For Quick Alerts
  ALLOW NOTIFICATIONS  
  For Daily Alerts

  ಪ್ರೀತಿ ಗೊತ್ತಿರುವ ಎಲ್ಲರಿಗಾಗಿ ಲವ್ ಸಾಂಗ್ ಬಿಡುಗಡೆ: ಶೃತಿ ಹರಿಹರನ್

  By Suneel
  |

  'ಲೂಸಿಯ' ಬೆಡಗಿ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ರಾಜ್ಯಾದ್ಯಂತ ಸಕ್ಸಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿದೆ. ಇತ್ತ 'ಹ್ಯಾಪಿ ನ್ಯೂ ಇಯರ್' ಚಿತ್ರದಲ್ಲಿಯೂ ಬಿಸಿ ಆಗಿರುವ ನಟಿ ವ್ಯಾಲೆಂಟೈನ್ಸ್ ಡೇ ಈವೆಂಟ್ ಗೆ ಈ ಚಿತ್ರ ತಂಡದ ಕಡೆಯಿಂದ ಸಿನಿ ಪ್ರಿಯರಿಗಾಗಿ ಒಂದು ಗಿಫ್ಟ್ ನೀಡುತ್ತಿದ್ದಾರೆ.['ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?]

  ಫೆಬ್ರವರಿ 14 ಕ್ಕೆ ಪ್ರೇಮಿಗಳ ದಿನಾಚರಣೆ ಇರೋದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಒಂದು ಸ್ಪೆಷಲ್ ದಿನಕ್ಕೆ ಬ್ಯೂಟಿಫುಲ್ ಮನಸ್ಸಿನ ಶೃತಿ ಹರಿಹರನ್ ನೀಡುತ್ತಿರುವ ಉಡುಗೊರೆ ಏನು? ಅಂತ ಗೊತ್ತಾಗ್ ಬೇಕಾ... ಮುಂದೆ ಓದಿ...

  ಲವ್ ಗೊತ್ತಿರುವವರಿಗೆ ಮಾತ್ರ ಈ ಉಡುಗೊರೆ

  ಲವ್ ಗೊತ್ತಿರುವವರಿಗೆ ಮಾತ್ರ ಈ ಉಡುಗೊರೆ

  ನಟಿ ಶೃತಿಹರಿಹರನ್ ಪ್ರೇಮಿಗಳ ದಿನಕ್ಕಾಗಿ ನೀಡುತ್ತಿರುವ ಉಡುಗೊರೆ ಒಂದು ಹಾಡು. ಯಾರಿಗೆ ಲವ್ ಗೊತ್ತಿದೆಯೋ, ಲವ್ ಎಷ್ಟು ಬ್ಯೂಟಿಫುಲ್ ಆಗಿದೆ ಎಂದು ತಿಳಿದಿರುತ್ತಾರೋ, ಅವರಿಗಾಗಿ ಇಂದು (ಫೆ.7) ಹಾಡೊಂದನ್ನು ಬಿಡುಗಡೆ ಮಾಡುತ್ತಿದ್ದಾರಂತೆ.['ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಸ್ಫೂರ್ತಿಯಾದ ಮಂಗಳೂರಿನ ನೈಜ ಘಟನೆ!]

  ಯಾವುದು ಆ ಹಾಡು?

  ಯಾವುದು ಆ ಹಾಡು?

  ಪ್ರೀತಿಯ ಬಗ್ಗೆ ರಚಿಸಿರುವ 'ಪ್ರೀತಿಯ ಹೆಸರೇ ನೀನು" ಎಂಬ ಲಿರಿಕಲ್ ವಿಡಿಯೋ ಹಾಡನ್ನು ವ್ಯಾಲೆಂಟೈನ್ಸ್ ಡೇ ಸೀಸನ್ ಪ್ರಯುಕ್ತ ಇಂದು ಬಿಡುಗಡೆ ಮಾಡಲಾಗುತ್ತಿದೆ ಎಂದು ಶೃತಿ ಹರಿಹರನ್ ಟ್ವೀಟ್ ಮಾಡಿದ್ದಾರೆ.

  'ಹ್ಯಾಪಿ ನ್ಯೂ ಇಯರ್' ಹಾಡು

  'ಹ್ಯಾಪಿ ನ್ಯೂ ಇಯರ್' ಹಾಡು

  'ಹ್ಯಾಪಿ ನ್ಯೂ ಇಯರ್' ಚಿತ್ರದ 'ಪ್ರೀತಿಯ ಹೆಸರೇ ನೀನು' ಎಂಬ ಲಿರಿಕ್ ಹಾಡಿಗೆ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿ ಅವರೇ ಹಾಡಿದ್ದು, ವಾಸುಕಿ ವೈಭವ್ ಮತ್ತು ರಾಘವೇಂದ್ರ ವಿ ಕಾಮತ್ ಸಾಹಿತ್ಯ ಬರೆದಿದ್ದಾರೆ. ಇಂದು ಈ ಹಾಡನ್ನು ವ್ಯಾಲೆಂಟೈನ್ಸ್ ಡೇ ಗೆ ವಿಶೇಷವಾಗಿ ಬಿಡುಗಡೆ ಮಾಡಲಾಗುತ್ತಿದೆ.

  'ಹ್ಯಾಪಿ ನ್ಯೂ ಇಯರ್' ತಾರಾಬಳಗ

  'ಹ್ಯಾಪಿ ನ್ಯೂ ಇಯರ್' ತಾರಾಬಳಗ

  ನಟ ಧನಂಜಯ್, ಶೃತಿ ಹರಿಹರನ್, ವಿಜಯ ರಾಘವೇಂದ್ರ, ಸೋನು ಗೌಡ, ದಿಗಂತ್, ಬಿಸಿ ಪಾಟೀಲ್, ಸಾಯ್ ಕುಮಾರ್, ಸುಧಾರಾಣಿ, ತಬಲ ನಾಣಿ ಮತ್ತು ಇತರರು ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

  ತೆರೆ ಮೇಲೆ ಯಾವಾಗ?

  ತೆರೆ ಮೇಲೆ ಯಾವಾಗ?

  ಚಿತ್ರತಂಡ ಸದ್ಯಕ್ಕೆ ಆಡಿಯೋ ರಿಲೀಸ್ ಮಾಡಲಿದ್ದು, ತೆರೆ ಮೇಲೆ ಯಾವಾಗ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ಪನ್ನಗ ಭರಣ ಅವರ ನಿರ್ದೇಶನದಲ್ಲಿ, ವನಜ ಬಿ ಪಾಟೀಲ್ ಅವರ ನಿರ್ಮಾಣದಲ್ಲಿ 'ಹ್ಯಾಪಿ ನ್ಯೂ ಇಯರ್' ಚಿತ್ರ ಮೂಡಿಬರುತ್ತಿದೆ.

  ರಘು ದೀಕ್ಷಿತ್ ಹಾಡಿರುವ 'ಪ್ರೀತಿಯ ಹೆಸರೇ ನೀನು' ಹಾಡಿನ ಅನ್ ಪ್ಲಗ್ಡ್ ವರ್ಸನ್ ಹಾಡು ಇಲ್ಲಿದೆ ನೋಡಿ

  English summary
  'Happy New Year' Film Maker Team Releasing Lyrical song of love "Preethiya Hesare Neenu" Today(Feb.7).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X