13 ದಿನಕ್ಕೆ ನರ್ತಕಿಯಿಂದ ಲಕ್ಕಿಮ್ಯಾನ್ ಔಟ್; ಕೆಜಿ ರಸ್ತೆಯ ಯಾವ ಥಿಯೇಟರ್‌ನಲ್ಲಿ ಯಾವ ಸಿನಿಮಾ?
ಇದೇ ತಿಂಗಳ 9ರಂದು ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಹಾಗೂ ರೋಶಿಣಿ ಪ್ರಕಾಶ್ ಅಭಿನಯದ ಲಕ್ಕಿ ಮ್ಯಾನ್ ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡಿತ್ತು. ಈ ಚಿತ್ರದ ಮೂಲಕ ಹತ್ತಾರು ತಿಂಗಳುಗಳಿಂದ ನರ್ತಕಿ ಥಿಯೇಟರ್ ಪುನರಾರಂಭಗೊಂಡು ಅದೆಷ್ಟೋ ದಿನಗಳ ಬಳಿಕ ಈ ಚಿತ್ರಮಂದಿರದ ಮುಂದೆ ಸಿನಿ ಪ್ರೇಕ್ಷಕರ ನೂಕು ನುಗ್ಗಲು ಹಾಗೂ ಟ್ರಾಫಿಕ್ ಜಾಮ್ ಕಂಡುಬಂದಿತ್ತು.
ಇದಕ್ಕೆಲ್ಲಾ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹೌದು, ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರದಲ್ಲಿ ಬೇರೆ ಅಭಿನಯಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳನ್ನು ಕಾಯುವಂತೆ ಮಾಡಿತ್ತು. ಇನ್ನು ಈ ಚಿತ್ರ ಬಿಡುಗಡೆಯ ಹಿಂದಿನ ದಿನವೇ ಪ್ರೀಮಿಯರ್ ಶೋಗಳು ಏರ್ಪಡಿಸಲಾಗಿದ್ದರೂ ಸಹ ಅಪ್ಪು ನೆಚ್ಚಿನ ನರ್ತಕಿ ಚಿತ್ರಮಂದಿರದ ಮಾರ್ನಿಂಗ್ ಶೋ ನೆಕ್ಸ್ಟ್ ಲೆವೆಲ್‌ನಲ್ಲಿತ್ತು.
ಹೀಗೆ ಭರ್ಜರಿಯಾಗಿ ಬಿಡುಗಡೆಯಾದ ಲಕ್ಕಿಮ್ಯಾನ್ ಇಂದು (ಸೆಪ್ಟೆಂಬರ್ 23 ) ತೆರೆಕಂಡ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರಕ್ಕೆ ನರ್ತಕಿ ಚಿತ್ರಮಂದಿರವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ 13 ದಿನಗಳಿಗೆ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ತನ್ನ ಓಟವನ್ನು ನಿಲ್ಲಿಸಿದೆ. ಆದರೆ, ರಾಜ್ಯದ ಉಳಿದ ಚಿತ್ರಮಂದಿರಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಲಕ್ಕಿಮ್ಯಾನ್ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈ ಮುಖ್ಯ ಚಿತ್ರಮಂದಿರದ ಕಾನ್ಸೆಪ್ಟ್ ಔಟ್‌ಡೇಟೆಡ್ ಎಂಬುದು ಮತ್ತೊಮ್ಮೆ ಸಾಬೀತುಗೊಂಡಿದೆ.

ಇನ್ನು ಬೆಂಗಳೂರಿನ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಯಾವ ಸಿನಿಮಾಗಳು ಸದ್ಯ ಪ್ರದರ್ಶನಗೊಳ್ಳುತ್ತಿವೆ ಎಂಬುದರ ಮಾಹಿತಿ ಇಲ್ಲಿದೆ:
( ಸೆಪ್ಟೆಂಬರ್ 23ರ ವೇಳೆಗೆ )
* ಸಂತೋಷ್: ಮನ್ಸೂನ್ ರಾಗ
* ನರ್ತಕಿ: ಗುರು ಶಿಷ್ಯರು
* ಭೂಮಿಕಾ: ಕೃಷ್ಣ ವ್ರಿಂದಾ ವಿಹಾರಿ, ಅಲ್ಲೂರಿ ಹಾಗೂ ದೊಂಗಲುನ್ನಾರು ಜಾಗ್ರತ
* ಅಭಿನಯ: ಚುಪ್ - ದ ರಿವೆಂಜ್ ಆಫ್ ಅರ್ಟಿಸ್ಟ್ ಹಾಗೂ ಅಲ್ಲುರಿ
* ಅನುಪಮ: ರಾಜ ರಾಣಿ ರೋರರ್ ರಾಕೆಟ್


Click it and Unblock the Notifications











