twitter
    For Quick Alerts
    ALLOW NOTIFICATIONS  
    For Daily Alerts

    'ಮಾಸ್ತಿ ಗುಡಿ' ದುರಂತ: ಸ್ಯಾಂಡಲ್ ವುಡ್ ಗೆ ಬಂತು ಹೊಸ ನಿಯಮ

    ಹೋದ ಪ್ರಾಣ ಮತ್ತೆ ಬರಲ್ಲ. ಆದ್ರೆ, ಮುಂದೆ ಮತ್ಯಾವ ಜೀವಕ್ಕೂ ಹಾನಿಯಾಗಬಾರದು ಅಂತ ಫಿಲ್ಮ್ ಚೇಂಬರ್ ಹೊಸ ನಿಯಮಗಳನ್ನ ಜಾರಿ ಮಾಡುತ್ತಿದೆ.

    By Bharath Kumar
    |

    'ಮಾಸ್ತಿ ಗುಡಿ' ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಸಾವಿಗೆ ಕಾರಣ ಯಾರು ಎಂಬ ಚರ್ಚೆ ಈಗಾಗಲೇ ಎಲ್ಲಾ ಕಡೆ ನಡೆಯುತ್ತಿದೆ.

    ಹೀಗಿರುವಾಗಲೇ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕೆಲವು ಹೊಸ ನಿಯಮಗಳನ್ನ ಜಾರಿ ತರಲು ನಿರ್ಮಾಪಕರು ಹಾಗೂ ಕಲಾವಿದರ ಸಂಘ ನಿರ್ಧರಿಸಿದೆ. ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತೆ ಎಂಬುದು ಸದ್ಯದ ಪ್ರಶ್ನೆ ಆದರೂ ಇದೇ ವಿಚಾರವನ್ನ ಮುಂದಿಟ್ಟು ಕನ್ನಡ ನಿರ್ಮಾಪಕ ಸಂಘದ ಅಧ್ಯಕ್ಷ ಮುನಿರತ್ನ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ಹಾಗೂ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಇಂದು ಜಂಟಿ ಸುದ್ದಿ ಗೋಷ್ಠಿ ನಡೆಸಿದರು.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]

    ಸುದ್ದಿ ಗೋಷ್ಠಿಯಲ್ಲಿ 'ಮಾಸ್ತಿ ಗುಡಿ' ಚಿತ್ರಕ್ಕೆ ಸಂಬಂಧಿಸಿದ ಹಾಗೂ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಕೆಲವು ಅಂಶಗಳನ್ನ ಪ್ರಸ್ತಾಪಿಸಿದರು. ಮುಂದೆ ಓದಿ....

    ನಿರ್ಮಾಪಕರು ಹೊಣೆಯಲ್ಲ

    ನಿರ್ಮಾಪಕರು ಹೊಣೆಯಲ್ಲ

    ಇನ್ನು ಮುಂದೆ ಚಿತ್ರೀಕರಣದ ವೇಳೆ ಅವಘಡಗಳು ಸಂಭವಿಸದರೆ, ಅದಕ್ಕೆ ನಿರ್ಮಾಪಕರು ಕಾರಣವಲ್ಲ. ಅದಕ್ಕೆ ಆಯಾ ವಿಭಾಗದವರೇ ನೇರ ಹೊಣೆಯಾಗಲಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಬೇಕಾಗುವುದನ್ನ ಒದಗಿಸುವ ಕೆಲಸವನ್ನ ಮಾತ್ರ ನಿರ್ಮಾಪಕರು ಮಾಡುತ್ತಾರೆ.['ಮಾಸ್ತಿ ಗುಡಿ' ತನಿಖೆ: ದುನಿಯಾ ವಿಜಯ್ ವಿರುದ್ಧ ಸ್ಫೋಟಕ ಮಾಹಿತಿ ಬಯಲು.!]

    ಆಯಾ ವಿಭಾಗದವರೇ ಕಾರಣ

    ಆಯಾ ವಿಭಾಗದವರೇ ಕಾರಣ

    ಚಿತ್ರ ನಿರ್ಮಾಣ ಎನ್ನುವುದು ಕೇವಲ ಒಬ್ಬರ ಭಾಗವಲ್ಲ. ಅದರಲ್ಲಿ ಹಲವರು ಭಾಗಿಯಾಗುತ್ತಾರೆ. ಚಿತ್ರವನ್ನ ಕೇವಲ ನಿರ್ದೇಶಕ ಮಾತ್ರ ನಿರ್ದೇಶನ ಮಾಡಲ್ಲ, ಸಾಹಸ ದೃಶ್ಯವನ್ನ ನಿರ್ದೇಶನ ಮಾಡುವುದಕ್ಕೆ ಸಾಹಸ ನಿರ್ದೇಶಕ, ನೃತ್ಯವನ್ನ ನಿರ್ದೇಶನ ಮಾಡಲು ನೃತ್ಯ ಸಂಯೋಜಕರು ಕೆಲಸ ಮಾಡುತ್ತಾರೆ. ಇಂತಹ ದೃಶ್ಯಗಳಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅವರೇ ಜವಾಬ್ದಾರರಾಗಿರುತ್ತಾರೆ.[ಸ್ಟಂಟ್ ಮಾಸ್ಟರ್ ರವಿವರ್ಮನ ಇನ್ನೊಂದು ಸ್ಟಂಟ್ ಬಹಿರಂಗ.! ]

