ಲೂಸಿಯ ನಿರ್ದೇಶಕ ಪವನ್ ಕುಮಾರ್ ಗೆ ಕೊರೊನಾ ಪಾಸಿಟಿವ್

ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪವನ್ ಕುಮಾರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಶ್ವಾಸಕೋಶ ಎಕ್ಸ್-ರೇ ಫೋಟೋವನ್ನು ಶೇರ್ ಮಾಡಿ ಕೊರೊನ ಪಾಸಿಟಿವ್ ಬಂದಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

Recommended Video

ಪವನ್ ಕುಮಾರ್ ದೇಹದೊಳಗೆ ಕರೆಯದೆ ಬಂದ ಅಥಿತಿ

ಅಂದಹಾಗೆ ಮತ್ತೆ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದೆ. ಈ ನಡುವೆ 3ನೇ ಅಲೆಯ ಆತಂಕ ಕೂಡ ಪ್ರಾರಂಭವಾಗಿದೆ. ಈಗಾಗಲೇ ಡೆಲ್ಟಾ ಪ್ಲಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ 2ನೇ ಅಲೆಯ ಭೀಕರ ಪರಿಸ್ಥಿತಿ ಎದುರಿಸಿರುವ ಭಾರತಕ್ಕೆ 3ನೇ ಅಲೆ ಮತ್ತಷ್ಟು ಭಯ ಸೃಷ್ಟಿ ಮಾಡಿದೆ. ಈಗಾಗಲೇ ಸರ್ಕಾರ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದು ಮತ್ತೆ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಮೊರೆ ಹೋಗಿದೆ. ಕರ್ನಾಟಕ ಸರ್ಕಾರ ಈಗಾಗಲೇ ರಾತ್ರಿ ಕರ್ಫ್ಯೂ ಮತ್ತು ವೀಕೆಂಡ್ ಲಾಕ್ ಡೌನ್ ಜಾರಿ ಮಾಡಿದ್ದು, ಅನಾವಶ್ಯಕ ಜನರ ಓಡಾಡಕ್ಕೆ ಬ್ರೇಕ್ ಹಾಕಿದೆ.

2ನೇ ಅಲೆ ಭೀಕರತೆಯ ಸಮಯದಲ್ಲಿ ಚಿತ್ರರಂಗದ ಅನೇಕರಿಗೆ ಕೊರೊನಾ ಸೋಂಕು ತಗುಲಿತ್ತು. ಸದ್ಯ ಲೂಸಿಯ ಪವನ್ ಕುಮಾರ್‌ಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಈ ಬಗ್ಗೆ ಪವನ್ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಜೊತೆಗೆ ಶ್ವಾಸಕೋಶದ ಫೋಟೋವನ್ನು ಶೇರ್ ಮಾಡಿದ್ದಾರೆ.

Lucia Pawan Kumar tests positive for Corona. He shares Information on Social Media

"ನನ್ನ ಸುಂದರ ಶ್ವಾಸಕೋಶದ ಚಿತ್ರ. ಇದು SARS Cov2 ಎನ್ನುವ ಸ್ವಾಗತ ಮಾಡದೆ ಬರುವ ಅತಿಥಿ. ಶ್ವಾಸಕೋಶಗಳು ಮತ್ತು ನನ್ನ ಉಳಿದವರು ಈ ಅತಿಥಿಯನ್ನು ಹೊರಹಾಕಲು ಸಾಕಷ್ಟು ಪ್ರಬಲವಾದ ಹೋರಾಟ ಮಾಡುತ್ತಿವೆ. ಮತ್ತು 14 ದಿನಗಳಲ್ಲಿ ಅದರ ಅಂತ್ಯವನ್ನು ಪಡೆಯುತ್ತವೆ. ನಾನು ಚೆನ್ನಾಗಿದ್ದೇನೆ ಮತ್ತು ಕೋಣೆಯಲ್ಲಿ ಬಂಧಿಯಾಗಿದ್ದು, ಹೆಚ್ಚಿನ ಸಮಯ ಮಲಗುತ್ತೇನೆ. ಪತ್ನಿ ಸೌಮ್ಯಾ ಕೇರ್ ಮಾಡುತ್ತಿದ್ದಾರೆ " ಎಂದು ಬರೆದುಕೊಂಡಿದ್ದಾರೆ.

