'ಲೂಸಿಯಾ' ನಿರ್ದೇಶಕನ ಜೊತೆ ಪುನೀತ್ ಹೊಸ ಸಿನಿಮಾ: ನಿರೀಕ್ಷೆ ಇಮ್ಮಡಿ

ಕಮರ್ಷಿಯಲ್ ಮಾದರಿಯ ಸಿನಿಮಾಗಳನ್ನೇ ಮಾಡುತ್ತಿದ್ದ ನಟ ಪುನೀತ್ ರಾಜ್‌ಕುಮಾರ್ ತಮ್ಮ 'ಕಂಫರ್ಟ್ ಝೋನ್' ಬಿಟ್ಟು ಹೊರಗೆ ಬರುವ ಮುನ್ಸೂಚನೆ ನೀಡಿದ್ದಾರೆ.

ಕತೆ, ನಿರೂಪಣೆಗೆ ಹೆಚ್ಚು ಒತ್ತು ಕೊಡುವ 'ಕಂಟೆಂಟ್ ಓರಿಯಂಟೆಡ್' ಸಿನಿಮಾಗಳನ್ನು ನಿರ್ದೇಶಿಸುವ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಹ ಇರಲಿದ್ದಾರೆ ಎನ್ನಲಾಗುತ್ತಿದೆ.

ಲೈಫು ಇಷ್ಟೇನೆ, ಲೂಸಿಯಾ, ಯೂ-ಟರ್ನ್ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್ ಕುಮಾರ್ ಪ್ರಸ್ತುತ ತೆಲುಗಿನಲ್ಲಿ 'ಕುಡಿ ಎಡಮೈತೆ' ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡಿ ಅದರ ಪ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ 'ಗಾಳಿಪಟ-2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

Lucia Pawan Kumar to Direct Movie For Puneeth Rajkumar

ಇನ್ನು ಪುನೀತ್ ರಾಜ್‌ಕುಮಾರ್ ಅವರು 'ಜೇಮ್ಸ್' ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾ ಅಂತಿಮ ಹಂತದಲ್ಲಿದೆ. ಇದರ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದಾದ ಬಳಿಕವಷ್ಟೆ ಪವನ್ ಜೊತೆಗಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಪುನೀತ್.

Recommended Video

ತೆಲುಗಿನಲ್ಲಿ ಯುವರತ್ನ ಹವಾ ನೋಡಿ ಶಾಕ್ ಆದ ಮಹೇಶ್ ಬಾಬು!! | Filmibeat Kannada

ಪವನ್-ಪುನೀತ್ ಜೋಡಿಯ ಸಿನಿಮಾವನ್ನು ದೊಡ್ಡ ಪ್ರೊಡಕ್ಷನ್ ಸಂಸ್ಥೆಯೊಂದು ನಿರ್ಮಾಣ ಮಾಡಲಿದೆ. ಸಿನಿಮಾದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೆ ಹೊರಬೀಳಬೇಕಿದೆ.

More from Filmibeat

English summary
Lucia, U-Turn fame Pawan Kumar to direct a movie for Puneeth Rajkumar. Actor Ganesh is also acting in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X