    'ಜೀವ ವಿಮೆ' ಅಗತ್ಯ

    'ಜೀವ ವಿಮೆ' ಅಗತ್ಯ

    ಸಿನಿಮಾ ಅಂದ್ಮೇಲೆ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರಿಗೆ ಜೀವ ವಿಮೆ ಅಗತ್ಯವಾಗಿರುತ್ತದೆ. ಮುಂದೆ ಚಿತ್ರೀಕರಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಜೀವ ವಿಮೆ ಮಾಡಿಸಿಕೊಳ್ಳಬೇಕು. ಚಿತ್ರೀಕರಣದಲ್ಲಿ ಪಾಲ್ಗೊಂಡವರಿಗೆ ನಿರ್ಮಾಪಕ ಜೀವ ವಿಮೆ ಮಾಡಿಸಿಕೊಡಬೇಕು.['ಮಾಸ್ತಿ ಗುಡಿ' ದುರಂತ ಸಂಭವಿಸಲು ಪ್ರಮುಖ ಕಾರಣ ಇದೇ.!]

    ಅನಿಲ್, ಉದಯ್ ಕುಟುಂಬಕ್ಕಾಗಿ 'ನಿಧಿ ಸಂಗ್ರಹ'

    ಅನಿಲ್, ಉದಯ್ ಕುಟುಂಬಕ್ಕಾಗಿ 'ನಿಧಿ ಸಂಗ್ರಹ'

    'ಮಾಸ್ತಿ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಸಾವಿಗೀಡಾದ ಅನಿಲ್ ಹಾಗೂ ಉದಯ್ ಕುಟುಂಬಗಳಿಗೆ ಚಿತ್ರರಂಗ ನೆರವು ನೀಡಲಿದೆ. ಈಗಾಗಲೇ ಹಲವು ನಟ, ನಟಿಯರು ಸಹಾಯ ಮಾಡಿದ್ದಾರೆ. ಈಗ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ 'ನಿಧಿ ಸಂಗ್ರಹ' ಮಾಡಲು ನಿರ್ಧರಿಸಲಾಗಿದ್ದು, ಸಂಗ್ರಹವಾದ ಹಣವನ್ನ ಅವರಿಬ್ಬರ ಕುಟುಂಬಕ್ಕೆ ನೀಡಲಾಗುವುದು.

    'ಚಿತ್ರೋದ್ಯಮ ಕಲ್ಯಾಣ ನಿಧಿ'

    'ಚಿತ್ರೋದ್ಯಮ ಕಲ್ಯಾಣ ನಿಧಿ'

    ಮುಂದಿನ ಭವಿಷ್ಯವನ್ನ ಗಮನದಲ್ಲಿಟ್ಟುಕೊಂಡು, 'ಚಿತ್ರೋಧ್ಯಮ ಕಲ್ಯಾಣ ನಿಧಿ'ಯನ್ನ ಎಲ್ಲರಿಗೂ ಅನ್ವಯಿಸುವಂತೆ ಕ್ರಮವಹಿಸಲಾಗುವುದು. ಇದರಲ್ಲಿ ಕಾರ್ಮಿಕರು, ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಎಲ್ಲರೂ ಒಳಪಡುತ್ತಾರೆ. ಚಿತ್ರೀಕರಣದ ವೇಳೆ ಏನಾದ್ರೂ, ಅಪಘಾತ ಅಥವಾ ಸಾವು-ನೋವು ಸಂಭವಿಸಿದ್ದಲ್ಲಿ ಅವರಿಗೆ 'ಚಿತ್ರೋದ್ಯಮ ಕಲ್ಯಾಣ ನಿಧಿ'ಯಿಂದ ಸಹಾಯ ಮಾಡಬಹುದು.

    'ಚಿತ್ರೋದ್ಯಮ ಕಲ್ಯಾಣ ನಿಧಿ' ಜಾರಿಯಲ್ಲಿದೆ!

    'ಚಿತ್ರೋದ್ಯಮ ಕಲ್ಯಾಣ ನಿಧಿ' ಜಾರಿಯಲ್ಲಿದೆ!

