ಇದು ಅಪ್ಪು ಅಸಲಿ ಪವರ್‌: ರಿಲೀಸ್‌ಗೂ ಮೊದಲೇ 'ಲಕ್ಕಿಮ್ಯಾನ್' ಹೊಸ ದಾಖಲೆ!

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ಕೊನೆಯ ಸಿನಿಮಾಗಳಲ್ಲಿ 'ಲಕ್ಕಿಮ್ಯಾನ್' ಕೂಡ ಒಂದು. ಈಗಾಗಲೇ ಚಿತ್ರದ ಟೀಸರ್, ಸಾಂಗ್ ರಿಲೀಸ್ ಆಗಿ ಗಮನ ಸೆಳೆದಿದೆ. ಮುಂದಿನ ತಿಂಗಳು ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸದ್ಯ 'ಲಕ್ಕಿಮ್ಯಾನ್' ದಾಖಲೆಗಳ ಪರ್ವ ಶುರುವಾಗಿದೆ.

ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ಮಿಂಚಿದ್ದಾರೆ. ದಿವಂಗತ ಪುನೀತ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭುದೇವಾ ಹಾಗೂ ಪವರ್ ಸ್ಟಾರ್ ಹಾಡೊಂಡಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ಮೇಕಿಂಗ್‌ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿದೆ.

ಪುನೀತ್‌ ರಾಜ್‌ಕುಮಾರ್ ಕೊನೆಯ ಸಿನಿಮಾಗಳನ್ನು ದೊಡ್ಡಮಟ್ಟದಲ್ಲಿ ನೋಡಿ ಅಭಿಮಾನಿಗಳು ನೆಚ್ಚಿನ ನಟನಿಗೆ ಒಳ್ಳೆ ಸೆಂಡಾಫ್ ನೀಡುತ್ತಿದ್ದಾರೆ. ಅದಕ್ಕೆ 'ಜೇಮ್ಸ್' ಸಿನಿಮಾ ಉತ್ತಮ ಉದಾಹರಣೆ. 'ಗಂಧದಗುಡಿ' ಸಾಕ್ಷ್ಯಚಿತ್ರ ಬಿಟ್ಟರೆ ಅಪ್ಪು ನಟಿಸಿರೋ ಕೊನೆಯ ಕಮರ್ಷಿಯಲ್ ಸಿನಿಮಾ 'ಲಕ್ಕಿಮ್ಯಾನ್'. ಹಾಗಾಗಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್‌ ಶುರುವಾಗಿದೆ.

 ವಿತರಣೆ ಹಕ್ಕು ಒಂದೇ ದಿನಕ್ಕೆ ಸೋಲ್ಡ್‌ಔಟ್

ವಿತರಣೆ ಹಕ್ಕು ಒಂದೇ ದಿನಕ್ಕೆ ಸೋಲ್ಡ್‌ಔಟ್

ಸೆಪ್ಟೆಂಬರ್‌ನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದ್ದು, ಇದೀಗ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವುದಾಗಿ ವರದಿಯಾಗಿದೆ. ಇಡೀ ಕರ್ನಾಟಕದ ವಿತರಣಾ ಹಕ್ಕುಗಳು ಒಂದೇ ದಿನದಲ್ಲಿ ಮಾರಾಟವಾಗಿರುವುದು ವಿಶೇಷ. ಪುನೀತ್‌ ರಾಜ್‌ಕುಮಾರ್‌ ಕ್ರೇಜ್‌ ಕಾರಣ ಪ್ರದರ್ಶನಕರು ಸಿನಿಮಾ ಹಕ್ಕುಗಳಿಗಾಗಿ ಮುಗಿಬಿದ್ದಿದ್ದಾರೆ. ಪರಿಣಾಮ ಒಂದೇ ದಿನಕ್ಕೆ ಹಕ್ಕುಗಳು ಮಾರಾಟವಾಗಿದೆ.

 'ಲಕ್ಕಿಮ್ಯಾನ್' ಕುರಿತು ಭಾರೀ ನಿರೀಕ್ಷೆ

'ಲಕ್ಕಿಮ್ಯಾನ್' ಕುರಿತು ಭಾರೀ ನಿರೀಕ್ಷೆ

ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ 'ಲಕ್ಕಿಮ್ಯಾನ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಂದರ್‌ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಹಾಗೂ ಮೆಲೋಡಿ ಲಿರಿಕಲ್ ಸಾಂಗ್ ಒಂದು ರಿಲೀಸ್‌ ಆಗಿ ಹಿಟ್ ಆಗಿದೆ. ವಿ2 ವಿಜಯ್ ವಿಕ್ಕಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

 ಜಾಕ್‌ ಮಂಜು ಪಾಲಾದ 'ಲಕ್ಕಿಮ್ಯಾನ್'!

ಜಾಕ್‌ ಮಂಜು ಪಾಲಾದ 'ಲಕ್ಕಿಮ್ಯಾನ್'!

ಇತ್ತೀಚೆಗೆ 'ವಿಕ್ರಾಂತ್ ರೋಣ' ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್‌ ಮಂಜು 'ಲಕ್ಕಿಮ್ಯಾನ್' ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್‌ಸೀಸ್‌ ಥ್ರಿಯೇಟ್ರಿಕಲ್ ರೈಟ್ಸ್‌ಗೂ ಭಾರೀ ಡಿಮ್ಯಾಂಡ್ಶು ರುವಾಗಿದೆ.

 ತಮಿಳು ಸಿನಿಮಾ ರಿಮೇಕ್

ತಮಿಳು ಸಿನಿಮಾ ರಿಮೇಕ್

ತಮಿಳಿನ 'ಓ ಮೈ ಕಡವುಲೇ' ಸಿನಿಮಾ ರಿಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅಪ್ಪು ಮಾಡಿದ್ದಾರೆ. ಅಭಿಮಾನಿಗಳು ಈಗಾಗಲೇ ಪುನೀತ್ ರಾಜ್‌ಕುಮಾರ್‌ಗೆ ದೇವರ ಸ್ಥಾನ ಕೊಟ್ಟುಬಿಟ್ಟಿದ್ದಾರೆ. ವಿಪರ್ಯಾಸ ಅಂದರೆ ಕೊನೆಯ ಚಿತ್ರದಲ್ಲಿ ಪವರ್ ಸ್ಟಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಭುದೇವಾ ಜೊತೆ ಅಪ್ಪು ಡ್ಯಾನ್ಸ್ ಅಭಿಮಾನಿಗಳಿಗೆ ಹಬ್ಬವೇ ಸರಿ.

More from Filmibeat

English summary
Luckyman Movie Entire Karnataka Distribution Rights Sold in A Single Out Day. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X