For Quick Alerts
  ALLOW NOTIFICATIONS  
  For Daily Alerts

  ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ 'ಹಂಸಲೋಕ'

  By ಕವಿರಾಜ್
  |

  ಅದೊಂದು ರಾತ್ರಿ ಹತ್ತು - ಹನ್ನೊಂದು ಗಂಟೆಯ ನಡುವಿನ ಸಮಯ. ಫೋನ್ ರಿಂಗಣಿಸಿತು. ನಿದ್ರಾಭಂಗವಾಗಿ ಪಕ್ಕದಲ್ಲಿದ್ದ ಫೋನ್ ಕೈಗೆತ್ತಿಕೊಂಡೆ. ಕರೆ ಮಾಡಿದವರ ಹೆಸರು ಕಂಡೊಡನೆ ಒಂದೇ ಕ್ಷಣಕ್ಕೆ ನಿದ್ದೆಯೆಲ್ಲಾ ಹಾರಿ ಹೋಗಿ ದಡಬಡಾಯಿಸಿ ಎದ್ದು ಕರೆ ಸ್ವೀಕರಿಸಿ ಹಲೋ ಸಾರ್ ಎಂದೆ. ಆ ಕಡೆಯ ದ್ವನಿ ಹಾಡಲು ಶುರುವಿಟ್ಟಿತ್ತು.

  ಸರ ಸರ ಸರ ಸರ ಬಾ ಸರಸಕ್ಕೆ

  ಅವಸರ ಕಾರಣ ಅಪಘಾತಕ್ಕೆ

  ಕನಸೋ ನನಸೋ ಎಂದು ಗೊಂದಲವಾಗಿ ಕೇಳುತ್ತಾ ಕೇಳುತ್ತೆ. "ಮರೀ..ಎಷ್ಟ್ ಚೆನ್ನಾಗ್ ಬರಿದಿದ್ಯೋ. ಫ್ಲೋ ಬಾಳ ಚೆನ್ನಾಗಿದೆ. ಒಂದೊಂದೇ ಸಾಲು ಸಂಭಾಷಣೇಲೂ ಮಜಾ ಕೊಟ್ಟಿದ್ಯಾ . ಏನದು ಮುಂದಿನ್ ಸಾಲು .. ??"

  ನನ್ನ ಮೇಲೆ ಯಾಕಿಲ್ಲ ನಂಬಿಕೆ ನಿಂಗೆ

  ಅನುಮಾನ ನಿಂಗಿಂತಾ ನನ್ನ್ ಮೇಲ್ ನಂಗೇ

  ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ

  ಸದ್ಯಕ್ಕೆ ಸಕ್ಕರೆ ಮುತ್ತಿದು ಸಾಕೆ

  ಜುಂ ಜುಂ ಮಾಯ ಜುಂ ಜುಂ ಮಾಯ

  ವ್ಹಾ... ಆಹಾ ರಸಿಕ ಕಣೋ ನೀನು

  ಅನ್ನುತ್ತಾ ಅವರ ತುಂಟ ಸಿಗ್ನೆಚರ್ ನಗು.

  "ಥ್ಯಾಂಕ್ಯೂ ಸರ್ .. ಥ್ಯಾಂಕ್ಯೂ ಸರ್ ..ಎಲ್ಲಾ ನಿಮ್ಮ ಸ್ಫೂರ್ತಿ ಸರ್.. " ಎನ್ನುತ್ತಾ ಮುಂದೇನು ಮಾತಾಡುವುದೆಂದು ಗೊತ್ತಾಗದೇ ಖುಷಿಯಿಂದ ಬಡಬಡಾಯಿಸಿದೆ. ಒಂದಷ್ಟು ಹೊತ್ತು ಪ್ರೀತಿಯಿಂದ ಮಾತಾಡಿ ಹರಸಿ ಫೋನಿಟ್ಟವರ ಹೆಸರು 'ಹಂಸಲೇಖ'.

  ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?ನಾದಬ್ರಹ್ಮನಿಗೆ 70ರ ಸಂಭ್ರಮ: 'ಹಂಸಲೇಖ' ಹೆಸರು ಬಂದದ್ದು ಹೇಗೆ?

