ಪತ್ನಿ ಪ್ರಿಯಾಂಕಾಗೆ ಚುಂಬಿಸಿದ ರಿಯಲ್ ಸ್ಟಾರ್ ಉಪೇಂದ್ರ; ಫೋಟೋ ವೈರಲ್.. ಏನು ವಿಶೇಷ?

By ಫಿಲ್ಮಿಬೀಟ್ ಡೆಸ್ಕ್

'ಯುಐ' ಬಳಿಕ ಉಪೇಂದ್ರ ವೃತ್ತಿ ಬದುಕಿನಲ್ಲಿ ಹೊಸ ಪರ್ವ ಆರಂಭ ಆಗಿದೆ. ಉಪ್ಪಿ ಕೈಯಲ್ಲಿ ಕೈಯಲ್ಲಿ ದೊಡ್ಡ ಸಿನಿಮಾಗಳಿವೆ. ಅವರಿಗಷ್ಟೇ ಅಲ್ಲ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಕೈಯಲ್ಲೂ ಬಿಗ್ ಪ್ರಾಜೆಕ್ಟ್ ಇದೆ. ಪುತ್ರ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ತಯಾರಿಗಳು ನಡೆಯುತ್ತಿವೆ. ಹೀಗಾಗಿರುವಾಗಲೇ ಪ್ರಿಯಾಂಕಾ ಹಾಗೂ ಉಪೇಂದ್ರ ಇಬ್ಬರೂ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಸಿನಿಮಾ, ಸಂಸಾರ ಅಂತ ಬ್ಯುಸಿಯಾಗಿದ್ದರೂ, ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಆಗಾಗ ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ತಮ್ಮ ಅಭಿಮಾನಿಗಳ ಗಮನಕ್ಕೆ ತರುತ್ತಲೇ ಇರುತ್ತಾರೆ. ಈಗ ಕೂಡ ಪತಿ ಉಪೇಂದ್ರ ಅವರೊಂದಿಗೆ ಕಳೆದ ಮಧುರ ಕ್ಷಣವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Love and Success Priyanka and Upendra shared Sweet Kiss Photo

ಸಾಮಾನ್ಯವಾಗಿ ಉಪೇಂದ್ರ ಸಿನಿಮಾದಲ್ಲಷ್ಟೇ ಓಪನ್ ಆಗುತ್ತಾರೆ. ವೈಯಕ್ತಿಕ ವಿಚಾರ ಅಂತ ಬಂದರೆ, ಉಪ್ಪಿಯವರದ್ದು ನಾಚಿಕೆ ಸ್ವಭಾವ. ಮದುವೆ, ಸಂಸಾರ, ಪತ್ನಿ ಬಗ್ಗೆ ಉಪೇಂದ್ರ ಮಾತಾಡಿದ್ದು ತೀರಾ ಕಡಿಮೆ. ಸಾರ್ವಜನಿಕವಾಗಿ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಚಿಕ್ಕದೊಂದು ಸಲಿಗೆಯಿಂದ ನಡೆದುಕೊಂಡಿದ್ದೂ ಕೂಡ ಇಲ್ಲ. ಆದ್ರೀಗ ಪ್ರಿಯಾಂಕಾ ಒಂದು ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಉಪ್ಪಿ ಪತ್ನಿಗೆ ಸಿಹಿ ಮುತ್ತು ನೀಡಿದ್ದಾರೆ. ಆ ಫೋಟೊ ನೋಡಿ ಫ್ಯಾನ್ಸ್ ಏನು ಸಂಭ್ರಮ? ಅಂತ ಅಚ್ಚರಿಯಿಂದ ಕುತೂಹಲ ಹೊರ ಹಾಕಿದ್ದಾರೆ.

