For Quick Alerts
  ALLOW NOTIFICATIONS  
  For Daily Alerts

  ಹೆಚ್ಚಾಯ್ತು 'ಲವ್ ಮಾಕ್ ಟೈಲ್' ಚಿತ್ರಮಂದಿರಗಳ ಸಂಖ್ಯೆ: ಒಳ್ಳೆಯ ಸಿನಿಮಾ ಕೈ ಹಿಡಿದ ಕನ್ನಡಿಗರು

  |

  'ಲವ್ ಮಾಕ್ ಟೈಲ್' ಸಿನಿಮಾ ಮತ್ತೆ ಮೇಲೆ ಎದ್ದು ನಿಂತಿದೆ. ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದ್ದು, ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಮುಖದಲ್ಲಿ ಸಂತಸ ಮೂಡಿದೆ.

  ಕಳೆದ ವಾರ ಬಿಡುಗಡೆಯಾದ 'ಲವ್ ಮಾಕ್ ಟೈಲ್' ಸಿನಿಮಾವನ್ನು ಒಂದೇ ವಾರದಲ್ಲಿ ಎತ್ತಂಗಡಿ ಮಾಡಲಾಗಿತ್ತು. ಇಡೀ ಬೆಂಗಳೂರಿನಲ್ಲಿ ಒಂದೇ ಒಂದು ಚಿತ್ರಮಂದಿರದಲ್ಲಿ ಮಾತ್ರ ಸಿನಿಮಾ ಉಳಿದಿತ್ತು. ಒಳ್ಳೆಯ ಸಿನಿಮಾ ಮಾಡಿದ್ದರೂ, ಜನ ಇಷ್ಟಪಟ್ಟರೂ, ಈ ರೀತಿ ಆಗುತ್ತಿರುವ ಬಗ್ಗೆ ಚಿತ್ರತಂಡ ಬೇಸರ ವ್ಯಕ್ತಪಡಿಸಿತ್ತು.

  ಇದೀಗ ಈ ಸಿನಿಮಾಗೆ ಪ್ರೇಕ್ಷಕರ ಬೆಂಬಲ ಸಿಕ್ಕಿದೆ. ಇಂದು ಸಿನಿಮಾಗೆ ಎಂಟು ಚಿತ್ರಮಂದಿರಗಳನ್ನು ನೀಡಲಾಗಿದೆ. ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್ ಫುಲ್ ಆಗಿದೆ. ರಾಕ್ ಲೈನ್ ಮಾಲ್, ಸಿನಿಪೊಲಿಸ್, ಗೋಪಾಲನ್, ಒರಾಯನ್ ಮಾಲ್ ಮಲ್ಟಿಪ್ಲೆಕ್ಸ್ ಗಳಲ್ಲಿ ಹುಡುಕಿಕೊಂಡು ಬಂದು ಜನ ಸಿನಿಮಾ ನೋಡುತ್ತಿದ್ದಾರೆ.

  ಬೆಂಗಳೂರು ಮಾತ್ರವಲ್ಲದೆ ಮೈಸೂರಿನಲ್ಲಿ ಮೂರು ಪ್ರದರ್ಶನ ನೀಡಿದ್ದೂ, ಅಲ್ಲಿಯೂ ಮೂರು ಹೌಸ್ ಫುಲ್ ಆಗಿದೆಯಂತೆ. 'ಒಳ್ಳೆಯ ಸಿನಿಮಾವನ್ನು ನಿಲ್ಲಿಸಬೇಕು ಎಂದು ನಿರ್ಧಾರ ಮಾಡಿದ ಜನರನ್ನು ನೋಡಿ ತುಂಬ ಖುಷಿಯಾಯ್ತು'' ಎಂದು ಕೃಷ್ಣ ಸಂತಸ ಹಂಚಿಕೊಂಡಿದ್ದಾರೆ.

  ನಟ ಸುದೀಪ್ ಸಹ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು, ''ಒಳ್ಳೆಯ ಸಿನಿಮಾಗೆ ಸಿಗಬೇಕಾದ ಪ್ರತಿಕ್ರಿಯೆ ಹಾಗೂ ಗಳಿಕೆ ಸಿಗದೆ ಇದ್ದರೆ ಬೇಸರ ಆಗುತ್ತದೆ. ಆದರೆ, ಕೊನೆಗೂ ಲವ್ ಮಾಕ್ ಟೈಲ್ ಭರವಸೆ ಮೂಡಿಸಿದೆ'' ಎಂದಿದ್ದಾರೆ.

  English summary
  Darling Kishna's 'Love Mocktail' Kannada movie theater increased.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X