ಸದ್ಯದಲ್ಲೇ ಲಕ್ಕಿ ಶಂಕರ್ ಕನಸಿನ 'ಓಂ- 2012'

<ul id="pagination-digg"><li class="previous"><a href="/news/kannada-movie-devrane-lucky-shankar-interview-068690.html">« Previous</a>

Lucky Shankar
ಇವೆಲ್ಲಕ್ಕೂ ಮಿಗಿಲಾದ ಹಾಗೂ ವಿಭಿನ್ನವಾದ ಕೆಲಸವೊಂದು ಕಾರ್ಯರೂಪದಲ್ಲಿದೆ. 'ಶಿವಶಂಕರ್ ಫಿಲಂ ಫ್ಯಾಕ್ಟರಿ' ಎಂಬ ಹೆಸರಿನ ಸಂಸ್ಥೆಯನ್ನು ನಾನು ಹಾಗೂ ನನ್ನ ಸ್ನೇಹಿತ 'ಶಿವು ಕಬ್ಬಿಣ' ಸೇರಿ ಪ್ರಾರಂಭಿಸಿದ್ದೇವೆ. ಸಿನಿಮಾದ ಎಲ್ಲಾ ವಿಭಾಗಗಳ ಕೆಲಸ ಇಲ್ಲಿ ನಡೆಯುವಂತೆ ಇದ್ದು ಅದಕ್ಕೆ ಬೇಕಾದ ಸಕಲ ಸೌಲಭ್ಯಗಳನ್ನು ಇಲ್ಲಿ ಮಾಡಲಿದ್ದೇವೆ.

ಈಗಾಗಲೇ ಸಾಕಷ್ಟು ಸೌಲಭ್ಯಗಳಿದ್ದು ಇಲ್ಲಿ ಸಿನಿಮಾಕ್ಕೆ ಸಂಬಂಧಿಸಿದ 'ಪ್ರೀ' ಹಾಗೂ 'ಪೋಸ್ಟ್ ಪ್ರೊಡಕ್ಷನ್' ಕೆಲಸಗಳು ನಡೆಯುತ್ತಿವೆ. ಈ ಸಂಸ್ಥೆ ಮೂಲಕ, ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಹಾಗೂ ಬರಲಿರುವ ಸಿನಿಮಾ ಆಸಕ್ತರು, ಸಿನಿಮಾಕರ್ಮಿಗಳು ಹಾಗೂ ತಂತ್ರಜ್ಞರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ.

*ಭವಿಷ್ಯದ ಕನಸು...

ಇದೆ ಖಂಡಿತ (ನಗು..). ನಮ್ಮ ಈ ಬಣ್ಣದ ಬದುಕು ನಡೆಯವುದೇ ಕನಸಿನ ಬೆನ್ನೇರಿದಾಗ. ನನಗಂತೂ ಸಾಕಷ್ಟು ಕನಸಿದೆ. ಅದರಲ್ಲೂ ನಾನು ಈ ಉದ್ಯಮಕ್ಕೆ ಬಂದಾಗ ಈಗಿನಂತೆ ಟೆಕ್ನಾಲಜಿಯಾಗಲೀ ಅವಕಾಶಗಳಾಗಲೀ ಸರಿಯಾಗಿ ಲಭ್ಯವಿರಲಿಲ್ಲ. ಆದರೆ ಈಗ ಬರುವವರಿಗೆ ಹಾಗಾಗಬಾರದು. ಈ ಕಾಳಜಿ ಹಾಗೂ ಉದ್ದೇಶದಿಂದಲೇ ಈ ನಮ್ಮ ಶಿವಶಂಕರ್ ಫಿಲಂ ಫ್ಯಾಕ್ಟರಿ ಹುಟ್ಟಿಕೊಂಡಿದೆ.

ಈ ನಿಟ್ಟಿನಲ್ಲಿ ನಮ್ಮದೊಂದು ಟೀಮ್ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇವೆ. ಸಂಸ್ಥೆಯನ್ನು ಇನ್ನೂ ಚೆನ್ನಾಗಿ ಬೆಳೆಸಬೇಕಾಗಿದೆ. ಜೊತೆಗೆ ಕನ್ನಡ ಚಿತ್ರಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಗೆಲ್ಲುವಂತಾಗಬೇಕು. ನಮ್ಮ ಸಂಸ್ಥೆ ಸಾಕಷ್ಟು ಜನರಿಗೆ ಕೆಲಸ ನೀಡಿ ಅವರ ಕಸನು, ಸಾಧನೆಗೆ ಆಧಾರವಾಗಬೇಕು. ನಮ್ಮ ಕಾಲ ಮುಗಿದ ಮೇಲೂ ಈ ಸಂಸ್ಥೆ ಚೆನ್ನಾಗಿ ನಡೆಯುತ್ತಿರಬೇಕು. ಅದೇ ನನ್ನ ಕನಸು ಹಾಗೂ ಗುರಿ.

ಈ ನಮ್ಮ 'ಶಿವಶಂಕರ್ ಫಿಲಂ ಫ್ಯಾಕ್ಟರಿ' ಮೂಲಕ ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡಲು ಈಗಾಗಲೆ ಸ್ಕ್ರಿಪ್ಟ್ ಕಾರ್ಯ ಆರಂಭಿಸಿದ್ದೇವೆ. ಅದು ನಮ್ಮ ಕನಸಿನ ಪ್ರಾಜೆಕ್ಟ್, ಹೆಸರು 'ಓಂ- 2012'. ಸದ್ಯ ನಮ್ಮ ಕೈಯಲ್ಲಿರುವ ಕೆಲಸ ಮುಗಿದ ತಕ್ಷಣ ಆ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇವೆ. ಹೀಗೇ ನನ್ನ ಕಸನುಗಳು ಒಂದಾದ ಮೇಲೆ ಇನ್ನೊಂದರಂತೆ ಕಾರ್ಯರೂಪಕ್ಕೆ ಬರಲಿವೆ.

***

<ul id="pagination-digg"><li class="previous"><a href="/news/kannada-movie-devrane-lucky-shankar-interview-068690.html">« Previous</a>

More from Filmibeat

English summary
Kannada Director Lucky Shankar, 90 Fame directed upcoming movie 'Devrane' is in exclusive News recently. This 'Jamana' director talked about his movies and carrier in this Interview. Read this Interview for more about the director Lucky Shankar... &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X