For Quick Alerts
  ALLOW NOTIFICATIONS  
  For Daily Alerts

  ಮಹದೇವಪುರದಲ್ಲಿ ಮಯೂರ್ ಬಿರುಸಿನ ಪ್ರಚಾರ

  By Rajendra
  |

  ಈ ಬಾರಿಯ ವಿಧಾನಸಭಾ ಚುನಾವಣೆಗೆ ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಹಾಗೂ ಅವರ ಪುತ್ರ ಮಯೂರ್ ಪಟೇಲ್ ಸ್ಪರ್ಧಿಸುತ್ತಿರುವುದು ಗೊತ್ತಿರುವ ಸಮಾಚಾರ. ಇವರಿಬ್ಬರೂ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ.

  ಬೆಂಗಳೂರು ಮಹದೇವಪುರ ಕ್ಷೇತ್ರದಿಂದ ಮಯೂರ್ ಕಣಕ್ಕಿಳಿಯಲಿದ್ದಾರೆ. ಈ ಸಂಬಂಧ ಅವರು ಈ ಕ್ಷೇತ್ರದಲ್ಲಿ ಸೋಮವಾರದಿಂದ (ಏ.1) ಬಿರುಸಿನ ಪ್ರಚಾರ ಆರಂಭಿಸಿದ್ದಾರೆ. ಇದಕ್ಕೆ ಅವರ ಅಪ್ಪ ಮದನ್ ಪಟೇಲ್ ಅವರು ಸಾಥ್ ನೀಡಿದರು.

  ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಮಯೂರ್ ಹೇಳಿದರು. ಇದೇ ಸಂದರ್ಭದಲ್ಲಿ ಅವರು ಮಾರತ್ ಹಳ್ಳಿಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ಉದ್ಘಾಟಿಸಿದರು.

  ಮದನ್ ಪಟೇಲ್ ಅವರು ಟಿ.ನರಸೀಪುರದಿಂದ ಸ್ಪರ್ಧಿಸುತ್ತಿದ್ದಾರೆ. ಒಂದು ದಶಕದಿಂದ ಮದನ್ ಪಟೇಲ್ ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಲ್ಲಿ ಭಾರತೀಯ ಜನತಾ ಪಕ್ಷ ಬಳಿಕ ಕರ್ನಾಟಕ ಜನತಾ ಪಕ್ಷ ಈಗ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿ ಅವರಿದ್ದಾರೆ.

  ಸದ್ಯಕ್ಕೆ ಮಯೂರ್ ಪಟೇಲ್ ಅವರು ಹಿಂದಿ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಯಾರಿವನು? (ಹಳೆ ಶೀರ್ಷಿಕೆ ಸತ್ಯಾನಂದ) ಹಿಂದಿ ಅವತರಣಿಕೆಯನ್ನು ಮಯೂರ್ ಅವರೇ ನಿರ್ದೇಶಿಸುತ್ತಿದ್ದಾರೆ. ಜೂನ್ ತಿಂಗಳಿಂದ ಚಿತ್ರೀಕರಣ ಶುರು. ರವಿಚೇತನ್ ಸೇರಿದಂತೆ ಹಿಂದಿಯ ಹಲವು ತಾರೆಗಳು ಚಿತ್ರದಲ್ಲಿರುತ್ತಾರೆ. (ಏಜೆನ್ಸೀಸ್)

  English summary
  Kannada films director, producer and actor Madan Patel and Mayur Patel will be seen contesting the forthcoming assembly elections. While Madan Patel will be contesting from the T Narasipura constituency, Mayur will stand for Mahavedapura constituency from BSR Congress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X