ಅನೇಕರು ಬೇಗ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅಂದಹಾಗೆ ಪವನ್ ಕುಮಾರ್ ಇತ್ತೀಚಿಗೆ ಸಿನಿಮಾ ವಿಚಾರವಾಗಿ ಸಿಕ್ಕಾಪಟ್ಟೆ ಓಡಾಟದಲ್ಲಿದ್ದರು. ಇತ್ತೀಚಿಗಷ್ಟೆ ಪವನ್ ಕುಮಾರ್ ನಿರ್ದೇಶನದ ವೆಬ್ ಸರಣಿ 'ಕುಡಿ ಎಡಮೈತೆ' ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೆಬ್ ಸೀರಿಸ್‌ನಲ್ಲಿ ಖ್ಯಾತ ನಟಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಪವನ್ ಕುಮಾರ್ ವೆಬ್ ಸೀರಿಸ್ ನಿರ್ದೇಶನ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.

ವೆಬ್ ಸೀರಿಸ್ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಪವನ್ ಕುಮಾರ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಬಿಡುಗಡೆ ಮಾಡಿದ್ದು ಭಾರಿ ಕುತೂಹಲ ಮೂಡಿಸಿದ್ದಾರೆ. ಅಂದಹಾಗೆ ಪವನ್ ಕುಮಾರ್ ಮತ್ತು ಪುನೀತ್ ಕಾಂಬಿನೇಷನ್ ಸಿನಿಮಾಗೆ 'ದ್ವಿತ್ವ' ಎಂದು ಟೈಟಲ್ ಇಟ್ಟಿದ್ದು ನಿರೀಕ್ಷೆ ದುಪ್ಪಟ್ಟು ಮಾಡಿದೆ.

ಈಗಾಗಲೇ ಸಿನಿಮಾದ ಕೆಲಸ ಪ್ರಾರಂಭವಾಗಿದ್ದು, ಬಹುನಿರೀಕ್ಷೆಯ ಸಿನಿಮಾಗೆ ಪ್ರಸಿದ್ಧ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ. ಅಪರೂಪದ ಕಾಂಬಿನೇಷನ್ ಆದ ಪ್ರತಿಭಾವಂತ ನಿರ್ದೇಶಕ ಮತ್ತು ಅಧ್ಬುತ ನಟ ಇವರ ದ್ವಿತ್ವ ಸಿನಿಮಾ ಹೇಗಿರಲಿದೆ ಎನ್ನುವ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇನ್ನು ಚಿತ್ರದ ನಾಯಕಿ ಕೂಡ ಫಿಕ್ಸ್ ಆಗಿದ್ದಾರೆ. ಪವರ್ ಸ್ಟಾರ್ ಜೊತೆ ತಮಿಳು ನಟಿ ತ್ರಿಷಾ ಕೃಷ್ಣನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಪವರ್ ಸ್ಟಾರ್ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸುವ ಮೂಲಕ ಕನ್ನಡಕ್ಕೆ ಬಂದಿದ್ದ ತ್ರಿಷಾ 2ನೇ ಬಾರಿ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಅಂದಹಾಗೆ ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನು ಈ ಹಿಂದೆ ಎಂದೂ ನೋಡದ ರೀತಿಯಲ್ಲಿ ನೋಡಬಹುದು ಎಂಬ ನಿರೀಕ್ಷೆ ಇದೆ. ತ್ರಿಷಾ ಎಂಟ್ರಿಯಿಂದ ಈ ಸಿನಿಮಾ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಪುನೀತ್ ಸದ್ಯಕ್ಕೆ ಚೇತನ್ ಕುಮಾರ್ ನಿರ್ದೇಶನದಲ್ಲಿ 'ಜೇಮ್ಸ್' ಸಿನಿಮಾ ಮಾಡ್ತಿರುವ ಅಪ್ಪು, ಈ ಪ್ರಾಜೆಕ್ಟ್ ಮುಗಿಸಿ ದ್ವಿತ್ವ ಆರಂಭಿಸಲಿದ್ದಾರೆ. 'ಜೇಮ್ಸ್' ಕೊನೆಯ ಹಂತದಲ್ಲಿದೆ. ಅಷ್ಟರಲ್ಲಿ ಪವನ್ ಕುಮಾರ್ ಕೂಡ ಕೊರೊನಾದಿಂದ ಗುಣಮುಖರಾಗಿ ಚೇತರಿಸಿಕೊಂಡಿರುತ್ತಾರೆ.

More from Filmibeat

English summary
Lucia fame Pawan Kumar tests positive for Corona. He shares Information on Social Media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X