    ಸದ್ಯ, 'ಚಿತ್ರೋದ್ಯಮ ಕಲ್ಯಾಣ ನಿಧಿ' ಜಾರಿಯಲ್ಲಿದ್ದು, ಇದು ಕಾರ್ಮಿಕರಿಗೆ ಮಾತ್ರ ನೆರವಾಗುತ್ತಿದೆ. ಈಗಾಗಲೇ 1 ಕೋಟಿ ಹಣ ಈ ಕಲ್ಯಾಣ ನಿಧಿಯಲ್ಲಿದೆ. ವಾರ್ತಾ ಇಲಾಖೆಯ ಅಧೀನದಲ್ಲಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಈ 'ಚಿತ್ರೋದ್ಯಮ ಕಲ್ಯಾಣ ನಿಧಿ'ಯನ್ನ ನಿಯಂತ್ರಿಸುತ್ತಿದೆ. ಇನ್ನು ಮುಂದೆ ಇದು ಎಲ್ಲರಿಗೂ ನೆರವಾಗುವ ರೀತಿಯಲ್ಲಿ, ಅಕಾಡೆಮಿ ಅಧ್ಯಕ್ಷರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುಲಾಗುವುದು.

    ಹೊಸ ನಿರ್ಮಾಪಕ, ಕಲಾವಿದರಿಗೆ ನಿಂಬಂಧನೆಗಳು,!

    ಹೊಸ ನಿರ್ಮಾಪಕ, ಕಲಾವಿದರಿಗೆ ನಿಂಬಂಧನೆಗಳು,!

    ಹೊಸದಾಗಿ ಬರುವ ಕೆಲವು ನಿರ್ಮಾಪಕರು ಹಾಗೂ ಕಲಾವಿದರು ಸದಸ್ಯತ್ವನ್ನ ಹೊಂದಿರುವುದಿಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಅವರು ಕಡ್ಡಾಯವಾಗಿ ಸದಸ್ಯತ್ವವನ್ನ ನೋಂದಾಯಿಸುವಂತೆ ನಿರ್ಣಯ ಕೈಗೊಳ್ಳಲಾಗುವುದು.

    ಎಲ್ಲ ವಲಯಗಳ ಒಮ್ಮತ ನಿರ್ಧಾರ ಇದ್ಯಾ?

    ಎಲ್ಲ ವಲಯಗಳ ಒಮ್ಮತ ನಿರ್ಧಾರ ಇದ್ಯಾ?

    ಈ ಎಲ್ಲ ಯೋಜನೆಗಳಿಗೆ, ಕಾರ್ಮಿಕರ ಒಕ್ಕೂಟ, ನಿರ್ದೇಶಕರ ಸಂಘ, ಸಾಹಸ ಕಲಾವಿದರ ಸಂಘಗಳ ಒಪ್ಪಿಗೆ ಇದ್ಯಾ, ಇಲ್ವಾ ಗೊತ್ತಿಲ್ಲ. ಆದ್ರೆ, ಒಂದು ಸುತ್ತಿನ ಸಭೆಯಲ್ಲಿ ಈ ಎಲ್ಲ ಅಂಶಗಳನ್ನ ಚರ್ಚಿಸಿಲಾಗಿದ್ದು, ಮುಂದಿನ ಸಭೆಯಲ್ಲಿ ಅಂತಿಮಗೊಳಿಲಾಗುವುದು ಎನ್ನುತ್ತಾರೆ ಸಾ.ರಾ ಗೋವಿಂದು.

    ಅಂಬರೀಶ್ ಸಾರಥ್ಯದಲ್ಲಿ ಸಭೆ

    ಅಂಬರೀಶ್ ಸಾರಥ್ಯದಲ್ಲಿ ಸಭೆ

    ಕಲಾವಿದರ ಸಂಘದ ಅಧ್ಯಕ್ಷ, ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಈ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗುವುದು. ಅಂಬರೀಶ್ ಅವರ ಜೊತೆ ಚರ್ಚಿಸಿ ಅಂತಿಮ ರೂಪುರೇಷೆಗಳನ್ನ ಜಾರಿ ಮಾಡಲು ತೀರ್ಮಾನಿಸಲಾಗಿದೆ.

    ಅಂಬರೀಶ್ ಅವರ ಜೊತೆ ಸಭೆ ಯಾವಾಗ?

    ಅಂಬರೀಶ್ ಅವರ ಜೊತೆ ಸಭೆ ಯಾವಾಗ?

    ಈ ವಾರದ ಅಂತ್ಯಕ್ಕೆ ಅಂಬರೀಶ್ ಅವರ ಜೊತೆ, ಎಲ್ಲ ವಲಯದ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸಭೆ ಮಾಡಲಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಾರ್ಮಿಕರ ಒಕ್ಕೂಟ ಸೇರಿದಂತೆ ಎಲ್ಲರೂ ಭಾಗವಹಿಸಲಿದ್ದಾರಂತೆ.

    English summary
    Artists Association along with Producers Association held a Joint Press meet today at Karnataka Film Chamber of Commerce to set new rules in Sandalwood after 'Maasti Gudi' Tragedy
    Tuesday, November 15, 2016, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X