ಗೆಲುವಿನ ಹಾದಿಯಲ್ಲಿ 'ಲವ್ 360'!

'ಲವ್ 360' ಇದೇ ಆಗಸ್ಟ್ 19ರಂದು ರಿಲೀಸ್ ಆಗಿದೆ. ಈ ಚಿತ್ರವನ್ನು ಶಶಾಂಕ್ ನಿರ್ದೇಶನ ಇರುವ ಕಾರಣಕ್ಕೆ ನಿರೀಕ್ಷೆಯೂ ಜೋರಾಗಿತ್ತು. ಯುವ ನಟ ಪ್ರವೀಣ್ ಮತ್ತು ರಚನಾ ಇಂದರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಲವ್ 360 ಹಾಡೊಂದು ಬಗ್ಗೆ ಟ್ರೆಂಡ್ ಕೂಡ ಆಗಿತ್ತು.

ಜಗವೇ ನೀನು ಗೆಳತಿಯೇ.. ಸಿನಿ ರಸಿಕರ ಮೆಚ್ಚಿನ ಗೀತೆಯಾಗಿತ್ತು. ಆದರೆ ಮೊದಲ 2 ದಿನ ನಿರೀಕ್ಷೆಗೆ ತಕ್ಕಂತೆ ಜನರೇ ಬಂದಿರಲಿಲ್ಲ. ಆಗ ನಿರ್ದೇಶಕ ಶಶಾಂಕ್ ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನೋಡಿ. ನೀವು ಬರದೇ ಹೊದರೆ ಥಿಯೇಟರಿಂದ ತೆಗೆಯುತ್ತಾರೆ. ನೀವು ಖಂಡಿತಾ ಇಷ್ಟಪಡುತ್ತೀರಿ. ಜಗವೇ ನೀನು ಗೆಳತಿಯೇ ಹಾಡು ಇರುವ ಸಿನಿಮಾ ಇದು ಎಂದು ಕೇಳಿಕೊಂಡಿದ್ದರು.

ಈಗ ಸಿನಿಮಾ ಗೆಲುವಿನ ನಗೆ ಬೀರಿದೆ. ಈ ಬಗ್ಗೆ ಶಶಾಂಕ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ನಾನು ಪ್ರೇಕ್ಷಕರನ್ನು ದೂರುವುದಿಲ್ಲ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂಡಿರುವಾಗ ಜನರು ಬಾರದೇ ಇದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದ್ದಂತೂ ನಿಜ. ಆದರೆ ಈಗ ಪಿಕಪ್ ಆಗಿದೆ. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ಎಲ್ಲ ಕಡೆ ಉತ್ತಮ ರೆಸ್ಪಾನ್ಸ್ ಇದೆ" ಎಂದಿದ್ದಾರೆ ಶಶಾಂಕ್.

Love 360 Movie Is In Success Path Now After One Week

ಇದು ಥಿಯೇಟರ್ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಜನ ನೋಡಲಿಲ್ಲ, ಇಷ್ಟ ಪಡಲಿಲ್ಲ ಎಂದಾಗ ನಾನು ಜನರನ್ನು ದೂರುವುದಿಲ್ಲ. ಆದರೆ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ದೂರುವವರು ಖಂಡಿತಾ ಈ ಚಿತ್ರ ನೋಡಿ ಎಂದಿದ್ದಾರೆ ಶಶಾಂಕ್.

ಲವ್ 360 ಕೇವಲ ಲವ್ ಸ್ಟೋರಿಯಲ್ಲ. ಅಲ್ಲೊಂದು ಕ್ರೈಂ ಮತ್ತು ಥ್ರಿಲ್ಲರ್ ಸ್ಟೋರಿಯೂ ಇದೆ. ದಿನ ಕಳೆದಂತೆ ಈಗ ನಿಧಾನವಾಗಿ ಪ್ರೇಕ್ಷಕರು ಥಿಯೇಟರ್‌ನತ್ತ ಬರುತ್ತಿದ್ದಾರೆ. ಸದ್ಯ ಚಿತ್ರ ಗೆಲುವಿನ ಹಾದಿಯತ್ತ ಈ ಚಿತ್ರ ಸಾಗಿದ್ದು, ಚಿತ್ರತಂಡ ಖುಷಿಯಿಂದ ಇದೆ.

More from Filmibeat

English summary
Love 360 Movie Is on Success Path Now after One Week,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X