'ಲವ್ ಯು ರಚ್ಚಿ' ಅಂತ ಡಿಂಪಲ್‌ ಕ್ವೀನ್‌ಗೆ ಪ್ರಪೋಸ್‌ ಮಾಡಿದವರು ಇವರೆ!

ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್‌ ಅವರು ತಮ್ಮ ಲವ್‌ ಸ್ಟೋರಿ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಅಷ್ಟೇ ಯಾಕೆ ತನಗೆ ಐ ಲವ್‌ ಯು ಎಂದಿರುವ ಆ ಹುಡುಗ ಯಾರು ಅಂತಲೂ ರಚಿತಾ ಬಾಯಿ ಬಿಟ್ಟಿಲ್ಲ. ಆದರೀಗ ಕನ್ನಡದ ಚಿತ್ರರಂಗದಲ್ಲಿ 'ಲವ್‌ ಯು ರಚ್ಚು, ಲವ್ ಯು ರಚ್ಚಿ' ಎನ್ನುವ ಸದ್ದು ಜೋರಾಗಿದೆ.

ಹಾಗಂತ ರಚಿತಾ ರಾಮ್‌ ಅವರಿಗೆ ಯಾರೋ ಬಂದು ಪ್ರಪೋಸ್ ಮಾಡುತ್ತಿಲ್ಲ. ಐ ಲವ್ ಯು ರಚಿತಾ ಅಂತ ಅವರ ಹಿಂದೆಯೂ ಬಿದ್ದಿಲ್ಲ. ಈ ಐ ಲವ್‌ ರಚ್ಚು ಅನ್ನೋ ಸದ್ದು ಕೇಳಿ ಬರುತ್ತಿರುವುದು 'ಲವ್ ಯು ರಚ್ಚು' ಚಿತ್ರದಿಂದ.

ಸದ್ಯ 'ಲವ್ ಯು ರಚ್ಚು' ಚಿತ್ರದ ಹಾಡೋಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ರಚಿತಾ ರಾಮ್ ಅವರನ್ನು ಹಾಡಿ ಹೊಗಳಲಾಗಿದೆ.

ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದ ಅಜಯ್ ರಾವ್!

ಡಿಂಪಲ್ ಹುಡುಗಿಗೆ ಡಾರ್ಲಿಂಗ್ ಎಂದ ಅಜಯ್ ರಾವ್!

ಲವ್ ಯು ರಚ್ಚು ಚಿತ್ರದ ಹೆಸರೇ ರಚಿತಾರಾಮ್‌ ಅವರ ಹೆಸರಿನ ಮೇಲಿದೆ. ಹಾಗಾಗಿ ಚಿತ್ರದಲ್ಲಿ ನಟಿ ರಚಿತಾ ಅವರದ್ದೇ ಮೇಲುಗೈ. ಸದ್ಯ ರಚಿತಾ ಅವರ ಕುರಿತಾದ ಚಿತ್ರದ ಹಾಡೊಂದು ರಿಲೀಸ್‌ ಆಗಿದೆ. ಇದು ಅತಿ ವಿಶೇಷವಾದ ಹಾಡು. ಯಾಕೆಂದರೆ ಈ ಹಾಡಿನಲ್ಲಿ ರಚಿತಾ ರಾಮ್‌ ಅವರನ್ನು ವರ್ಣಿಸಲಾಗಿದೆ.

'ಡಿಂಪಲ್... ಡಿಂಪಲ್ ಹುಡುಗಿ ನಿನ್ನ ಡಾರ್ಲಿಂಗ್ ಅನ್ಬೋದ' ಎನ್ನುವ ಸಾಲುಗಳೊಂದಿಗೆ ಹಾಡು ಆರಂಭ ಆಗುತ್ತದೆ. ಹಾಡಿನಲ್ಲಿ ಪೂರ್ತಿ ರಚಿತಾ ಅವರನ್ನು ವರ್ಣಿಸುವ ವರ್ಣ ಮಾಲೆಗಳಿವೆ. ಈ ಹಾಡು ರಚಿತಾ ರಾಮ್‌ ಅವರ ಅಭಿಮಾನಿಗಳಿಗೆ ತಪ್ಪದೆ ಇಷ್ಟವಾಗಿ ಬಿಡುತ್ತದೆ.

ಚೇತನ್ ಕುಮಾರ್ ಸಾಹಿತ್ಯಕ್ಕೆ ನವೀನ್ ಸಜ್ಜು ಧ್ವನಿ!

ಚೇತನ್ ಕುಮಾರ್ ಸಾಹಿತ್ಯಕ್ಕೆ ನವೀನ್ ಸಜ್ಜು ಧ್ವನಿ!

ನಿರ್ದೇಶಕ ಚೇತನ್‌ ಕುಮಾರ್ ಹಾಡೊಂದಕ್ಕೆ ಸಾಹಿತ್ಯ ಬರೆದಿದ್ದಾರೆ ಅಂದರೆ, ಅದು ವಿಭಿನ್ನವಾಗಿ ನಿಲ್ಲುತ್ತದೆ. ಈಗಾಗಲೇ ಚೇತನ್ ಸಾಹಿತ್ಯದಲ್ಲಿ ಬಂದ ಹಲವು ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ರಚ್ಚು ಹಾಡು ಕೂಡ ಹಿಟ್‌ ಹಾಡುಗಳ ಪಟ್ಟಿ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಇನ್ನು ಈ ಹಾಡಿಗೆ ಗಾಯಕ ನವೀನ್ ಸಜ್ಜು ಧ್ವನಿ ನೀಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತವೂ ಹಾಡಿನ ಪ್ಲಸ್ ಪಾಯಿಂಟ್ ಆಗಿದೆ.

