For Quick Alerts
  ALLOW NOTIFICATIONS  
  For Daily Alerts

  13 ದಿನಕ್ಕೆ ನರ್ತಕಿಯಿಂದ ಲಕ್ಕಿಮ್ಯಾನ್ ಔಟ್; ಕೆಜಿ ರಸ್ತೆಯ ಯಾವ ಥಿಯೇಟರ್‌ನಲ್ಲಿ ಯಾವ ಸಿನಿಮಾ?

  |

  ಇದೇ ತಿಂಗಳ 9ರಂದು ಡಾರ್ಲಿಂಗ್ ಕೃಷ್ಣ, ಸಂಗೀತ ಶೃಂಗೇರಿ ಹಾಗೂ ರೋಶಿಣಿ ಪ್ರಕಾಶ್ ಅಭಿನಯದ ಲಕ್ಕಿ ಮ್ಯಾನ್ ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡಿತ್ತು. ಈ ಚಿತ್ರದ ಮೂಲಕ ಹತ್ತಾರು ತಿಂಗಳುಗಳಿಂದ ನರ್ತಕಿ ಥಿಯೇಟರ್ ಪುನರಾರಂಭಗೊಂಡು ಅದೆಷ್ಟೋ ದಿನಗಳ ಬಳಿಕ ಈ ಚಿತ್ರಮಂದಿರದ ಮುಂದೆ ಸಿನಿ ಪ್ರೇಕ್ಷಕರ ನೂಕು ನುಗ್ಗಲು ಹಾಗೂ ಟ್ರಾಫಿಕ್ ಜಾಮ್ ಕಂಡುಬಂದಿತ್ತು.

  ಇದಕ್ಕೆಲ್ಲಾ ಕಾರಣ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಹೌದು, ಈ ಚಿತ್ರದಲ್ಲಿ ಅಪ್ಪು ದೇವರ ಪಾತ್ರದಲ್ಲಿ ಬೇರೆ ಅಭಿನಯಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳನ್ನು ಕಾಯುವಂತೆ ಮಾಡಿತ್ತು. ಇನ್ನು ಈ ಚಿತ್ರ ಬಿಡುಗಡೆಯ ಹಿಂದಿನ ದಿನವೇ ಪ್ರೀಮಿಯರ್ ಶೋಗಳು ಏರ್ಪಡಿಸಲಾಗಿದ್ದರೂ ಸಹ ಅಪ್ಪು ನೆಚ್ಚಿನ ನರ್ತಕಿ ಚಿತ್ರಮಂದಿರದ ಮಾರ್ನಿಂಗ್ ಶೋ ನೆಕ್ಸ್ಟ್ ಲೆವೆಲ್‌ನಲ್ಲಿತ್ತು.

  ಹೀಗೆ ಭರ್ಜರಿಯಾಗಿ ಬಿಡುಗಡೆಯಾದ ಲಕ್ಕಿಮ್ಯಾನ್ ಇಂದು (ಸೆಪ್ಟೆಂಬರ್ 23 ) ತೆರೆಕಂಡ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರಕ್ಕೆ ನರ್ತಕಿ ಚಿತ್ರಮಂದಿರವನ್ನು ಬಿಟ್ಟುಕೊಟ್ಟಿದೆ. ಈ ಮೂಲಕ 13 ದಿನಗಳಿಗೆ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿ ತನ್ನ ಓಟವನ್ನು ನಿಲ್ಲಿಸಿದೆ. ಆದರೆ, ರಾಜ್ಯದ ಉಳಿದ ಚಿತ್ರಮಂದಿರಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಲಕ್ಕಿಮ್ಯಾನ್ ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈ ಮುಖ್ಯ ಚಿತ್ರಮಂದಿರದ ಕಾನ್ಸೆಪ್ಟ್ ಔಟ್‌ಡೇಟೆಡ್ ಎಂಬುದು ಮತ್ತೊಮ್ಮೆ ಸಾಬೀತುಗೊಂಡಿದೆ.

  ಇನ್ನು ಬೆಂಗಳೂರಿನ ಕೆಜಿ ರಸ್ತೆಯ ಚಿತ್ರಮಂದಿರಗಳಲ್ಲಿ ಯಾವ ಸಿನಿಮಾಗಳು ಸದ್ಯ ಪ್ರದರ್ಶನಗೊಳ್ಳುತ್ತಿವೆ ಎಂಬುದರ ಮಾಹಿತಿ ಇಲ್ಲಿದೆ:

  ( ಸೆಪ್ಟೆಂಬರ್ 23ರ ವೇಳೆಗೆ )

  * ಸಂತೋಷ್: ಮನ್ಸೂನ್ ರಾಗ

  * ನರ್ತಕಿ: ಗುರು ಶಿಷ್ಯರು

  * ಭೂಮಿಕಾ: ಕೃಷ್ಣ ವ್ರಿಂದಾ ವಿಹಾರಿ, ಅಲ್ಲೂರಿ ಹಾಗೂ ದೊಂಗಲುನ್ನಾರು ಜಾಗ್ರತ

  * ಅಭಿನಯ: ಚುಪ್ - ದ ರಿವೆಂಜ್ ಆಫ್ ಅರ್ಟಿಸ್ಟ್ ಹಾಗೂ ಅಲ್ಲುರಿ

  * ಅನುಪಮ: ರಾಜ ರಾಣಿ ರೋರರ್ ರಾಕೆಟ್

  English summary
  Puneeth Rajkumar's Lucky man removed from Narthaki and Guru Shishyaru released
  Friday, September 23, 2022, 18:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X