For Quick Alerts
  ALLOW NOTIFICATIONS  
  For Daily Alerts

  'ಬುಲ್ ಬುಲ್' ದಾಖಲೆ ಅಳಿಸಿದ ಸುದೀಪ್ 'ಮಾಣಿಕ್ಯ'

  By ಉದಯರವಿ
  |

  ಅಭಿನಯ ಚಕ್ರವರ್ತಿ ಸುದೀಪ್ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅವರ ಅಭಿನಯದ 'ಮಾಣಿಕ್ಯ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ದಿನವೇ ರು.3 ಕೋಟಿ ಬಾಚಿದ ಮಾಣಿಕ್ಯ ಇದೀಗ ಐದು ದಿನಗಳಲ್ಲಿ ಒಟ್ಟು ಎಷ್ಟು ಕಮಾಯಿ ಮಾಡಿದೆ ಗೊತ್ತಾ?

  ಮಾಣಿಕ್ಯ ಚಿತ್ರ ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್ ಆದರೂ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಒಟ್ಟಾರೆ ಕಮರ್ಷಿಯಲ್ ಆಗಿ ಚಿತ್ರ ಗೆದ್ದಿದೆ. ಚಿತ್ರಕ್ಕೆ ಬಂಡವಾಳ ಹೂಡಿರುವ ನಿರ್ಮಾಪಕರು ಫುಲ್ ಖುಷ್ ಆಗಿದ್ದಾರೆ.

  ಮೇ.1ರಂದು ತೆರೆಕಂಡ 'ಮಾಣಿಕ್ಯ' ಚಿತ್ರ ಇದುವರೆಗೂ ಬಾಕ್ಸ್ ಆಫೀಸಲ್ಲಿ ರು.9 ಕೋಟಿ ಕಲೆಕ್ಷನ್ ಮಾಡಿದೆ. ರಾಜ್ಯದಾದ್ಯಂತ 245 ಚಿತ್ರಮಂದಿರಗಳಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಮಾಣಿಕ್ಯ ಚಿತ್ರದ್ದು ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಎಂ.ಎನ್.ಕುಮಾರ್.

  ಬುಲ್ ಬುಲ್ ದಾಖಲೆ ಅಳಿಸಿ ಹಾಕಿದ ಮಾಣಿಕ್ಯ

  ಬುಲ್ ಬುಲ್ ದಾಖಲೆ ಅಳಿಸಿ ಹಾಕಿದ ಮಾಣಿಕ್ಯ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರ ಮೊದಲ ವಾರಾಂತ್ಯದಲ್ಲಿ ರು.5 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ 'ಮಾಣಿಕ್ಯ' ಚಿತ್ರ ಆ ದಾಖಲೆಯನ್ನು ಅಳಿಸಿ ಹಾಕಿದೆ. ಮೇ.1ರಿಂದ ಆರಂಭವಾದ ಸಾಲುಸಾಲು ರಜೆಗಳು 'ಮಾಣಿಕ್ಯ' ಚಿತ್ರದ ಕಲೆಕ್ಷನ್ ಗೆ ಸಹಕಾರಿಯಾದವು.

  ಮಾಣಿಕ್ಯ ಚಿತ್ರ ಪೈಸಾ ವಸೂಲಿ ಮಾಡಿದೆ

  ಮಾಣಿಕ್ಯ ಚಿತ್ರ ಪೈಸಾ ವಸೂಲಿ ಮಾಡಿದೆ

  ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಮಾಣಿಕ್ಯ ಚಿತ್ರ ಪೈಸಾ ವಸೂಲಿ ಮಾಡಿದೆ. ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ.

  'ಮಾಣಿಕ್ಯ' ಕಮರ್ಷಿಯಲಿ ಸೇಫ್

  'ಮಾಣಿಕ್ಯ' ಕಮರ್ಷಿಯಲಿ ಸೇಫ್

  ರು.5.5 ಕೋಟಿ ಟಿವಿ ರೈಟ್ಸ್ ಸುವರ್ಣ ವಾಹಿನಿ ಪಾಲಾಗಿದೆ ಎನ್ನುತ್ತವೆ ಮೂಲಗಳು. ಇನ್ನು ಹಿಂದಿ ಡಬ್ಬಿಂಗ್ ರೈಟ್ಸ್ ನಲ್ಲಿ ರು.1.5 ಕೋಟಿ ವಸೂಲಿಯಾಗಿದೆಯಂತೆ. ತಮಿಳು, ತೆಲುಗು ಹಾಗೂ ಮಲಯಾಳಂ ಡಬ್ಬಿಂಗ್ ರೈಟ್ಸ್ ತಲಾ ರು.75 ಲಕ್ಷಕ್ಕೆ ಸೋಲ್ಡ್ ಔಟ್. ಅಲ್ಲಿಗೆ 'ಮಾಣಿಕ್ಯ' ಕಮರ್ಷಿಯಲಿ ಸೇಫ್.

  ಅಂದುಕೊಂಡಂತೆ ಲೆಕ್ಕಾಚಾರ ತಪ್ಪಿಲ್ಲ

  ಅಂದುಕೊಂಡಂತೆ ಲೆಕ್ಕಾಚಾರ ತಪ್ಪಿಲ್ಲ

  ಇನ್ನು ಚಿತ್ರ ಬಿಡುಗಡೆಯಾದ ಮೇಲೆ ಒಂದೇ ವಾರದಲ್ಲಿ ರು.10 ಕೋಟಿ ಪ್ಲಸ್ ಕಲೆಕ್ಷನ್ ಮಾಡುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅಂದುಕೊಂಡಂತೆ ಲೆಕ್ಕಾಚಾರ ತಪ್ಪಿಲ್ಲ. ಒಂದೇ ವಾರದಲ್ಲಿ ಚಿತ್ರದ ಬಂಡವಾಳ ಬಹುತೇಕ ವಾಪಸ್ ಆಗಿದೆ. ಇನ್ನೇನಿದ್ದರೂ ಲಾಭದ ಲೆಕ್ಕಾಚಾರ.

  ಆಡಿಯೋ, ವಿಡಿಯೋ ರೈಟ್ಸ್ ನಲ್ಲಿ ಒಂದಷ್ಟು

  ಆಡಿಯೋ, ವಿಡಿಯೋ ರೈಟ್ಸ್ ನಲ್ಲಿ ಒಂದಷ್ಟು

  ಇನ್ನು ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋ ಪಾಲಾಗಿದೆ. ರು.25 ಲಕ್ಷಕ್ಕೆ ಮಾರಾಟವಾಗಿದೆ. ಚಿತ್ರದ ಡಿವಿಡಿ ರೈಟ್ಸ್ ಗೂ ಅಷ್ಟೇ ಮೊತ್ತ ಸಿಕ್ಕಿದೆ ಎನ್ನುತ್ತವೆ ಮೂಲಗಳು. ಅಳಿದುಳಿದ ರೈಟ್ಸ್ ನಲ್ಲಿ ರು.25 ಲಕ್ಷ ಬಂದಿದೆಯಂತೆ.

  ನಲ್ಲ ಮಲ್ಲರ ಕಾಂಬಿನೇಷನ್ ಸೂಪರ್ ಹಿಟ್

  ನಲ್ಲ ಮಲ್ಲರ ಕಾಂಬಿನೇಷನ್ ಸೂಪರ್ ಹಿಟ್

  ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಒಟ್ಟು 35 ಮಂದಿ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ರಮ್ಯಾ ಕೃಷ್ಣ, ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಶೋಭರಾಜ್, ರವಿಶಂಕರ್ ಮುಂತಾದ ಕಲಾವಿದರು ಇದ್ದಾರೆ.

  English summary
  MNK Movies ans Kichcha creations 'Maanikya' seems to have met box office expectations. The movie has made over Rs 9 crores in its opening weekend itself, setting new records. The film has sailed past Challenging Star Darshan's 'Bul Bul' record.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X