ದರ್ಶನ್ 'ಮದಕರಿ ನಾಯಕ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಗೆ ದಿನಾಂಕ ನಿಗದಿ?

Recommended Video

ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಭರ್ಜರಿ ಗಿಫ್ಟ್ | Raja Veera Madakari Nayaka | Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ 'ರಾಜ ವೀರ ಮದಕರಿ ನಾಯಕ' ಸಿನಿಮಾ ಮುಹೂರ್ತ ನಡೆದು ತಿಂಗಳಾಯಿತು. ಡಿ ಬಾಸ್ ಯಾವಗಿನಿಂದ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಚಿತ್ರತಂಡ ಅಂದುಕೊಂಡಂತೆ ಆಗಿದ್ದರೆ ಇದೆ ತಿಂಗಳ ಕೊನೆಯಿಂದ ಚಿತ್ರೀಕರಣ ಪ್ರಾರಂಭಿಸಬೇಕಿತ್ತು. ಆದರೀಗ ಮುಂದಿನ ತಿಂಗಳಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಮೊನ್ನೆಯಷ್ಟೆ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ. ಈ ನಡುವೆ ರಾಜೇಂದ್ರ ಸಿಂಗ್ ಬಾಬು ಸಾರಥ್ಯದ ರಾಜ ವೀರ ಮದಕರಿ ನಾಯಕ ಚಿತ್ರದಿಂದ ಭರ್ಜರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕಾತರರಾಗಿದ್ದಾರೆ. ಇತ್ತೀಚಿಗಷ್ಟೆ ರಾಬರ್ಟ್ ಮೋಷನ್ ಪೋಸ್ಟರ್ ನೋಡಿ ಸಂಭ್ರಮಿಸುತ್ತಿರುವ ಅಭಿಮಾನಿಗಳಿಗೀಗ ಮದಕರಿ ನಾಯಕ ಪೋಸ್ಟರ್ ಕೂಡ ನೋಡುವ ಭಾಗ್ಯ ಸಿಗಲಿದೆ ಎಂದು ಹೇಳಲಾಗುತ್ತಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಮದಕರಿನಾಯಕನ ಗಿಫ್ಟ್

ದರ್ಶನ್ ಹುಟ್ಟುಹಬ್ಬಕ್ಕೆ ಮದಕರಿನಾಯಕನ ಗಿಫ್ಟ್

ರಾಜವೀರ ಮದಕರಿ ನಾಯಕ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ದರ್ಶನ್ ಹುಟ್ಟುಹಬ್ಬಕ್ಕೆ ಮದಕರಿ ನಾಯಕ ಚಿತ್ರದ ಮೋಷನ್ ಪೋಸ್ಟರ್ ಬರಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮದಕರಿ ನಾಯಕ ಚಿತ್ರದ ಪೋಸ್ಟರ್ ರಿಲೀಸ್ ಆದರೆ ಅಭಿಮಾನಿಗಳಿಗೆ ಡಬಲ್ ಧಮಾಕ ಆಗಲಿದೆ.

ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ

ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ

ಮುಂದಿನ ತಿಂಗಳು ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ. ಈಗಾಗಲೆ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ದಾಸನ ಮನವಿಯಂತೆ ದವಸ ಧಾನ್ಯಗಳನ್ನು ತಂದು ನೀಡುತ್ತಿದ್ದಾರೆ.

ಹುಟ್ಟುಹಬ್ಬದ ನಂತರ ಚಿತ್ರೀಕರಣ

ಹುಟ್ಟುಹಬ್ಬದ ನಂತರ ಚಿತ್ರೀಕರಣ

ಸದ್ಯ ರಾಬರ್ಟ್ ಚಿತ್ರದ ಚಿತ್ರೀಕರಣ ಇತ್ತೀಚಿಗಷ್ಟೆ ಮುಗಿಸಿದ್ದಾರೆ. ರಾಬರ್ಟ್ ಮುಗಿಯುತ್ತಿದ್ದಂತೆ ಮದಕರಿ ನಾಯಕ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಮದಕರಿ ನಾಯಕ ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗಿತ್ತಿದೆ. ಹುಟ್ಟುಹಬ್ಬದ ನಂತರ ದರ್ಶನ್ ಚಿತ್ರೀಕರಣಕ್ಕೆ ಹೊರಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕೇರಳದಿಂದ ಪ್ರಾರಂಭವಾಗಲಿದೆ ಚಿತ್ರೀಕರಣ

ಕೇರಳದಿಂದ ಪ್ರಾರಂಭವಾಗಲಿದೆ ಚಿತ್ರೀಕರಣ

ಮದಕರಿ ನಾಯಕ ಚಿತ್ರೀಕರಣ ಮೊದಲು ಕೇರಳದಿಂದ ಪ್ರಾರಂಭವಾಗಲಿದೆಯಂತೆ. ಕೇರಳದ ಸುಂದರ ಜಲಪಾತದ ಬಳಿ ಮೊದಲು ಮೂರ್ನಾಲ್ಕು ದಿನಗಳ ಚಿತ್ರೀಕರಣ ನಡೆಸಿ ನಂತರ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆ ನಂತರ ಬೆಂಗಳೂರಿನ ಸ್ಟೂಡಿಯೊದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತೆ. ಚಿತ್ರತಂಡ ಸದ್ಯ ಕಲಾವಿದರ ಆಯ್ಕೆಯಲ್ಲಿ ಬ್ಯುಸಿಯಾಗಿದೆ. ಮದಕರಿ ನಾಯಕನಿಗೆ ಯಾರೆಲ್ಲ ಜೊತೆಯಾಗುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Kannada Actor Darshan starrer Raja Veera Madakari Nayaka motion poster may release on Darshan birthday.
Read more about: darshan ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X