ಪೊಲೀಸ್, ಹಾಕಿ, ಹೀಗೆ ಏನೆಲ್ಲಾ ಆಟ ನೋಡಿರ್ತೀರಾ. ಆದ್ರೆ, ಇಲ್ಲೊಂದು ಸಿನಿಮಾ ಇದೆ. 'ಲೌಡ್ ಸ್ಪೀಕರ್' ಅಂತ. ಈ ಚಿತ್ರದಲ್ಲಿ ಯಾರೂ ಆಡಿರದ ಆಟವನ್ನ ತೋರಿಸಿದ್ದಾರೆ.

    ಅಷ್ಟೇ ಅಲ್ಲ ಈ ಆಟ ಜಗತ್ತನಲ್ಲಿ ಅತಿ ಅಪಾಯಕಾರಿ ಆಟವೆಂದು ಚಿತ್ರತಂಡ ಪರಿಗಣಿಸಿದೆ. ಯಾವುದು ಆ ಆಟ ಅಂತ ನೋಡಿದ್ರಾ. ಅದರ ಹೆಸರು 'ಲೌಡ್ ಸ್ಪೀಕರ್ ಆನ್ ಮಾಡು ಮಾತಾಡಿ ಅಂತ'.

    ಹೌದು, ಇಂತಹ ಕಥೆ ಹೊಂದಿರುವ 'ಲೌಡ್ ಸ್ಪೀಕರ್' ಚಿತ್ರ ಇದೇ ಶುಕ್ರವಾರ (ಆಗಸ್ಟ್ 10) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇಲ್ಲಿ ಯಾರೂ ಚಿತ್ರದ ನಾಯಕ, ನಾಯಕಿ ಅಂತ ಇಲ್ಲ. ಕಥೆಯೇ ಹೀರೋ. ಸುಮಂತ್ ಭಟ್‌, ಕಾರ್ತಿಕ್‌ ರಾವ್‌, ನೀನಾಸಂ ಭಾಸ್ಕರ್‌, ಕಾವ್ಯಾ ಶಾ, ಅನುಷಾ, ದಿಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಜೊತೆ ರಂಗಾಯಣ ರಘು ಹಾಗೂ ದತ್ತಣ್ಣ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಆಗಸ್ಟ್ 10 ರಂದು 'ಲೌಡ್ ಸ್ಪೀಕರ್' ಆನ್ ಆಗುತ್ತೆಆಗಸ್ಟ್ 10 ರಂದು 'ಲೌಡ್ ಸ್ಪೀಕರ್' ಆನ್ ಆಗುತ್ತೆ

    loudspeaker movie releasing on august 10th

    ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ರಹಸ್ಯ ಇರುತ್ತೆ. ಈಗಿನ ಸಮಯದಲ್ಲಿ ಅಂತಹ ರಹಸ್ಯಗಳನ್ನ ಆ ವ್ಯಕ್ತಿ ಮೊಬೈಲ್ ಗಳಲ್ಲಿ ಸಂಗ್ರಹಿಸಿ ಇಟ್ಟಿರುತ್ತಾನೆ. ಆ ರಹಸ್ಯಗಳು ಹೊರಗಿನ ಜಗತ್ತಿಗೆ ಗೊತ್ತಾದಾಗ ಅದರ ಪರಿಣಾಮ ಹೇಗಿರಲಿದೆ ಎಂಬುದೇ ಚಿತ್ರದ ಕಥೆ. ಸಿಂಪಲ್ ಆಗಿ ಹೇಳುವುದಾದರೇ ಯಾವುದೇ ಫೋನ್ ಬಂದ್ರು ಲೌಡ್ ಸ್ಪೀಕರ್ ಆನ್ ಮಾಡಿಯೇ ಮಾತನಾಡಬೇಕು. ಇಂತಹ ವಿಭಿನ್ನವಾದ ಕಥೆಯಿಟ್ಟು ಕಾಮಿಡಿ, ಸಸ್ಪೆನ್ಸ್ ನಿಂದ ಚಿತ್ರಕಥೆ ಮಾಡಿದ್ದಾರೆ.

    ಈ ಹಿಂದೆ 'ಮಳೆ' ಹಾಗೂ 'ಧೈರ್ಯಂ' ಸಿನಿಮಾ ಮಾಡಿದ್ದ ನಿರ್ದೇಶಕ ಶಿವ ತೇಜಸ್ 'ಲೌಡ್ ಸ್ಪೀಕರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಂಸಲೇಖ ಅವರ ಶಿಷ್ಯ ಹರ್ಷವರ್ಧನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಡಾ.ಕೆ.ಆರ್ ರಾಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ, ಆಗಸ್ಟ್ 10 ರಂದೇ ಸಿನಿಮಾ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಸಹ ತೆರೆಗೆ ಬರಲಿದೆ.

    English summary
    'Loudspeaker' kannada movie will be releasing in august 10th. the movie directed by shiva tejeas.
    Monday, August 6, 2018, 19:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X