»   » 'ಮಾಸ್ತಿಗುಡಿ' ಚಿತ್ರತಂಡದಿಂದ ಅನಿಲ್, ಉದಯ್ ಕುಟುಂಬಕ್ಕೆ 25 ಲಕ್ಷ

'ಮಾಸ್ತಿಗುಡಿ' ಚಿತ್ರತಂಡದಿಂದ ಅನಿಲ್, ಉದಯ್ ಕುಟುಂಬಕ್ಕೆ 25 ಲಕ್ಷ

Posted By:
Subscribe to Filmibeat Kannada

'ಮಾಸ್ತಿಗುಡಿ' ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ದುರಂತ ಸಾವಿಗೀಡಾದ ಖಳನಟರಾದ ಅನಿಲ್ ಕುಮಾರ್ ಮತ್ತು ರಾಘವ ಉದಯ್ ಕುಟುಂಬಕ್ಕೆ ಚಿತ್ರತಂಡ 25 ಲಕ್ಷ ಧನಸಹಾಯ ನೀಡಿದೆ.

ನಿನ್ನೆ(ಮೇ 11) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರ ನೇತೃತ್ವದಲ್ಲಿ ಅನಿಲ್ ಮತ್ತು ಉದಯ್ ಕುಟುಂಬಕ್ಕೆ 25 ಲಕ್ಷ ಧನಸಹಾಯವನ್ನು 'ಮಾಸ್ತಿಗುಡಿ' ಚಿತ್ರತಂಡ ನೀಡಿದೆ. ನಿರ್ಮಾಪಕ ಸುಂದರ್ ಗೌಡ ರವರು 20 ಲಕ್ಷ ಮತ್ತು ಸಾಹಸ ನಿರ್ದೇಶಕ ರವಿ ವರ್ಮಾ 5 ಲಕ್ಷ ನೀಡಿದ್ದಾರೆ.

'Maastigudi' Film Team helped 25 Lakhs for Anil and Uday family

ಈ ಹಿಂದೆಯೇ ಕರ್ನಾಟಕ ವಾಣಿಜ್ಯ ಮಂಡಳಿಯಲ್ಲಿ ಅನಿಲ್ ಮತ್ತು ಉದಯ್ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಭೆನಡೆಸಿ ಚರ್ಚಿಸಲಾಗಿತ್ತು. ಈಗ ಚಿತ್ರತಂಡ 25 ಲಕ್ಷ ಧನಸಹಾಯದ ಜೊತೆಗೆ ಉದಯ್ ಕುಟುಂಬಕ್ಕೆ ಕರ್ನಾಟಕ ಹೌಸಿಂಗ್ ಬೋರ್ಡ್ ವತಿಯಿಂದ ಒಂದು ಸೈಟ್ ಕೊಡುವುದಾಗಿ ಹೇಳಿದ್ದಾರೆ. ಒಂದು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಾಗುವುದಿಲ್ಲ. ನಾವು ನಮ್ಮ ಕೈಲಾದ ಸಹಾಯ ಮಾಡುತ್ತೇವೆ ಎಂದು ಅನಿಲ್ ಮತ್ತು ಉದಯ್ ಕುಟುಂಬದವರಿಗೆ ಚಿತ್ರತಂಡ ಚೆಕ್ ನೀಡಿದೆ.

ಉದಯ್ ಕುಟುಂಬದವರು 'ಮಾಸ್ತಿಗುಡಿ' ಚಿತ್ರ ಚೆನ್ನಾಗಿ ಪ್ರದರ್ಶನ ಕಾಣಲಿ, ಯಶಸ್ಸು ಸಿಗಲಿ ಎಂದು ಶುಭಕೋರಿದ್ದಾರೆ.

English summary
'Maastigudi' Film Team helped 25 Lakhs for 2 actors Familly (Anil and Uday) who had drowned in TG Halli Reservoir during climax of 'Maastigudi' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada