ದೇವ್ರಾಣೆ ಚಿತ್ರದ ಬಗ್ಗೆ ಲಕ್ಕಿ ಶಂಕರ್ ಮಾತುಗಳು
Next »
« Previous
Lucky Shankar
ಸಿನಿಮಾಟೋಗ್ರಫಿ ಮಾಡಬೇಕೆಂದು ಆಸೆಪಟ್ಟಿದ್ದೆ. ಆದರೆ, ಮನೆಯವರ ಸಲಹೆಯಂತೆ 'ಡಿ ಫಾರ್ಮಸಿ' ಓದಿ ಕೆಲಕಾಲ ಕೆಲಸಕ್ಕೆ ಸೇರಿಕೊಂಡೆ. ಆದರೆ ಸಿನಿಮಾ ಸೆಳೆತವೇ ನನಗೆ ಹೆಚ್ಚಾಗಿತ್ತು. ನಾನು ಮೊಟ್ಟಮೊದಲು ನೋಡಿದ ಸಿನಿಮಾಗಳಾದ 'ಶ್!' ಹಾಗೂ ಉಪೇಂದ್ರ ನಿರ್ದೇಶನ ಹಾಗೂ ಶಿವರಾಜ್ ಕುಮಾರ್ ನಾಯಕತ್ವದ 'ಓಂ' ನನ್ನ ಮೇಲೆ ಗಾಢ ಪ್ರಭಾವ ಬೀರಿದವು. ಕೆಲಸ ತೊರೆದು ಕಿರುತೆರೆ ಉದ್ಯಮದಲ್ಲಿ ಕೆಲಸ ಹುಡುಕಿ ಹೊರಟೆ.
*ನಿಮ್ಮ ಬಣ್ಣದ ಬದುಕು ಪ್ರಾರಂಭವಾದದ್ದು ಹೇಗೆ?
ಡಿಡಿ1 ನಲ್ಲಿ 'ಪಾಲ್ ಸುದರ್ಶನ್' ನಿರ್ದೇಶನದಲ್ಲಿ ಮೂಡಿಬರುತ್ತಿದ್ದ ಸೀರಿಯಲ್ ಪ್ರೊಡಕ್ಷನ್ ವಿಭಾಗ ಸೇರಿಕೊಂಡೆ. ಅಲ್ಲಿ 'ಸ್ಕ್ರಿಪ್ಟ್' ಹಾಗೂ ತಾಂತ್ರಿಕ ವಿಭಾಗಗಳ ಕೆಲಸ ಕಲಿತುಕೊಂಡೆ. ಆ ವೇಳೆಯಲ್ಲಿ ಚಂದನಕ್ಕೆ '1 ತಾಸಿನ ಟೆಲಿಫಿಲಂ' ಮಾಡಿದ್ದೆ. ಅಲ್ಲಿಂದ ಮುಂದೆ ನಟ, ನಿರ್ದೇಶಕ ರವಿಕಿರಣ್ ನಿರ್ದೇಶನದ 'ಗೂಡಿಗೆ ಬಂದ ಹಕ್ಕಿಗಳು', ಉದಯ ಟಿವಿಯಲ್ಲಿ ಪ್ರಸಾರವಾದ ಕನ್ನಡದ ಮೊಟ್ಟಮೊದಲ ಮೆಗಾ ಧಾರಾವಾಹಿ 'ಶಕ್ತಿ'ಗೆ ಕ್ಯಾಮರಾ ಹಾಗೂ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದೆ.
ನಂತರ ಖ್ಯಾತ ರಂಗಕಲಾವಿದ ಹಾಗೂ ನಿರ್ದೇಶಕ 'ಜಿ ವಿ ಅಯ್ಯರ್' ಜೊತೆ ಕೆಲಸ ಮಾಡುವ ಅದೃಷ್ಟ ನನ್ನದಾಯಿತು. 'ನಾಟ್ಯರಾಣಿ ಶಾಂತಲಾ' ಹಾಗೂ 'ಕೃಷ್ಣಲೀಲೆ' ಧಾರಾವಾಹಿಗಳಿಗೆ ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿದೆ. ನಂತರ ಬಂದ ಜಿವಿ ಅಯ್ಯರ್ ನಿರ್ದೇಶನದ 'ಕಾದಂಬರಿ' ಧಾರಾವಾಹಿಗೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದೆ.
ಜಿವಿ ಅಯ್ಯರ್ ಸಾಯುವ ಪೂರ್ವದಲ್ಲಿ 'ರಾಮಾಯಣ- ಫಾರ್ ದ ವರ್ಲ್ಡ್' ಹೆಸರಿನ ಮಹಾನ್ ಕೃತಿಯನ್ನು ಹೊರತರುವ ಸಾಹಸದಲ್ಲಿ ನಿರತರಾಗಿದ್ದರು. ಅದರಲ್ಲಿ ನಾನೂ ಕೂಡ ಕೆಲಸ ಮಾಡುತ್ತಿದ್ದೆ. ಆದರೆ ಜಿವಿ ಅಯ್ಯರ್ ಅದೇ ವೇಳೆ ದಿವಂಗತರಾಗಿದ್ದರಿಂದ ಆ ಪ್ರಾಜೆಕ್ಟ್ ನಿಂತುಹೋಯಿತು. ನಂತರ ನಾನು ಸಿನಿಮಾ ಕಡೆ ಮುಖ ಮಾಡಿದೆ.
*ಸಿನಿಮಾ ನಿರ್ದೇಶನದ ಪ್ರಾರಂಭ ಹಾಗೂ ಜರ್ನಿ ಬಗ್ಗೆ ಹೇಳಿ...
2004 ರಲ್ಲಿ ನಾನು ಸ್ವತಂತ್ರವಾಗಿ ನಿರ್ದೇಶನ ಮಾಡಿದ 'ಗಾಂಧಿನಗರ' ಚಿತ್ರದ ಮೂಲಕ ನಾನು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡೆ. ನಂತರ 'ಜಮಾನಾ' ಹಾಗೂ '90' ಚಿತ್ರ ಮಾಡಿದೆ. 'ಜಮಾನಾ' ಚಿತ್ರ ತಕ್ಕಮಟ್ಟಿಗೆ ಯಶಸ್ವಿಯಾದರೆ '90' ಚಿತ್ರ ನನಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿದೆ. '90' ಚಿತ್ರದ ನಂತರ ಲಕ್ಕಿ ಶಂಕರ್ ಎಂಬ ನನ್ನ ಹೆಸರು ಉದ್ಯಮದಲ್ಲಿ ಬಹಳಷ್ಟು ಓಡಾಡತೊಡಗಿದೆ ಎಂಬುದು ಹಲವರ ಅಭಿಪ್ರಾಯವೂ ಆಗಿದೆ. ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X