ರಿಯಲ್‌ ಸ್ಟಾರ್ ಉಪೇಂದ್ರ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಾನೇ ನಿರ್ದೇಶಿಸಿದ ಸಿನಿಮಾ 'ಯುಐ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಾರಣಲಿಲ್ಲ. ಆದರೆ, ಉಪ್ಪಿಯ ಕಲ್ಪನೆಗೆ ಸಿನಿ ಪ್ರೇಮಿಗಳು ಮೆಚ್ಚುಗೆಯನ್ನು ಸೂಚಿಸಿದ್ದರು. ಈ ಸಿನಿಮಾದ ನಿರ್ದೇಶನಕ್ಕೆಂದು ಉಪ್ಪಿ ನಟಿಸುವುದಕ್ಕೆ ಕಡಿಮೆ ಮಾಡಿದ್ದರು. ಆದ್ರೀಗ ಇವರ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಮೊನ್ನೆ ತಾನೆ ಸೂರಪ್ಪ ಬಾಬು ಹಾಗೂ ನಿರ್ದೇಶಕ ನಾಗಣ್ಣ ಅವರ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು 'ತ್ರಿಶೂಲಂ', ಅರ್ಜುನ್ ಜನ್ಯ ನಿರ್ದೇಶಿಸಿದ ಚೊಚ್ಚಲ ಚಿತ್ರ '45' ಬಿಡುಗಡೆಗೆ ರೆಸಯಾಗಿತ್ತಿದೆ.

ಸೂಪರ್‌ಸ್ಟಾರ್ ರಜಿನಿಕಾಂತ್ ಜೊತೆ 'ಕೂಲಿ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬೆನಲ್ಲೇ ತೆಲುಗಿಗೂ ಎಂಟ್ರಿ ಕೊಟ್ಟಿದ್ದಾರೆ. ರಾಮ್‌ ಪೋತಿನೇನಿ ನಟನೆಯ 'ಆಂಧ್ರ ಕಿಂಗ್ ತಾಲೂಕಾ' ಸಿನಿಮಾದಲ್ಲಿ ಸೂಪರ್‌ಸ್ಟಾರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳು ಉಪ್ಪಿಗೆ ಹೊಸ ಇಮೇಕ್ ಕೊಡಲಿದೆ ಎಂಬ ನಿರೀಕ್ಷೆಯಿದೆ. ಇನ್ನೊಂದು ಕಡೆ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಬಾಲಿವುಡ್‌ಗೆ ಹಾರಿದ್ದಾರೆ. ಇದೇ ಖುಷಿಯಲ್ಲಿ ಪತಿ ಉಪೇಂದ್ರ ತಮಗೆ ಸಿಹಿ ಮುತ್ತು ನೀಡಿದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ಸಾಲು ಸಾಲು ಕಮೆಂಟ್ ಬಂದಿವೆ.

ಹೌದು, ಉಪ್ರೇಂದ ಹಾಗೂ ಪ್ರಿಯಾಂಕಾ ಚೋಪ್ರಾ ಅಪರೂಪಕ್ಕೆ ಎಂಬಂತೆ ಇಂತಹ ಫೋಟೊಗಳನ್ನು ಶೇರ್ ಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಮನೆಯಲ್ಲಿ ಏನಾದರೂ ಸಂಭ್ರಮವಿದೆಯಾ? ಹೊಸ ಸಿನಿಮಾವನ್ನೇನಾದರೂ ಮಾಡುತ್ತಿದ್ದಾರಾ? ಅನ್ನೋ ಸಾಲು ಸಾಲು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿಂದೆ ಇಬ್ಬರೂ ಅಕ್ಕಪಕ್ಕದಲ್ಲಿ ನಿಂತಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರಂಷ್ಟೇ. ಆದರೆ, ಈಗ ರೊಮ್ಯಾಂಟಿಕ್ ಫೋಟೊವನ್ನು ಹಂಚಿಕೊಂಡಿದ್ದು ಫುಲ್ ರೊಮ್ಯಾಂಟಿಕ್ ಮೂಡ್‌ಗಂತೂ ಜಾರಿದೆ.

ಇನ್ನೊಂದು ಕಡೆ ಈ ದಂಪತಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಯಾಕಂದ್ರೆ, ಪುತ್ರ ಆಯುಷ್ ಕೂಡ 21ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಮೊದಲ ಸಲ' ಸಿನಿಮಾವನ್ನು ನಿರ್ದೇಶಿಸಿದ ಪುರುಷೋತ್ತಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆಯುಷ್ ಚೊಚ್ಚಲ ಸಿನಿಮಾ ಲವ್ ಸ್ಟೋರಿ ಆಗಿರುತ್ತೆ ಎಂದು ಹೇಳಲಾಗುತ್ತಿದೆ.

More from Filmibeat

English summary
Upendra and Priyanka Upendra: A Journey of Love, Success, and Togetherness;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X