'ಲ್ಯಾಂಡ್‌ಲಾರ್ಡ್' ಡೈಲಾಗ್ಸ್ ಒಂದಕ್ಕಿಂತ ಒಂದು ಸೂಪರ್; ಸಣ್ಣ ಝಲಕ್ ಹಂಚಿಕೊಂಡ ಮಾಸ್ತಿ
ಜಡೇಶ್ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಎಲ್ಲಾ ವಿಭಾಗಗಳಲ್ಲಿ ಒಳ್ಳೆ ಕೆಲಸವನ್ನು ನಿರ್ದೇಶಕರು ತೆಗೆಸಿದ್ದಾರೆ. ಜಡೇಶ್ ಕಥೆ ಚಿತ್ರಕಥೆ ನಿರ್ದೇಶನದ ಜೊತೆಗೆ ಕಲಾವಿದರ ನಟನೆ, ಛಾಯಾಗ್ರಹಣ, ಸಂಗೀತ, ಸಂಭಾಷಣೆ, ಸೆಟ್‌ಗಳು ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ.
80-90ರ ದಶಕದ ಕಾಲಘಟ್ಟದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಕೋಲಾರ ಭಾಗದ ಹಳ್ಳಿಯಲ್ಲಿ ನಡೆಯುವ ಕಥೆಯಿದು. ಹಾಗಾಗಿ ಅಲ್ಲಿನ ಭಾಷೆಶೈಲಿಯನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಕಥೆಗೆ ಅದು ಮತ್ತಷ್ಟು ಬಲ ತುಂಬಿದೆ. ಮಾಸ್ತಿ ಹಾಗೂ ಶ್ರೀಕಾಂತ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಂಜು ಎಂಬುವವರು ಸಂಭಾಷಣೆಯನ್ನು ಕೋಲಾರದ ಭಾಷೆಗೆ ತಕ್ಕಂತೆ ಹದಗೊಳಿಸಿದ್ದಾರೆ. ವಿಜಯ್, ರಚಿತಾ ಹಾಗೂ ರಾಜ್ ಬಿ ಶೆಟ್ಟಿ ತಮ್ಮ ತಮ್ಮ ಪಾತ್ರಗಳಿಗೆ ತಾವೇ ಡಬ್ ಮಾಡಿದ್ದಾರೆ. ಅದು ಬಹಳ ನೈಜವಾಗಿ ಬಂದಿದೆ.

ಚಿತ್ರದಲ್ಲಿ ಕಥೆಗೆ ತಕ್ಕಂತೆ ಸಾಕಷ್ಟು ಮಾಸ್ ಡೈಲಾಗ್‌ಗಳು ಇವೆ. ಮಾಸ್ತಿ ಒಂದಷ್ಟು ಒನ್‌ಲೈನರ್‌ಗಳನ್ನು ಬರೆದಿದ್ದಾರೆ. ಒಂದಕ್ಕಿಂತ ಒಂದು ಡೈಲಾಗ್ಸ್ ಇಷ್ಟವಾಗುತ್ತೆ. ಅಷ್ಟೇ ಮಜವಾಗಿದೆ ಕೂಡ. ಇದೀಗ ಆ ಡೈಲಾಗ್‌ಗಳನ್ನು ಸಂಭಾಷಣೆಕಾರ ಮಾಸ್ತಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ.
ಇಟ್ಕೊಂಡವ್ಳು ರೂಪವಂತೆ ಆಗಿಲ್ಲದೇ ಇದ್ರೂ ಪರವಾಗಿಲ್ಲ, ಬುದ್ದಿವಂತೆ ಆಗಿರಬಾರದು...
ನಾವು ಸಮಾನರು ಅಂತ ತೋರಿಸೋ ನಮ್ಮ ಕೈ ಬೆರಳುಗಳೇ ಒಂದು ಸಮ ಇರಲ್ಲ....
ಹೆಣ್ ಮಕ್ಕಳ ಹರಿಶಿನ ಕುಂಕುಮ ಹೆಣ್ಣು ಮಣ್ಣಿಗೆ ಹೋಗೋವರೆಗೂ ಶಾಶ್ವತ.
ಇಲ್ಲಿ ನಡಿಬೇಕಿರೋದು " ಸಂಧಾನ " ಅಲ್ಲ " ಸಂವಿಧಾನ "
ಕಾಪಾಡೋ ದ್ಯಾವ್ರೆ ಕತ್ತಿ ಹಿಡಿದವ್ನೆ,
ಕಾದಾಡೋ ನಾವ್ ಹಿಡೀದಿದ್ರೆ ಎಂಗೆ ?
ಮರ ಕಡಿಯೋ ಕೊಡಲೀಗೆ ಮನುಷ್ಯ ಯಾವ ಲೆಕ್ಕ ?
ನಾನು ಬದುಕಲ್ಲಿ ಸವಾಲಗಳ ನೋಡ್ಕೊಂಡ್ ಬಂದೋನಲ್ಲ, ಬದುಕನ್ನೇ ಸವಾಲಾಗಿ ನೋಡ್ದೋವ್ನು.
ಕೂಲಿ ಅವರಲ್ವ , ಆ ದ್ಯಾವ್ರು ಹಣೇಲಿ ಬರ್ದಿರೋದು, ಈ ಬೆವರಲ್ಲಿ ಅಳಿಸೋಗಿದೆ....
ನೀರಿಗೆ....ನೀರನ್ ಜೊತೆ ಬೆಳಿಯೋ ಪಾಚಿನೇ ದೊಡ್ಡ ಶತ್ರು.
ಸಂಭಾಷಣೆಕಾರ ಮಾಸ್ತಿ ಪ್ರಸ್ತಾಪಿಸದೇ ಬಿಟ್ಟ "ನಿನ್ನ ಹಣೆ ಮೇಲಿನ ಸ್ಟಿಕ್ಕರ್ ನನ್ನ ನಿಕ್ಕರ ಜಾರೋ ಮುಂಚೆ ಇವೆಲ್ಲಾ ಕೇಳಬೇಕು" ಎಂಬ ಮತ್ತೊಂದು ಡೈಲಾಗ್ ಅನ್ನು ನೆಟ್ಟಿಗರೊಬ್ಬರು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದಿದ್ದಾರೆ. ಹೀಗೆ ಸಾಕಷ್ಟು ಡೈಲಾಗ್‌ಗಳು ಚಿತ್ರದಲ್ಲಿವೆ.
ಇವೆಲ್ಲಾ ಪಂಚ್ ಡೈಲಾಗ್‌ಗಳು ಅನ್ನಿಸಿಕೊಂಡರೆ ಸಂದರ್ಭಕ್ಕೆ ತಕ್ಕಂತೆ ಇನ್ನು ಹಲವು ಒಳ್ಳೆ ಸಂಭಾಷಣೆ ಚಿತ್ರದಲ್ಲಿದೆ. ಅದೆಲ್ಲವೂ ಚಿತ್ರದ ತೂಕ ಹೆಚ್ಚಿಸುತ್ತಾ ಸಾಗುತ್ತದೆ. ಈ ಹಿಂದೆ 'ಕಾಟೇರ' ಚಿತ್ರಕ್ಕೂ ಮಾಸ್ತಿ ಸಂಭಾಷಣೆ ಬರೆದು ಗೆದ್ದಿದ್ದರು. ಸಿನಿಮಾ ಗೆದ್ದ ಬಳಿಕ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಒಂದು ಕಾರ್ ಅನ್ನು ಮಾಸ್ತಿ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಸ್ವತಃ ನಟ ದರ್ಶನ್ ಕಾರು ಸ್ಟಾರ್ಟ್ ಮಾಡಿ ಹಸ್ತಾಂತರಿಸಿದ್ದರು.
ಸ್ವಾತಂತ್ರ್ಯ ಬಂದ ಬಳಿಕ ಕೂಡ ಸಾಕಷ್ಟು ಕಡೆಗಳಲ್ಲಿ ಕೆಳವರ್ಗದವರ ಮೇಲೆ ಮೇಲ್ವರ್ಗದವರು ನಡೆಸುತ್ತಿದ್ದ ಅನಾಚಾರಗಳನ್ನು ಚಿತ್ರದಲ್ಲಿ ತೆರೆದಿಡಲಾಗಿದೆ. ಇತಿಹಾಸದ ಪುಟಗಳಲ್ಲಿ ದಾಖಲಾದ ಕಹಿ ಘಟನೆಗಳನ್ನು 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ಚರ್ಚಿಸಲಾಗಿದೆ.


Click it and Unblock the Notifications











