ಅಕ್ಟೋಬರ್ 16ಕ್ಕೆ ಮತ್ತೆ 'ಲವ್ ಮೋಕ್ಟೆಲ್' ಸಿನಿಮಾ ಬಿಡುಗಡೆ

ಅಕ್ಟೋಬರ್ 15 ರಿಂದ ಚಿತ್ರಮಂದಿರಗಳು ಕಾರ್ಯಾರಂಭ ಮಾಡಬಹುದು ಎಂದು ಆದೇಶಿಸಿದೆ ಕೇಂದ್ರ ಸರ್ಕಾರ. ಆದರೆ ಹಲವು ನಿಯಮಗಳನ್ನು ಹೇರಿರುವ ಕಾರಣಕ್ಕೆ ಹೊಸ ಸಿನಿಮಾಗಳು, ಅದರಲ್ಲಿಯೂ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ಹಿಂದಡಿ ಇಟ್ಟಿದ್ದಾರೆ.

ಇದೇ ಸುವರ್ಣಾವಕಾಶವನ್ನು ಬಳಸಿಕೊಂಡು ಲಾಕ್‌ಡೌನ್ ಮುನ್ನಾ ಬಿಡುಗಡೆ ಆಗಿದ್ದ ಕೆಲವು ಸಿನಿಮಾಗಳು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಅದರಲ್ಲಿ ಪ್ರಮುಖವಾದುದು 'ಲವ್ ಮೋಕ್ಟೆಲ್'.

ಹೌದು, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ನಟನೆಯ ಸೂಪರ್ ಹಿಟ್ ಸಿನಿಮಾ 'ಲವ್ ಮೋಕ್ಟೆಲ್' ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಅಕ್ಟೋಬರ್ 16 ರಂದು ಆದಿ-ನಿಧಿ ಪ್ರೇಮ್ ಕಹಾನಿ ದೊಡ್ಡ ಪರದೆಗೆ ಪುನಃ ಬರಲಿದೆ.

ಈ ಬಗ್ಗೆ ಲವ್ ಮೋಕ್ಟೆಲ್ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿರುವುದಕ್ಕೆ ಸಾಕಷ್ಟು ಮಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಜನವರಿ 31 ರಂದು ಲವ್ ಮೋಕ್ಟೆಲ್ ಬಿಡುಗಡೆ ಆಗಿತ್ತು

ಜನವರಿ 31 ರಂದು ಲವ್ ಮೋಕ್ಟೆಲ್ ಬಿಡುಗಡೆ ಆಗಿತ್ತು

ಜನವರಿ 31 ರಂದು ಲವ್ ಮೋಕ್ಟೆಲ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿತ್ತು. ಉತ್ತಮ ವಿಮರ್ಶೆಗಳೇ ಸಿನಿಮಾಕ್ಕೆ ಬಂದಿತ್ತು. ಸಿನಿಮಾ ಸಾಧಾರಣ ಹಿಟ್ ಸಹ ಆಗಿತ್ತು. ಆದರೆ ಆ ನಂತರ ಲಾಕ್‌ಡೌನ್ ಬಂದ ಕಾರಣ ಲವ್ ಮಾಕ್ಟೆಲ್ ಹೆಚ್ಚು ಕಾಲ ಚಿತ್ರಮಂದಿರದಲ್ಲಿರಲಾಗಲಿಲ್ಲ.

ಅಮೆಜಾನ್ ಪ್ರೈಂ ನಲ್ಲಿ ಸಖತ್ ಹಿಟ್ ಆಗಿದ್ದ ಸಿನಿಮಾ

ಅಮೆಜಾನ್ ಪ್ರೈಂ ನಲ್ಲಿ ಸಖತ್ ಹಿಟ್ ಆಗಿದ್ದ ಸಿನಿಮಾ

ನಂತರ ಲವ್ ಮಾಕ್ಟೆಲ್ ಅನ್ನು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಮಾಡಲಾಯಿತು. ಅಮೆಜಾನ್ ಪ್ರೈಂ ನಲ್ಲಿ ಸಿನಿಮಾವನ್ನು ಲಕ್ಷಾಂತರ ಮಂದಿ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಸಿನಿಮಾವನ್ನು ಮರು ಬಿಡುಗಡೆ ಮಾಡುವಂತೆ ಆಗಲೇ ಒತ್ತಾಯ ಬಂದಿತ್ತು. ಅದರಂತೆ ಈಗ ಲವ್ ಮೋಕ್ಟೆಲ್ ಸಿನಿಮಾ ಮರು ಬಿಡುಗಡೆ ಆಗುತ್ತಿದೆ.

ದಿಯಾ ಸಿನಿಮಾವನ್ನೂ ಮರು ಬಿಡುಗಡೆ ಮಾಡುತ್ತಾರಾ?

ದಿಯಾ ಸಿನಿಮಾವನ್ನೂ ಮರು ಬಿಡುಗಡೆ ಮಾಡುತ್ತಾರಾ?

ಲವ್ ಮೋಕ್ಟೆಲ್ ನಂತೆ ದಿಯಾ ಸಿನಿಮಾ ಸಹ ಅಮೆಜಾನ್ ಪ್ರೈಂ ನಲ್ಲಿ ಸಖತ್ ಹಿಟ್ ಎನಿಸಿಕೊಂಡಿತ್ತು. ಅದನ್ನೂ ಸಹ ಮರು ಬಿಡುಗಡೆಗೆ ಒತ್ತಾಯಿಸಲಾಗಿತ್ತು. ದಿಯಾ ಸಿನಿಮಾವನ್ನೂ ಸಹ ಮರು ಬಿಡುಗಡೆ ಮಾಡಲಾಗುತ್ತದೆಯೇ ಕಾದು ನೋಡಬೇಕಿದೆ.

Recommended Video

ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada
ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲ

ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲ

ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಕೊಟ್ಟಿರುವ ಕಾರಣ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಈಗಾಗಲೇ ಹಿಟ್ ಆಗಿರುವ, ಅಥವಾ ಲಾಕ್‌ಡೌನ್‌ ಗೆ ಕೆಲ ವಾರದ ಮುಂಚೆ ಬಿಡುಗಡೆ ಆದ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

More from Filmibeat

English summary
Famous Kannada movie Love Mocktail to release in theater again on October 16th. Intialy it was released on January 31 this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X