ಏಳುಬೀಳುಗಳ ನಡುವೆ 25 ದಿನ ಪೂರೈಸಿದ 'ಲವ್ ಮಾಕ್ಟೈಲ್'

ನಟ ಡಾರ್ಲಿಂಗ್ ಕೃಷ್ಣ ಮುಖದಲ್ಲಿ ನಗು ಮೂಡಿದೆ. ಅದಕ್ಕೆ ಕಾರಣ 'ಲವ್ ಮಾಕ್ಟೈಲ್' ಸಿನಿಮಾದ ಯಶಸ್ಸು. ಸದ್ಯ, ಈ ಸಿನಿಮಾದ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಖುಷಿಯಿಂದ ಹೊರಬರುತ್ತಿದ್ದಾರೆ.

ಇದೀಗ ಸಿನಿಮಾ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಒಂದೇ ಒಂದು ಚಿತ್ರಮಂದಿರದಲ್ಲಿ ಇದ್ದ ಸಿನಿಮಾ ಈಗ ಕರ್ನಾಟಕದ 55 ರಿಂದ 60 ಚಿತ್ರಮಂದಿರಗಳಲ್ಲಿ 25 ದಿನಗಳ ಪ್ರದರ್ಶನ ಕಂಡಿದೆ. ಬೆಂಗಳೂರಿನ 23 ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಶೋ ನಡೆಯುತ್ತದೆ.

ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮೈಸೂರಿನಲ್ಲಿ ಸಿನಿಮಾಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ನಟಿ ಮಿಲನ ಸಿನಿಮಾವನ್ನು ನೋಡಿದ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

Love Mocktail Kannada Movie Completed 25 Days

'ಲವ್ ಮಾಕ್ಟೈಲ್' ಒಂದು ಸಹಜ ಸುಂದರ ಪ್ರೇಮ ಕಥೆಯಾಗಿದೆ. ಪ್ರೀತಿ, ಪ್ರೇಮ, ಹಾಸ್ಯ, ತಮಾಷೆ, ಭಾವುಕತೆ ಹೀಗೆ ಎಲ್ಲ ಅಂಶಗಳನ್ನು ಸಿನಿಮಾದಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶಕರಾಗಿ ಕೃಷ್ಣ ಗೆದ್ದಿದ್ದಾರೆ.

ನಟಿ ಮಿಲನ, ಅಮೃತ ಐಯ್ಯಂಗರ್, ರಚನಾ ಸಿನಿಮಾದ ನಾಯಕಿರಾಗಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ.

More from Filmibeat

English summary
Actor Darling Krishna and Milana's 'Love Mocktail' kannada movie completed 25 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X