»   » ಗಣೇಶ್ 'ಆರೆಂಜ್' ಚಿತ್ರಕ್ಕಾಗಿ ಮತ್ತೆ ಒಂದಾದ ಯಶಸ್ವಿ ಜೋಡಿ

ಗಣೇಶ್ 'ಆರೆಂಜ್' ಚಿತ್ರಕ್ಕಾಗಿ ಮತ್ತೆ ಒಂದಾದ ಯಶಸ್ವಿ ಜೋಡಿ

Posted By:
Subscribe to Filmibeat Kannada

ಗಣೇಶ್ ಜೊತೆ 'ಜೂಮ್' ಚಿತ್ರ ಮಾಡಿದ್ದ ಪ್ರಶಾಂತ್ ರಾಜ್ ಈಗ ಅವರೊಂದಿಗೆ 'ಆರೆಂಜ್' ಚಿತ್ರ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಗಣೇಶ್ ರವರ ಹುಟ್ಟುಹಬ್ಬ ದಿನದಂದು ಸಿನಿಮಾ ಟೈಟಲ್ ಲಾಂಚ್ ಮಾಡಲು ಅದ್ಧೂರಿ ತಯಾರಿ ನಡೆಸಿದ್ದಾರೆ. ಇದರ ಹಿಂದೆಯೇ ಈಗ ಇನ್ನೊಂದು ಹೊಸ ವಿಷಯ ಚಿತ್ರದ ಬಗ್ಗೆ ಕೇಳಿಬಂದಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ 'ಆರೆಂಜ್' ಗಿಫ್ಟ್

ಅದೇನಂದ್ರೆ 'ಆರೆಂಜ್' ಚಿತ್ರಕ್ಕಾಗಿ ಈಗ ಯಶಸ್ವಿ ಜೋಡಿ ಮತ್ತೆ ಒಂದಾಗುತ್ತಿದೆಯಂತೆ. ಈಗಾಗಲೇ ತಿಳಿದಿರುವಂತೆ ಈ ಹಿಂದೆ 'ಜೂಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪ್ರಶಾಂತ್ ರಾಜ್ ಮತ್ತೆ ಗಣೇಶ್ ರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇವರ ಜೊತೆಗೆ ಜೋಶ್ವ ಶ್ರೀಧರ್ ರವರು ಕೈಜೋಡಿಸುತ್ತಿದ್ದು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದು ಮೂಲಗಳಿಂದ ತಿಳಿದಿದೆ.

'Lovr Guru' fame Joshua Sridhar's music to Ganesh starrer 'Arange' movie

ಅಂದಹಾಗೆ ಜೋಶ್ವ ಶ್ರೀಧರ್ ರವರು ಈ ಹಿಂದೆ ಪ್ರಶಾಂತ್ ರಾಜ್ ನಿರ್ದೇಶನದ 'ಲವ್ ಗುರು' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಹಾಡುಗಳು ಸಹ ಸೂಪರ್ ಹಿಟ್ ಆಗಿದ್ದವು. ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಬಂದಿತ್ತು. ಯಶಸ್ವಿ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿರುವ ಪ್ರಶಾಂತ್ ರಾಜ್, ಗಣೇಶ್ ಮತ್ತು ಜೋಶ್ವ ಶ್ರೀಧರ್ ಮತ್ತೆ 'ಆರೆಂಜ್' ಚಿತ್ರಕ್ಕಾಗಿ ಒಂದಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಕುತೂಹಲ ಈಗಿನಿಂದಲೇ ಹೆಚ್ಚಾಗಿದೆ.

ಸದ್ಯದಲ್ಲಿ ಗಣೇಶ್ ರವರು ಸಿಂಪಲ್ ಸುನಿಯ 'ಚಮಕ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರ ಮುಗಿದ ನಂತರ 'ಆರೆಂಜ್' ಚಿತ್ರದಲ್ಲಿ ಗಣೇಶ್ ಅಭಿನಯಿಸಲಿದ್ದಾರೆ. 'ಆರೆಂಜ್' ಚಿತ್ರಕ್ಕೆ ಸಂಗೀತ ನಿರ್ದೇಶಕ ಮತ್ತು ನಟ ಮಾತ್ರ ಅಂತಿಮವಾಗಿದ್ದು, ಉಳಿದ ತಾರಾಬಳಗದ ಆಯ್ಕೆ ಇನ್ನು ಆಗಿಲ್ಲ ಎಂಬುದು ತಿಳಿದಿದೆ.

English summary
'Love Guru' fame Joshua Sridhar's music to Ganesh starrer 'orange' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada