For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್, ಕಾಲಿವುಡ್ ನಲ್ಲೂ ಲೂಸಿಯಾ ಕನಸು

  By Mahesh
  |

  ನಿರ್ದೇಶಕ ಪವನ್ ಕುಮಾರ್ ಅವರ ಲೂಸಿಯಾ ಚಿತ್ರ ದಕ್ಷಿಣ ಭಾರತದ ಚಿತ್ರರಂಗವನ್ನು ಸೆಳೆದಿದೆ. ಪ್ರೇಕ್ಷಕರೇ ಪ್ರಭುಗಳು ಎಂಬ ಕಾಲದಲ್ಲಿ ಸಾರ್ವಜನಿಕರೇ ಬಂಡವಾಳ ಹೂಡಿಕೆ ಮಾಡುವ ಮೂಲಕ ಹುಟ್ಟಿಕೊಂಡ ಲೂಸಿಯಾ ಎಂಬ ಕನಸು ಈಗ ತಮಿಳು, ತೆಲುಗು ಚಿತ್ರಗಳಲ್ಲೂ ನನಸಾಗಲಿದೆ.

  ಲೂಸಿಯಾ ಚಿತ್ರದ ರಿಮೇಕ್ ಹಕ್ಕುಗಳು ತಿರುಕುಮಾರನ್ ಎಂಟರ್ ಟೈನ್ಮೆಂಟ್ ಸಂಸ್ಥೆಯ ಸಿ.ವಿ ಕುಮಾರ್ ಅವರ ಪಾಲಾಗಿದೆ ಎಂಬ ಸುದ್ದಿ ಬಂದಿದೆ.

  ಮಾರ್ಕೆಟಿಂಗ್ ಮೊತ್ತವೂ ಸುಮಾರು 70 ಲಕ್ಷ ರು ಬಂಡವಾಳದಿಂದ ಲೂಸಿಯಾ ಚಿತ್ರ ಹುಟ್ಟಿಕೊಂಡಿತ್ತು. 51 ಲಕ್ಷ ಪ್ರೊಡೆಕ್ಷನ್ ಗೆ ಖರ್ಚಾಗಿದೆ. 6ನೇ ವಾರವೂ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿರುವ ಲೂಸಿಯಾ ಈ ವರೆಗೂ 4.5 ಕೋಟಿ ರು ಗಳಿಸಿದೆ ಎಂಬ ಮಾತಿದೆ.

  ಲೂಸಿಯಾ ಚಿತ್ರ ನೋಡಿ ಮೆಚ್ಚಿರುವ ಸಿವಿ ಕುಮಾರ್ ಅವರು ತಮಿಳು ಹಾಗೂ ತೆಲುಗು ಭಾಷೆಗೆ ಲೂಸಿಯಾವನ್ನು ತರಲು ರಿಮೇಕ್ ಹಕ್ಕುಗಳನ್ನು ಖರೀದಿಸಿದ್ದಾರಂತೆ. ಆದರೆ, ರಿಮೇಕ್ ಹಕ್ಕು ಎಷ್ಟಕ್ಕೆ ಮಾರಾಟವಾಗಿದೆ ಎಂಬುದರ ಮಾತಿಗೆ ಸದ್ಯಕ್ಕೆ ಸಿಕ್ಕಿಲ್ಲ. ರಿಮೇಕ್ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಯಾರು ನಿರ್ದೇಶಿಸಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ.

  ಲೂಸಿಯಾ ಪರಭಾಷೆ ಚಿತ್ರರಂಗಕ್ಕೆ ಕಾಲಿಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಪವನ್ ಕುಮಾರ್, ತಮಿಳು ಭಾಷೆ ಮೇಲೆ ಹಿಡಿತವಿರುವ ಅಲ್ಲಿನ ನಿರ್ದೇಶಕರೊಬ್ಬರ ಕೈಗೆ ಕನ್ನಡದ ಲೂಸಿಯಾವನ್ನು ನೀಡಲಾಗುತ್ತದೆ. ಚಿತ್ರದಲ್ಲಿ ಹೊಸಮುಖಗಳನ್ನು ಹಾಕಿಕ್ಳ್ಳಲಾಗುತ್ತದೆ. ಬಾಬ್ಬಿ ಸಿಂಹ ನಟಿಸಿದರೆ ಚೆನ್ನಾಗಿರುತ್ತದೆ. ನಾನು ಪ್ರೀ ಪ್ರೊಡೆಕ್ಷನ್ ಕಾರ್ಯದಲ್ಲಿ ಮಾತ್ರ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ.
  <blockquote class="twitter-tweet blockquote"><p>CV Kumar. . producer of Pizza n Soddu Kavam now officially holds the rights to make LUCIA in Tamil n Telugu. They... <a href="http://t.co/luGq5V2nz1">http://t.co/luGq5V2nz1</a></p>— Pawan Kumar (@actorinme) <a href="https://twitter.com/actorinme/statuses/389723699899006976">October 14, 2013</a></blockquote> <script async src="//platform.twitter.com/widgets.js" charset="utf-8"></script>

  ತಮಿಳಿನಲ್ಲಿ ಪಿಜ್ಜಾ(ಕನ್ನಡದ ವಿಶಲ್) ಸೂಧು ಕವ್ವಂ ನಂಥ ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ್ದ ಸಿವಿ ಕುಮಾರ್ ಅವರಿಗೆ ರಿಮೇಕ್ ಹಕ್ಕುಗಳನ್ನು ನೀಡಲಾಗಿದೆ ಎಂದು ಪವನ್ ಅವರು ಟ್ವೀಟ್ ಮಾಡಿದ್ದಾರೆ.

  English summary
  The remake rights of the cult Kannada film Lucia, have been procured by C.V.Kumar's Thirukumaran Entertainment. This movie directed by Pawan Kumar was made on a crowd funding model.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X