twitter
    For Quick Alerts
    ALLOW NOTIFICATIONS  
    For Daily Alerts

    ನಿರ್ದೇಶಕರು-ಪ್ರೇಕ್ಷಕರಿಗೆ ವೇದಿಕೆ: 'ಲೂಸಿಯಾ' ಪವನ್ ವಿಶಿಷ್ಟ ಯೋಜನೆ ಆರಂಭ

    |

    ಸಿನಿಮಾರಂಗದಲ್ಲಿ ವಿವಿಧ ಬದಲಾವಣೆಗಳಿಗೆ ಪ್ರಯತ್ನಿಸುತ್ತಿರುವ 'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್, ಮತ್ತೊಂದು ಹೊಸ ವಿಶಿಷ್ಟ ಸಾಹಸಕ್ಕೆ ಕೈಹಾಕಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ತಮ್ಮದೇ ರೀತಿಯಲ್ಲಿ ದೇಣಿಗೆ ಸಂಗ್ರಹಿಸಿದ್ದ ಅವರು, ಸಿನಿಮಾ ಸೃಷ್ಟಿಕರ್ತರು ಮತ್ತು ಪ್ರೇಕ್ಷಕರನ್ನು ಹತ್ತಿರ ತರಲು ಮುಂದಾಗಿದ್ದಾರೆ.

    Recommended Video

    ದೊಡ್ಡವಳಾದ್ಲು ಯಶ್ ಮಗಳು...ಆಯ್ರಾ ಮಾಡ್ತಿರೋ ತಾಯಿ ಕೆಲ್ಸ ಸಖತ್ ಕ್ಯೂಟ್| Cute Ayra cuddling baby brother |Yash

    ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ (ಎಫ್‌ಯುಸಿ) ಎಂಬ ಹೊಸ ಯೋಜನೆಯನ್ನು ಪವನ್ ರೂಪಿಸಿದ್ದಾರೆ. ಈ ವೇದಿಕೆಯಲ್ಲಿ ಅನೇಕ ಜನಪ್ರಿಯ ನಿರ್ದೇಶಕರು ಹಾಗೂ ಸಿನಿಮಾ ಅಭಿಮಾನಿಗಳು ಚಿತ್ರಗಳು ಮತ್ತು ಪ್ರದರ್ಶನಗಳ ಕುರಿತು ಸಂವಾದ ನಡೆಸಲಿದ್ದಾರೆ. ಈ ಮೂಲಕ ಸಮಾನಮನಸ್ಕ ನಿರ್ದೇಶಕರು ಹಾಗೂ ಪ್ರೇಕ್ಷಕರು ಜತೆಗೂಡಿ ಸಿನಿಮಾ ನಿರ್ಮಾಣದ ಗಡಿಗಳನ್ನು ವಿಸ್ತರಿಸುವ, ಜತೆಯಾಗಿ ಸಿನಿಮಾ ನೋಡುವ, ಅದರ ಕುರಿತು ಕಲಿಯುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂದು ಪವನ್ ತಿಳಿಸಿದ್ದಾರೆ. ಮುಂದೆ ಓದಿ...

    ಸಂಪೂರ್ಣ ಸಿನಿಮಾಮಯ

    ಸಂಪೂರ್ಣ ಸಿನಿಮಾಮಯ

    ಈ ವೇದಿಕೆಯಲ್ಲಿ ಕ್ಲಬ್ ಸದಸ್ಯರಿಂದ ಸಿನಿಮಾ ನಿರ್ಮಾಣಕ್ಕೆ ಫಂಡ್ ಕೂಡ ಸಂಗ್ರಹವಾಗಲಿದ್ದು, ಈ ಹಣವನ್ನು ನಿರ್ದೇಶಕರು ಪ್ರಾಮಾಣಿಕ ಸಿನಿಮಾ ಮಾಡಲು ಲಭ್ಯವಾಗಲಿದೆ. ಕ್ಲಬ್ ಸದಸ್ಯರಿಗೆ ಎಕ್ಸ್‌ಕ್ಲ್ಯೂಸಿವ್ ಆದ ಕಂಟೆಂಟ್‌ಗಳನ್ನು ಇಲ್ಲಿ ತೋರಿಸಲಾಗುತ್ತದೆ. ಇಲ್ಲಿ ಸಿನಿಮಾಯೇತರ ಸಂಗತಿಗಳು ಚರ್ಚೆಯಾಗುವುದಿಲ್ಲ. ಸಿನಿಮಾ ವಿಶ್ಲೇಷಣೆ, ವಿಮರ್ಶೆ, ನಿರ್ದೇಶಕರ ಸಂದರ್ಶನಗಳು, ಸಿನಿಮಾ ಇತಿಹಾಸದ ಸ್ಮರಣೆ ಮುಂತಾದ ಚಟುವಟಿಕೆಗಳು ನಡೆಯಲಿವೆ.

    ನಿರ್ದೇಶಕ ಪವನ್ ಗೆ ಗೆಳೆಯರಾಗಿ, ಚಿತ್ರರಂಗ ಬದಲಾವಣೆಗೆ ಕಾರಣರಾಗಿನಿರ್ದೇಶಕ ಪವನ್ ಗೆ ಗೆಳೆಯರಾಗಿ, ಚಿತ್ರರಂಗ ಬದಲಾವಣೆಗೆ ಕಾರಣರಾಗಿ

    ನಿರ್ದೇಶಕರ ಪ್ರಾಜೆಕ್ಟ್ ಬಗ್ಗೆ ಚರ್ಚೆ

    ನಿರ್ದೇಶಕರ ಪ್ರಾಜೆಕ್ಟ್ ಬಗ್ಗೆ ಚರ್ಚೆ

    ಸಿನಿಮಾ ಪ್ರಾಜೆಕ್ಟ್‌ಗಳಿಗೆ ನಿರ್ದೇಶಕರೊಂದಿಗೆ ಸಹಭಾಗಿತ್ವ ಹೊಂದಲು ಸಹ ಇಲ್ಲಿ ಅವಕಾಶ ಸಿಗಲಿದೆ. ಸಿನಿಮಾ ಬಗ್ಗೆ ತಿಳಿಯಲು, ಕಲಿಯಲು ಇರುವ ಆಸಕ್ತರಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಎರಡೂ ರೀತಿಯ ವರ್ಕ್‌ಶಾಪ್ ನಡೆಸಲಾಗುತ್ತದೆ. ಅಷ್ಟೇ ಅಲ್ಲ, ನಿರ್ದೇಶಕರು ಇಲ್ಲಿ ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತಾಪಿಸಲಿದ್ದು, ಅವುಗಳ ಆಯ್ಕೆಗೆ ಕ್ಲಬ್ ಸದಸ್ಯರು ಮತ ಚಲಾಯಿಸುವ ಪ್ರಕ್ರಿಯೆ ಕೂಡ ಇದೆ.

    ಹೊಸ ತಲೆಮಾರಿನ ನಿರ್ದೇಶಕರು

    ಹೊಸ ತಲೆಮಾರಿನ ನಿರ್ದೇಶಕರು

    ನಿರ್ದೇಶಕರಾದ ಪವನ್ ಕುಮಾರ್, ಅರವಿಂದ್ ಶಾಸ್ತ್ರಿ, ಮನ್ಸೋರೆ, ಕೆಎಂ ಚೈತನ್ಯ, ಆದರ್ಶ್ ಈಶ್ವರಪ್ಪ, ಜಯತೀರ್ಥ, ಮುಂತಾದ ನಿರ್ದೇಶಕರು ಈಗಾಗಲೇ ಈ ಕ್ಲಬ್‌ನಲ್ಲಿ ಸೇರಿಕೊಂಡಿರುವ ನಿರ್ದೇಶಕರು. ಇನ್ನೂ ಅನೇಕ ಪ್ರಯೋಗಾತ್ಮಕ ಚಿತ್ರಗಳನ್ನು ನೀಡಿರುವ ನಿರ್ದೇಶಕರು ಈ ಬಳಗದಲ್ಲಿ ಇರಲಿದ್ದಾರೆ. ಇದರಿಂದ ಹೊಸ ಮಾದರಿಯ ಸಿನಿಮಾ ಪ್ರಯತ್ನಗಳಿಗೆ ಉತ್ತೇಜನ ಸಿಗಲಿದೆ.