  ನನ್ನಂತ ಹಳ್ಳಿ ಮೂಲೆಯ ಹುಡುಗನಲ್ಲು ಹಾಡು ಬರೆಯಬೇಕೆಂಬ ಹುಕ್ಕಿ ಹುಟ್ಟಿಸಿದ್ದೇ ಆ ಮಹಾನುಭಾವರು. ನನ್ನಂತ ಕೋಟಿ ಬರಹಗಾರರ ಮಾನಸ ಗುರು‌. ಆದರೂ ಹಿಮಾಲಯವೇ ಎದ್ದು ಸಣ್ಣ ಗುಡ್ಡ ವೊಂದನ್ನು ಕಂಡು "ಎಷ್ಟು ಎತ್ತರ ಬೆಳೆದಿದ್ಯೋ ?" ಎಂದು ಹೊಗಳುವ ದೊಡ್ಡತನ, ಹೃದಯ ವೈಶಾಲ್ಯತೆಯನ್ನು ಸ್ವತಃ ಅನುಭವಿಸಿ ಖುಷಿಯಿಂದ ಮೂಕವಿಸ್ಮಿತನಾಗಿದ್ದೇನೆ.

  ಇಂತಾ ಕರೆಗಳು ನನಗೆ ಒಂದಲ್ಲಾ, ಮೂರ್ನಾಲ್ಕು ಸಾರಿ ಬಂದಿದೆ ಎನ್ನುವುದೇ ಗೀತರಚನೆಕಾರನಾಗಿ ನನ್ನ ಬದುಕಿನ ಸಾರ್ಥಕತೆ. ನಾವೇನೇ ಒದ್ದಾಡಿ ಏನೋ ಹೊಸದು ಬರೆದೆವೆಂದು ಖುಷಿ ಪಡುತ್ತಿರುವಾಗ ಅಲ್ಲೆಲ್ಲೋ ಹಳೇ ಹಾಡೊಂದು ಕಿವಿಗೆ ಬಿದ್ದು, ಅದನ್ನು ಹಾಗಲ್ಲಾ ಹೀಗೆ ಬರೆಯಬೇಕು ಕಣೋ ಮಂಕೇ ಎನ್ನುವಂತೆ ಯಾವಾಗಲೋ ಅವರು ಚಂದಾಗಿ ಬರೆದು ಬಿಸಾಕಿರುತ್ತಾರೆ. ಆಗೆಲ್ಲಾ ಅವರೇ ತುಟಿ ಓರೆ ಮಾಡಿ ತನ್ನ ತುಂಟ ಸಿಗ್ನೆಚರ್ ಸ್ಟೈಲಲ್ಲಿ ನಗುತ್ತಾ "ನಾನೆಲ್ಲಾ ಬರೆದಾಗಿದೆ , ನೀವೇನ್ರೋ ಹೊಸದು ಬರೀತೀರಾ" ಎಂದಂತೆ.

  ಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳುಹಂಸಲೇಖಗೆ ರಾಷ್ಟ್ರ-ರಾಜ್ಯ ಪ್ರಶಸ್ತಿ ತಂದುಕೊಟ್ಟ ಸಿನಿಮಾ, ಗೀತೆಗಳು

  Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada

  ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ 'ಹಂಸಲೋಕ'. ಅಲ್ಲಿ ಸಿಗದಿರುವುದೇ ಇಲ್ಲಾ. ಸಂಗೀತ ಸಾಹಿತ್ಯ ಎರಡರಲ್ಲೂ ಅವರು ಕಟ್ಟಿಕೊಡದ ಭಾವವಿಲ್ಲ, ಅವರಿಗೊಲಿಯದ ಶೈಲಿಯಿಲ್ಲ, ಅವರು ಮುಟ್ಟದ ಕನ್ನಡದ ಮನಸಿಲ್ಲ. ಸರಳಾತೀತ ಸರಳ ಪದಗಳಲ್ಲಿ ಬ್ರಹ್ಮಾಂಡ ಅರ್ಥ ಅಡಗಿಸಿಡುವ ಅಪ್ಪಟ ಅದ್ಭುತ ಜಾದೂಗಾರ ಅವರು‌. ಅವರು ನಿರ್ಮಿಸಿದ ಹೆದ್ದಾರಿಯಲ್ಲಿ ಒಂದಷ್ಟು ಹೆಜ್ಜೆ ಹಾಕಿದವರಲ್ಲಿ ನಾನೂ ಒಬ್ಬ ಎನ್ನುವುದೇ ಇಡೀ ಬದುಕಿಗೆ ಸಾಕಾಗುವ ಹೆಮ್ಮೆ. ನೂರು ಕಾಲ ಹಾಗೇ ನಗುತ್ತಾ ಚಂದಾಗಿರಿ ಸರ್. ಜನ್ಮದಿನದ ಶುಭಾಶಯಗಳು.

  English summary
  Hamsalekha Birthday: lyricist kaviraj wishes Music Director Hamsalekha on His Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X