ಹಾಡಿನ ಮೇಲೆ ನಿರೀಕ್ಷೆ ಮೂಡಿಸಿದ ಲಿರಿಕಲ್ ವೀಡಿಯೋ!

ಹಾಡಿನ ಮೇಲೆ ನಿರೀಕ್ಷೆ ಮೂಡಿಸಿದ ಲಿರಿಕಲ್ ವೀಡಿಯೋ!

ಸದ್ಯ ಈ ಹಾಡಿನ ಲಿರಿಕಲ್ ವಿಡಿಯೋ ಮಾತ್ರ ರಿಲೀಸ್‌ ಆಗಿದೆ. ಈ ಹಿಂದೆ ರಿಲೀಸ್‌ ಆಗಿದ್ದ ಚಿತ್ರದ ಫೊಟೋಗಳು ಮತ್ತು ಪೋಸ್ಟರ್‌ಗಳನ್ನೇ ಹಾಡಿನಲ್ಲಿ ಬಳಸಲಾಗಿದೆ. ಪ್ರಮುಖವಾಗಿ ಈ ಹಾಡಿನಲ್ಲಿ ರಚಿತಾ ರಾಮ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದನ್ನು ಚಿತ್ರ ತಂಡ ಗೌಪ್ಯವಾಗಿ ಇಟ್ಟಿದೆ. ಹಾಗಾಗಿ ರಚ್ಚು ಲುಕ್‌ ಬಗ್ಗೆಯೂ ಸಾಕಷ್ಟು ಕುತೂಹಲ ಮೂಡಿದೆ. ಇನ್ನು ಚಿತ್ರದಲ್ಲಿ ರಚಿತಾ ರಾಮ್ ಅವರಿಗೆ ನಟನಾಗಿ ಅಜಯ್ ರಾವ್ ಅಭಿನಯಿಸಿದ್ದಾರೆ. ಈ ಹಾಡನ್ನು ನಾಯಕಿಗಾಗಿ ಅಜಯ್‌ ರಾವ್ ಹಾಡುತ್ತಾರೆ. ಸಂಪೂರ್ಣ ಹಾಡು ಹೇಗೆ ಮೂಡಿ ಬರಲಿದೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ ಈ ಲಿರಿಕಲ್ ಹಾಡು.

ನಿರ್ಮಾಪಕ, ನಿರ್ದೇಶಕ ಗುರುದೇಶ್‌ ಪಾಂಡೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಶಾಂಕ್‌ ನಿರ್ದೇಶನದಲ್ಲಿ ಲವ್‌ ಯು ರಚ್ಚು ತಯಾರಾಗುತ್ತಿದೆ.

ವಿವಾದಗಳಿಂದಲೇ ಹೆಚ್ಚು ಗಮನ ಸೆಳೆದ 'ಲವ್ ಯು ರಚ್ಚು'!

ವಿವಾದಗಳಿಂದಲೇ ಹೆಚ್ಚು ಗಮನ ಸೆಳೆದ 'ಲವ್ ಯು ರಚ್ಚು'!

ಇನ್ನು 'ಲವ್ ಯು ರಚ್ಚು' ಚಿತ್ರದ ಮೂಲಕ ನಟಿ ರಚಿತಾ ರಾಮ್ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ಚಿತ್ರದ ಟೈಟಲ್ ಲಾಂಚ್‌ ಆದಾಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇನ್ನು ಟೈಟಲ್ ವಿಶೇಷ ಅಂದರೆ ರಚಿತಾ ರಾಮ್‌ ಅವರ ಸಿಗ್ನೇಚರ್ ಬಳಸಿ ಟೈಟಲ್‌ ಡಿಸೈನ್‌ ಮಾಡಲಾಗಿದೆ.

ಇತ್ತೀಚೆಗೆ ಚಿತ್ರದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕಾಗಿ ರಚಿತಾ ಸುದ್ದಿ ಆಗಿದ್ದರು. ನಾಯಕಿ ಆಗಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಚಿತಾ ಅವರನ್ನು ಪ್ರಶ್ನೆ ಮಾಡಲಾಗಿತ್ತು. ಆಗ ರಚ್ಚು ಕೊಂಚ ಖಾರವಾಗಿಯೇ ಮಾತನಾಡಿದ್ದರು. ಹಾಗಾಗಿ ಕೆಲದಿನ ರಚಿತಾ ಅವರು ಸುದ್ದಿಯಲ್ಲಿ ಇದ್ದರು.

ಅದೇನೆ ಇದ್ದರೂ ರಚಿತಾ ರಾಮ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಾವು ಮಾಡಬೇಕಾದ ಕೆಲಸಗಳ ಕಡೆಗೆ ಗಮನ ಕೊಟ್ಟಿದ್ದಾರೆ. ಎಲ್ಲಾ ವಿವಾದಗಳನ್ನೂ ಮೀರಿ 'ಲವ್ ಯು ರಚ್ಚು' ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಚಿತ್ರದ ರಿಲೀಸ್‌ಗಾಗಿ ರಚಿತಾ ರಾಮ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Love You Rachchu Movie New Song Making More Sound, the Song in on Rachitha Ram,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X