ಶ್ರೀಮುರಳಿ 'ಮದಗಜ' ಸಿನಿಮಾದ ಟೈಟಲ್ ಬದಲಾವಣೆ

ರೋರಿಂಗ್ ಸ್ಟಾರ್ ಶ್ರೀ ಮುರಳಿ 'ಭರಾಟೆ'ಯ ನಂತರ 'ಮದಗಜ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಸಿನಿಮಾದ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. ಈ ವಿಷಯವನ್ನು ನಟ ಶ್ರೀಮುರಳಿ ತಿಳಿಸಿದ್ದಾರೆ.

ನಿರ್ದೇಶಕ ಎಸ್ ನಾರಾಯಣ್ ದ್ವಿತೀಯ ಪುತ್ರ ಪವನ್ ಮೊದಲ ಸಿನಿಮಾ ಮುಹೂರ್ತ ಕಾರ್ಯಕ್ರಮಕ್ಕೆ ಶ್ರೀಮುರಳಿ ಆಗಮಿಸಿದ್ದರು. ಈ ವೇಳೆ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾತನಾಡಿದರು. 'ಮದಗಜ' ಸಿನಿಮಾ ಬೇರೊಂದು ಟೈಟಲ್ ಮೂಲಕ ಬರಲಿದೆ ಎಂದು ತಿಳಿಸಿದರು.

''ಸಿನಿಮಾದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ. ಹೀಗಾಗಿ ಸಿನಿಮಾದ ಶೀರ್ಷಿಕೆ ಕೂಡ ಬದಲಾವಣೆ ಮಾಡಿದ್ದೇವೆ. ಸಿನಿಮಾದ ಕಥೆಗೆ ಟೈಟಲ್ ಸೂಕ್ತ ಆಗುತ್ತಿರಲಿಲ್ಲ. 'ಮದಗಜ' ಒಳ್ಳೆಯ ಟೈಟಲ್ ಅದಕ್ಕೆ ತೊಂದರೆ ಆಗಬಾರದು'' ಎಂದು ಶ್ರೀಮುರಳಿ ಹೇಳಿದ್ದಾರೆ.

Madagaja Kannada Movie Titel Will Be Changed

ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಹಾಗೂ ಉಮಾಪತಿ ನಿರ್ಮಾಣ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶ್ರೀಮುರಳಿ ಸ್ಪಷ್ಟಪಡಿಸಿದ್ದಾರೆ. ಮಹೇಶ್ ಕುಮಾರ್ ಈ ಹಿಂದೆ 'ಅಯೋಗ್ಯ' ಸಿನಿಮಾ ನಿರ್ದೇಶನ ಮಾಡಿದ್ದರು. ಉಮಾಪತಿ 'ಹೆಬ್ಬುಲಿ' ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸದ್ಯ 'ರಾಬರ್ಟ್' ತಯಾರಿಯಲ್ಲಿ ಇದ್ದಾರೆ.

ಸಿನಿಮಾದಲ್ಲಿ ಶ್ರೀಮುರಳಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಮಂತನ ವ್ಯಕ್ತಿ ಪಾತ್ರವನ್ನು ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಸಿನಿಮಾ ಹೊಸ ಟೈಟಲ್ ಘೋಷಣೆ ಆಗಲಿದೆ.

More from Filmibeat

English summary
'Madagaja' kannada movie titel will be changed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X