For Quick Alerts
  ALLOW NOTIFICATIONS  
  For Daily Alerts

  ಅಪ್ಪು ಹೊಸ ಸಿನಿಮಾ ಸುದ್ದಿ : ಮತ್ತೆ ಒಂದಾಯಿತು 'ಅಂಜನೀಪುತ್ರ' ಜೋಡಿ

  By Naveen
  |
  ಅಪ್ಪು ಹೊಸ ಸಿನಿಮಾ ಸುದ್ದಿ

  'ಅಂಜನೀಪುತ್ರ' ಸಿನಿಮಾದ ನಂತರ ಪುನೀತ್ ರಾಜ್ ಕುಮಾರ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ಪುನೀತ್ 'ನಟ ಸಾರ್ವಭೌಮ' ಚಿತ್ರದಲ್ಲಿ ನಟಿಸುತ್ತಿದ್ದು, ತಮ್ಮ ಹುಟ್ಟುಹಬ್ಬದ ನಂತರ ಸಿನಿಮಾದ ಶೂಟಿಂಗ್ ನಲ್ಲಿ ಅಪ್ಪು ಭಾಗಿಯಾಗಿದ್ದಾರೆ. ಸದ್ಯ ಈ ಚಿತ್ರದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ.

  ಆದರೆ ಈಗ ಪುನೀತ್ ಅಭಿಮಾನಿಗಳ ಪಾಲಿಗೆ ಒಂದು ಹೊಸ ಸುದ್ದಿ ಬಂದಿದೆ. ಅಪ್ಪು ಹೊಸ ಸಿನಿಮಾದ ಬಗ್ಗೆ ಬ್ರೇಕಿಂಗ್ ನ್ಯೂಸ್ ಬಹಿರಂಗವಾಗಿದೆ. 'ನಟ ಸಾರ್ವಭೌಮ' ಸಿನಿಮಾದ ನಂತರ ಮತ್ತೆ 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಜೊತೆಗೆ ಪುನೀತ್ ಸಿನಿಮಾ ಮಾಡುತ್ತಾರೆ ಎನ್ನುವುದರ ಜೊತೆಗೆ ಇದೀಗ ಅದೇ ರೀತಿ 'ಅಂಜನೀಪುತ್ರ' ಜೋಡಿ ಕೂಡ ಒಂದಾಗಲಿದೆ.

  'ಅಂಜನೀಪುತ್ರ' ಸಿನಿಮಾ ಪುನೀತ್ ಅಭಿಮಾನಿಗಳ ನಿರೀಕ್ಷೆಯನ್ನು ತಲುಪಲಿಲ್ಲ. ತಮಿಳಿನ ರಿಮೇಕ್ ಆಗಿದ್ದ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಾಣಲಿಲ್ಲ. ಆದರೂ ಸಹ ಈಗ ಈ ಚಿತ್ರದ ಜೋಡಿ ಮತ್ತೆ ಒಂದಾಗಿದೆ. ಮುಂದೆ ಓದಿ..

  'ಅಂಜನೀಪುತ್ರ' ನಿರ್ಮಾಪಕರ ಜೊತೆಗೆ ಅಪ್ಪು ಚಿತ್ರ

  'ಅಂಜನೀಪುತ್ರ' ನಿರ್ಮಾಪಕರ ಜೊತೆಗೆ ಅಪ್ಪು ಚಿತ್ರ

  'ಅಂಜನೀಪುತ್ರ' ಸಿನಿಮಾದ ಜೋಡಿ ಮತ್ತೆ ಒಂದಾಗಲಿದೆ ಎಂದಾಗ ಚಿತ್ರದ ನಿರ್ದೇಶಕ ಹರ್ಷ - ಪುನೀತ್ ರಾಜ್ ಕುಮಾರ್ ಅಥವಾ ಪುನೀತ್ - ರಶ್ಮಿಕಾ ಮಂದಣ್ಣ ಜೋಡಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಈಗ ಪುನೀತ್ ಮತ್ತೆ ಸಿನಿಮಾ ಮಾಡುತ್ತಿರುವುದು 'ಅಂಜನೀಪುತ್ರ' ನಿರ್ಮಾಪಕರ ಜೊತೆಗೆ.

  ಎಂ ಎನ್ ಕುಮಾರ್ ಬಂಡವಾಳ

  ಎಂ ಎನ್ ಕುಮಾರ್ ಬಂಡವಾಳ

  'ಅಂಜನೀಪುತ್ರ' ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಎಂ ಎನ್ ಕುಮಾರ್ ಮತ್ತೆ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಪುನೀತ್ ಈ ಪ್ರಾಜೆಕ್ಟ್ ಮಾಡುವುದು ಪಕ್ಕಾ ಎಂದು ನಿರ್ಮಾಪಕ ಎಂ ಎನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಅವರ ಎಂ ಎನ್ ಕೆ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬರಲಿದೆ. ಈ ಹಿಂದೆ 'ಮುಕುಂದ ಮುರಾರಿ' ಸೇರಿದಂತೆ ಸಾಕಷ್ಟು ಸ್ಟಾರ್ ಸಿನಿಮಾಗಳಿಗೆ ಎಂ ಎನ್ ಕುಮಾರ್ ಹಣ ಹಾಕಿದ್ದರು.

  ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ

  ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ

  ನಿರ್ಮಾಪಕ ಎಂ ಎನ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯ ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ. ಸಿನಿಮಾದ ಟೈಟಲ್, ನಿರ್ದೇಶಕ, ಕಲಾವಿದರ ಮತ್ತು ತಂತ್ರಜ್ಞರ ತಂಡ ಇನ್ನೂ ಫೈನಲ್ ಆಗಿಲ್ಲ. ಸೋ, ಪುನೀತ್ ಗೆ ಮತ್ತೆ ಯಾವ ನಿರ್ದೇಶಕರು ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ನಿರೀಕ್ಷೆ ಮತ್ತೊಂದು ಕಡೆ ಇದೆ.

  ಎರಡು ಸಿನಿಮಾಗಳ ನಂತರ

  ಎರಡು ಸಿನಿಮಾಗಳ ನಂತರ

  ಪುನೀತ್ ಕಾಲ್ ಶೀಟ್ ಸದ್ಯ ರಾಕ್ ಲೈನ್ ವೆಂಕಟೇಶ್ ಬಳಿ ಇದೆ. ಪವನ್ ಒಡೆಯರ್ ನಿರ್ದೇಶನದ 'ನಟ ಸಾರ್ವಭೌಮ' ಸಿನಿಮಾದಲ್ಲಿ ಅಪ್ಪು ನಟಿಸುತ್ತಿದ್ದಾರೆ. ಅದರ ನಂತರ 'ರಾಜಕುಮಾರ' ನಿರ್ಮಾಪಕ ಮತ್ತು ನಿರ್ದೇಶಕರ ಜೊತೆಗೆ ಪುನೀತ್ ಸಿನಿಮಾ ಮಾಡುತ್ತಾರೆ. ಈ ಎರಡು ಚಿತ್ರಗಳ ನಂತರ ಎಂ ಎನ್ ಕುಮಾರ್ ಸಿನಿಮಾ ಶುರು ಆಗಲಿದೆ. ಇದರ ಜೊತೆಗೆ ವೆಟ್ರಿಮಾರನ್ ನಿರ್ದೇಶನದ ಚಿತ್ರದಲ್ಲಿಯೂ ಪುನೀತ್ ನಟಿಸಲಿದ್ದಾರೆ.

  English summary
  After 'Anjaniputra' kannada producer M N Kumar will again produce a movie to Actor Puneeth rajkumar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X