'ಲವ್ 360' ನಾಯಕನ ಹೊಸ ಸಿನಿಮಾ ಅನೌನ್ಸ್: ಬಾಗಲಕೋಟೆಯಲ್ಲಿ ಮುಹೂರ್ತ
ಶಶಾಂಕ್ ನಿರ್ದೇಶನದ 'ಲವ್ 360' ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಯ ಪರಿಚಯನೂ ಆಗಿತ್ತು. ಪ್ರವೀಣ್ ಕುಮಾರ್ ಇದೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
'ಲವ್ 360' ಬಳಿಕ ಪ್ರವೀಣ್ ಕುಮಾರ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದುವೇ 'ದೇಸಾಯಿ' ಸದ್ಯ ಈ ಸಿನಿಮಾದ ಮುಹೂರ್ತ ಬಾಗಲಕೋಟೆಯಲ್ಲಿ ನಡೆದಿದೆ. ಅಷ್ಟಕ್ಕೂ ಈ ಸಿನಿಮಾದ ಬಗ್ಗೆ ಸಾಕಷ್ಟು ವಿಶೇಷತೆಯಿದೆ. ಅಲ್ಲದೆ ಬಾಗಲಕೋಟೆಯಲ್ಲೇ ಲಾಂಚ್ ಆಗಿದ್ದಕ್ಕೂ ಕಾರಣವಿದೆ.

'ದೇಸಾಯಿ' ಸಿನಿಮಾವನ್ನು ಮಹಾಂತೇಶ್ ವಿ ಚೊಳಚ್ಚಗುಡ್ಡ ನಿರ್ಮಾಣ ಮಾಡುತ್ತಿದ್ದಾರೆ. ಅಂದ್ಹಾಗೆ, ಉತ್ತರ ಕರ್ನಾಟಕದಲ್ಲಿ 'ದೇಸಾಯಿ' ಮನೆತನಕ್ಕೆ ಅದರದ್ದೇ ಆದ ಇತಿಹಾಸವಿದೆ ಪರಂಪರೆಯಿದೆ. ಈ ಮನೆತನದ ಹಿನ್ನೆಲೆಯನ್ನು ಸಿನಿಮಾ ಮೂಲಕ ತೆರೆಗೆ ತರಲು ಹೊರಟಿದ್ದಾರೆ. ನಿರ್ಮಾಪಕರು. ಇದರಲ್ಲಿ 'ಲವ್ 360' ಸಿನಿಮಾದ ನಾಯಕ ಪ್ರವೀಣ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ 'ದೇಸಾಯಿ' ಸಿನಿಮಾದ ಮುಹೂರ್ತ ಬಾಗಲಕೋಟೆಯ ಶ್ರೀವೀರಭದ್ರೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೀತು. ಸಿನಿಮಾದ ಮೊದಲ ದೃಶ್ಯಕ್ಕೆ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ಕ್ಲ್ಯಾಪ್ ಮಾಡಿ ಶುಭಕೋರಿದ್ದಾರೆ. ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ದಿನವೇ ಸಿನಿಮಾಗೆ ಮುಹೂರ್ತ ಮಾಡಲಾಗಿದೆ.
'ದೇಸಾಯಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ನಿರ್ದೇಶಕ ನಾಗಿರೆಡ್ಡಿ. ಇದು ಇವರಿಗೆ ಚೊಚ್ಚಲ ಸಿನಿಮಾ. ಇದೇ ವೇಳೆ ಸಿನಿಮಾದ ಈ ನಿರ್ಮಾಪಕ ಈ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದೇಗೆ ಅನ್ನೋದನ್ನು ತಿಳಿಸಿದ್ದಾರೆ. "ವಿಶಿಷ್ಟ ಕಥಾಹಂದರ ಹೊಂದಿರುವ ಕಥೆಯನ್ನು ನಾನು ಹುಡುಕುತ್ತಿದ್ದಾಗ ನನ್ನ ಯೋಚನೆಗೆ ಬಂದಿದ್ದು ಆ ಗತಕಾಲದ, ತನ್ನದೇ ಆದ ವೈಶಿಷ್ಟ್ಯ ಪರಂಪರೆಯನ್ನು ಹೊಂದಿರುವ 'ದೇಸಾಯಿ' ಮನೆತನ. ಇದರ ಕುರಿತು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದೆ. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ." ಎನ್ನುತ್ತಾರೆ ನಿರ್ಮಾಪಕ ಮಹಾಂತೇಶ ವಿ ಚೊಳಚಗುಡ್ಡ.
ಇನ್ನು ಸಿನಿಮಾ ನಾಯಕನಿಗೆ ಈ ಸಿನಿಮಾ ಕಥೆ ತುಂಬಾನೇ ಇಷ್ಟ ಪಟ್ಟಿದ್ದಾರೆ. "ಈ ಸಿನಿಮಾ ನನ್ನ ನಟನಾ ವೃತ್ತಿಯಲ್ಲಿ ಒಂದು ಹೊಸ ಅಧ್ಯಾಯ ಆಗಲಿದೆ. ಅಂತಹ ಚಾಲೆಂಜಿಂಗ್ ಪಾತ್ರ ಇದು. ಸಿನಿಮಾದ ಕಥೆ ತುಂಬಾ ಇಷ್ಟವಾಯಿತು" ಎಂದರು ನಾಯಕ ಪ್ರವೀಣ್ ಕುಮಾರ್ ಖುಷಿ ವ್ಯಕ್ತಪಡಿಸಿದ್ದಾರೆ.


Click it and Unblock the Notifications











