For Quick Alerts
  ALLOW NOTIFICATIONS  
  For Daily Alerts

  ಗೀತರಚನೆಕಾರ, ನಿರ್ದೇಶಕ ಕವಿರಾಜ್ ತಂದೆ ನಿಧನ

  |

  ಕನ್ನಡ ಚಿತ್ರರಂಗದ ಗೀತರಚನೆಕಾರ, ನಿರ್ದೇಶಕ ಕವಿರಾಜ್ ತಂದೆ ನಿಧನ ಹೊಂದಿದ್ದಾರೆ. ಕವಿರಾಜ್ ತಂದೆ ಹರಿಯಪ್ಪ ನಾಯ್ಕ (65) ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

  ಹರಿಯಪ್ಪ ನಾಯ್ಕ (65) ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಇಹಲೋಕ ತ್ಯಜಿಸಿದ್ದಾರೆ. ಇವರ ಅಂತ್ಯ ಸಂಸ್ಕಾರ ಇಂದು (ಮಂಗಳವಾರ) ಮಧ್ಯಾಹ್ನ 12ಕ್ಕೆ ಮಂಡಗದ್ದೆ ಬಳಿ ಇರುವತ್ತಿಯಲ್ಲಿ ನಡೆಯಲಿದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  ಹರಿಯಪ್ಪ ನಾಯ್ಕ ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ಸಿನಿಮಾ ಸಾಹಿತಿ ಕ ಬಂಗಾರಪ್ಪ ಅವರ ಶಿಷ್ಯರಾಗಿದ್ದರು. ಹರಿಯಪ್ಪ ನಾಯ್ಕ ಪತ್ನಿ, ಪುತ್ರ ಕವಿರಾಜ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

  ರಚಿತಾ ರಾಮ್ ಲೈಫ್‌ನ ಈ ಸೀಕ್ರೆಟ್ ನಿಮ್ಗೆ ಗೊತ್ತಿತ್ತಾ..!? | Filmibeat Kannada

  ಕವಿರಾಜ್ 'ಕರಿಯ' ಸಿನಿಮಾ ಮೂಲಕ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಬಂದರು. ಗುರುಕಿರಣ್ ಅವರಿಗೆ ಮೊದಲ ಅವಕಾಶ ನೀಡಿದರು. ಆ ನಂತರ ಸಾಕಷ್ಟು ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಬರೆದರು.

  'ಮದುವೆಯ ಮಮತೆಯ ಕರೆಯೋಲೆ' ಕವಿರಾಜ್ ನಿರ್ದೇಶನದ ಮೊದಲ ಸಿನಿಮಾ. ಸದ್ಯಕ್ಕೆ, 'ಕನ್ನಡ ಮೇಷ್ಟ್ರು ಕಾಳಿದಾಸ' ಸಿನಿಮಾಗೆ ಕವಿರಾಜ್ ಡೈರೆಕ್ಷನ್ ಮಾಡುತ್ತಿದ್ದಾರೆ. ಜಗ್ಗೇಶ್ ಈ ಸಿನಿಮಾದ ನಾಯಕ.

  English summary
  Kannada lyrics writer, director Kaviraj father Hariyappa Naika(65) passes away.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X