ಆಂಧ್ರ-ತೆಲಂಗಾಣಕ್ಕೆ ಕಾಲಿಟ್ಟ ಮದಗಜ: ಹೊಸ ವರ್ಷಕ್ಕೆ ಸರ್ಪ್ರೈಸ್
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ತೆಲುಗಿಗೆ ಕಾಲಿಟ್ಟಿದೆ. ಇಷ್ಟು ದಿನ ಕನ್ನಡದಲ್ಲಿ ಮಾತ್ರ ಸದ್ದು ಮಾಡ್ತಿದ್ದ ಮದಗಜ ಇನ್ಮುಂದೆ ಆಂಧ್ರ-ತೆಲಂಗಾಣದಲ್ಲಿ ಅಬ್ಬರಿಸಲಿದೆ.
ಹೊಸ ವರ್ಷದ ಪ್ರಯುಕ್ತ ಮದಗಜ ಸಿನಿಮಾದ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ ಎಂದು ಸ್ವತಃ ಶ್ರೀಮುರಳಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಜನವರಿ 1 ರಂದು ಬೆಳಗ್ಗೆ 10.10 ನಿಮಿಷಕ್ಕೆ ಆನಂದ್ ಆಡಿಯೋದಲ್ಲಿ ಮದಗಜ ತೆಲುಗು ಟೀಸರ್ ರಿಲೀಸ್ ಆಗಲಿದೆ.

ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ.
ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ತಂಡ ಅಂತಿಮ ಹಂತದ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.
ಡಿಸೆಂಬರ್ 17 ರಂದು ಶ್ರೀಮುರಳಿಯ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಇದೀಗ, ಹೊಸ ಹರ್ಷದ ಪ್ರಯುಕ್ತ ತೆಲುಗು ವರ್ಷನ್ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.


Click it and Unblock the Notifications











