ಸೆಪ್ಟೆಂಬರ್ 19ರಿಂದ 'ಮದಗಜ'ನ ಸವಾರಿ ಮತ್ತೆ ಶುರು
ಕೊರೊನಾ ವೈರಸ್‌ನಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣ ನಿಧಾನವಾಗಿ ಮತ್ತೆ ಆರಂಭವಾಗಿದೆ. ಒಂದೊಂದೆ ಚಿತ್ರಗಳು ಶೂಟಿಂಗ್ ಶುರು ಮಾಡಿದೆ. ಇದೀಗ, ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.
ಈಗಾಗಲೇ ಮೊದಲ ಹಂತಹ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಸೆಪ್ಟೆಂಬರ್ 19 ರಿಂದ ಮತ್ತೆ ಕೆಲಸ ಆರಂಭಿಸುತ್ತಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೂಟಿಂಗ್‌ಗೆ ಮತ್ತೆ ಚಾಲನೆ ನೀಡುತ್ತಿದೆ.
ಅಂದ್ಹಾಗೆ, ಈ ಚಿತ್ರವನ್ನು 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ಹೆಬ್ಬುಲಿ, ರಾಬರ್ಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಉಮಾಪತಿ ಶ್ರೀನಿವಾಸ್ ಗೌಡ ಮದಗಜ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇನ್ನು ಆಶಿಕಾ ರಂಗನಾಥ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.
Recommended Video
DIRECTORS DAIRY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada
More from Filmibeat
English summary
Roaring star Sriimurali 's Madagaja Movie second schedule to starts from Sept 19.


Click it and Unblock the Notifications











