ಚಂದ್ರ ವಿವಾದಕ್ಕೆ ತುಪ್ಪ ಸುರಿದ ಪ್ರೇಮ್ ಕುಮಾರ್

By Rajendra
<ul id="pagination-digg"><li class="previous"><a href="/news/roopa-iyer-film-chandra-lands-in-controversy-074977.html">« Previous</a>

ಪತ್ರಿಕಾಗೋಷ್ಠಿಗೆ ರೂಪಾ ಅವರು ತಮ್ಮ ಮ್ಯಾನೇಜರ್ ಮೂಲಕ ವಿಷಯವನ್ನು ನಮ್ಮ ತಂದೆಯವರಿಗೆ ತಿಳಿಸಿದ್ದಾರೆ. ಅವರು ನನ್ನನ್ನೇ ನೇರವಾಗಿ ಸಂಪರ್ಕಿಸಬಹುದಿತ್ತಲ್ಲವೇ? ನಮ್ಮನ್ನು ಕರೆಯುವುದಕ್ಕೂ ಇಷ್ಟ ಇಲ್ಲ ಎಂದ ಮೇಲೆ ನಾವು ಹೇಗೆ ಹೋಗಲು ಸಾಧ್ಯ ಎಂದಿದ್ದಾರೆ ಪ್ರೇಮ್.

ಪ್ರಮೋಷನ್ ನಲ್ಲಿ ಯಶ್ ಅವರಿಗೆ ಅಗ್ರಸ್ಥಾನ ನೀಡಲಾಗಿದೆ ಎಂಬ ಬಗ್ಗೆಯೂ ಪ್ರೇಮ್ ಗರಂ ಆಗಿರುವುದು ನಿಜವೇ ಎಂದರೆ. "ನನ್ನ ಮಗಳೂ ಹಾಗೆಯೇ ಕೇಳುತ್ತಿದ್ದಾರೆ ಅಪ್ಪಾ ಚಿತ್ರದಲ್ಲಿ ನೀವಾ ಹೀರೋ ಯಶ್ ಅವರಾ? ಎಂದು. ಇದೇ ಡೌಟು ನನ್ನ ಅಭಿಮಾನಿಗಳಿಗೂ ಬರುತ್ತದೆ ತಾನೆ?

ಇದೇ ವಿಷಯವನ್ನು ರೂಪಾ ಬಳಿ ಪ್ರಸ್ತಾಪಿಸಿದೆ, ನಾನು ಹೇಳಿದಂತೆಯೇ ಆಗಬೇಕು. ಡೈರೆಕ್ಟರ್ ನೀನಾ ನಾನಾ? ಎನ್ನುತ್ತಿದ್ದರು. ಹೀರೋ ಎಂದರೆ ಏನೇನು ಲೆಕ್ಕಕ್ಕೆ ಇಲ್ಲ. ಎಲ್ಲಾ ನಾನೇ ಎಂಬಂತೆ ನಡೆದುಕೊಳ್ಳುತ್ತಿದ್ದರು ಎಂದು ಆರೋಪಗಳ ಸುರಿಮಳೆ ಮಾಡುತ್ತಾರೆ ಪ್ರೇಮ್.

ಇಷ್ಟು ದಿನ ಪ್ರಚಾರಕ್ಕಾಗಿ ಅವರು ಕರೆದಲ್ಲೆಲ್ಲಾ ಹೋಗಿದ್ದೇನೆ. ಈಗ ನನ್ನನ್ನು ಅವರು ನೇರವಾಗಿ ಆಹ್ವಾನಿಸಿಲ್ಲ. ಹಾಗಾಗಿ ತಾವು ಚಂದ್ರ ಪ್ರೆಸ್ ಮೀಟ್ ಗೆ ಹೋಗಿಲ್ಲ ಎನ್ನುತ್ತಾರೆ ಪ್ರೇಮ್. ಒಟ್ಟಾರೆಯಾಗಿ ಬೂದಿಮುಚ್ಚಿದ ಕೆಂಡದಂತಿದ್ದ 'ಚಂದ್ರ' ಚಿತ್ರದ ವಿವಾದ ಈಗ ಹೊತ್ತಿಕೊಂಡಿದೆ. ಈ ನೆಗಟೀವ್ ವಿವಾದ ಚಿತ್ರಕ್ಕೆ ಒಂದಷ್ಟು ಲಾಭವೂ ಆಗುತ್ತಿದೆ ಎಂಬುದಂತೂ ಸತ್ಯ.

ಇನ್ನು ಚಿತ್ರದ ಹೀರೋಯಿನ್ ಶ್ರೀಯಾ ಸರನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಚಿತ್ರದಲ್ಲಿ ಶ್ರೀಯಾ ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬ ಕಾರಣವೂ ಪ್ರೇಮ್ ಅವರ ಗೈರುಹಾಜರಿಗೆ ಇನ್ನೊಂದು ಕಾರಣ ಎನ್ನಲಾಗಿದೆ.

ಚಿತ್ರದಲ್ಲಿ ಶ್ರೀಯಾ ಸರನ್ ಅವರು ರಾಜಕುಮಾರಿ ಚಂದ್ರಾವತಿಯಾಗಿ ಹಾಗೂ ಚಂದ್ರಹಾಸನಾಗಿ ಪ್ರೇಮ್ ಅವರು ಸಾಮಾನ್ಯ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ರಾಯಲ್ ಲವ್ ಸ್ಟೋರಿಯೇ ಚಿತ್ರದ ಕಥಾವಸ್ತು. (ಒನ್ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/roopa-iyer-film-chandra-lands-in-controversy-074977.html">« Previous</a>

More from Filmibeat

English summary
Roopa Iyer's Trilingual film 'Chandra' lands in fresh controversy, which will be slated for release on 27th June. The films hero Lovely Star Prem Kumar has not been promoting for promotion, which has raising a lot of questions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X