    ನಿರ್ದೇಶಕ ಪವನ್ ಕುಮಾರ್ ಬದುಕನ್ನೇ ಬದಲಿಸಿದ ಆ ಕ್ಷಣನಿರ್ದೇಶಕ ಪವನ್ ಕುಮಾರ್ ಬದುಕನ್ನೇ ಬದಲಿಸಿದ ಆ ಕ್ಷಣ

    ಅನೇಕ ಚಟುವಟಿಕೆಗಳಿರಲಿವೆ

    ಅನೇಕ ಚಟುವಟಿಕೆಗಳಿರಲಿವೆ

    ಸಿನಿಮಾ ಬಗ್ಗೆ ಆಸಕ್ತರು ಒಂದೇ ವೇದಿಕೆಯಲ್ಲಿ ಸೇರುವ ಅವಕಾಶವಿದು. ಇಲ್ಲಿ ತಮಾಷೆಯಾಗಿ ಹರಟುತ್ತಾ, ಹೊಸ ಸಂಗತಿಗಳು, ಆವಿಷ್ಕಾರಗಳ ಬಗ್ಗೆ ಚರ್ಚಿಸುತ್ತಾ ಕಲಿಕೆ ನಡೆಯುತ್ತದೆ. ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಚಟುವಟಿಕೆಗಳು ನಡೆಯಲಿದ್ದು, ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಕೂಡ ಇದಕ್ಕೆ ಸಂಪರ್ಕಿಸಲಾಗಿದೆ. ಒಂದು ತಿಂಗಳಿನಿಂದ ಈ ಬಗ್ಗೆ ಮಾತನಾಡುತ್ತಿದ್ದೆ. ಈಗ ಅಧಿಕೃತವಾಗಿ ಇದು ಲಾಂಚ್ ಆಗಿದೆ ಎಂದು ಪವನ್ ತಿಳಿಸಿದ್ದಾರೆ.

    ಸಿನಿಮಾಕ್ಕೆ ವೇದಿಕೆ

    ಸಿನಿಮಾಕ್ಕೆ ವೇದಿಕೆ

    ಇಲ್ಲಿ ಸದಸ್ಯರಾದರೆ ಅವರಿಗೆ ಒಂದು ಸಿನಿಮಾ ವೀಕ್ಷಣೆಗೆ ಸಿಗುತ್ತದೆ. ನಿರ್ದೇಶಕರ ಜತೆ ಸಂವಾದ ನಡೆಸುವ ಅವಕಾಶ, ಸಿನಿಮಾ ಕುರಿತು ಜ್ಞಾನ ಪಡೆಯುವ ಸೌಲಭ್ಯ ಸಿಗುತ್ತದೆ, ಹಾಗೆಯೇ ಆ ನಿಧಿಯು ಚಿತ್ರ ನಿರ್ಮಾಣಕ್ಕೂ ಬಳಕೆಯಾಗುತ್ತದೆ. ಇನ್ನೂ ಅನೇಕ ಚಟುವಟಿಕೆಗಳು ಇಲ್ಲಿ ನಡೆಯಲಿದ್ದು, ಸಿನಿಮಾ ಆಸಕ್ತರು ನಿರ್ದೇಶನಕ್ಕೆ ಇಳಿಯಲು, ಅಪರೂಪದ ಸಿನಿಮಾಗಳನ್ನು ವಿಕ್ಷಿಸಲು, ಕುಳಿತಲ್ಲಿಂದಲೇ ಸಿನಿಮಾ ನಿರ್ಮಾಣ ಮಾಡುವುದು ಮುಂತಾದವುಗಳಿಗೆ ಎಫ್‌ಯುಸಿ ವೇದಿಕೆಯಾಗಲಿದೆ.

    ಕನ್ನಡಕ್ಕೊಂದು ಅಮೆಜಾನ್, ನೆಟ್‌ಫ್ಲಿಕ್ಸ್ ಮಾದರಿ ಓಟಿಟಿ, ಸದ್ದಿಲ್ಲದೆ ನಡೆಯುತ್ತಿದೆ ಪ್ರಯತ್ನಕನ್ನಡಕ್ಕೊಂದು ಅಮೆಜಾನ್, ನೆಟ್‌ಫ್ಲಿಕ್ಸ್ ಮಾದರಿ ಓಟಿಟಿ, ಸದ್ದಿಲ್ಲದೆ ನಡೆಯುತ್ತಿದೆ ಪ್ರಯತ್ನ

    English summary
    Lucia fame director Pawan Kumar has started a club Filmmakers United Club (FUC) for filmmakers and audience to bring them together.
    Tuesday, June 2, 2020, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X