ಪ್ರೇಕ್ಷಕರನ್ನು ಸೆಳೆಯಲು 'ಲವ್ ಯು ಟು' ತಂಡದ ಹೊಸ ತಂತ್ರ
'ಲವ್ ಯು 2' ಹೊಸ ಕಲಾವಿದರೆಲ್ಲರೂ ಸೇರಿ ಮಾಡಿರುವ ಸಿನಿಮಾ. ಚಿತ್ರೀಕಣ ಮುಗಿಸಿ ತೆರೆ ಬರಲು ಸಿದ್ದವಾಗಿರುವ 'ಲವ್ ಯು 2' ಚಿತ್ರತಂಡ ಪ್ರೇಕ್ಷಕರನ್ನು ಸಿನಿಮಾದತ್ತ ಆಕರ್ಷಣೆ ಮಾಡಲು ಹೊಸದೊಂದು ತಂತ್ರವನ್ನು ಕಂಡುಕೊಂಡಿದೆ.
ಸಿನಿಮಾ ನೋಡುವ ವೀಕ್ಷಕರು ಚಿತ್ರದ ಫಸ್ಟ್ ಹಾಫ್ ನ ಬಳಿಕ ಸಿನಿಮಾ ಕಥೆ ಮುಂದೇನಾಗುತ್ತದೆ ಎಂದು ಊಹಿಸಿ 'ಲವ್ ಯು 2' ಸಿನಿಮಾ ಪೇಜ್ ಗೆ ಪೋಸ್ಟ್ ಮಾಡಬೇಕು. ವೀಕ್ಷಕರು ಮಾಡಿದ ಊಹೆ ಬಹುತೇಕ 90ರಷ್ಟು ಸರಿಯಾಗಿದ್ದರೆ ಟಿಕೆಟ್ ದರ ಹಾಗೂ ಅಲ್ಲಿ ತೆಗೆದುಕೊಂಡ ಸ್ನ್ಯಾಕ್ಸ್ ದರವನ್ನು ಚಿತ್ರತಂಡವೇ ವಾಪಸ್ಸು ನೀಡುತ್ತಂತೆ.

ಇದೊಂದು ವಿಭಿನ್ನ ಪ್ರಯತ್ನವಾಗಿದ್ದು ಚಿತ್ರದ ಪ್ರಚಾರದ ಜೊತೆಯಲ್ಲಿ ಪ್ರೇಕ್ಷಕರನ್ನು ಕನ್ನಡ ಸಿನಿಮಾಗಳತ್ತ ಸೆಳೆಯುವ ತಂತ್ರವು ಇದಾಗಿದೆ. 'ಲವ್ ಯು 2' ಚಿತ್ರದಲ್ಲಿ
ಪವನ್ ಕುಮಾರ್ ಮತ್ತು ರಘುಭಟ್ ನಾಯಕರಾಗಿ ಅಭಿನಯ ಮಾಡಿದ್ದಾರೆ. ಕೀರ್ತಿ ಲಕ್ಷ್ಮಿ ನಾಯಕಿಯಾಗಿದ್ದು ಬಿ.ಕೆ ಮಹೇಶ್ ನಿರ್ದೇಶನ ಚಿತ್ರಕ್ಕಿದೆ.
ಈಗಾಗಲೇ ಹಾಡುಗಳಿಂದ ಸುದ್ದಿ ಆಗಿರುವ 'ಲವ್ ಯು 2' ಚಿತ್ರಕ್ಕೆ ಪವನ್ ಕುಮಾರ್ ಅವರೇ ಬಂಡವಾಳ ಹಾಕಿದ್ದಾರೆ. ಜುಲೈ 13 ಸಿನಿಮಾ ಬಿಡುಗಡೆ ಆಗುತ್ತಿದ್ದು ಹೊಸಬರ ವಿಶೇಷ ಪ್ರಮೋಷನ್ ತಂತ್ರ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











