For Quick Alerts
  ALLOW NOTIFICATIONS  
  For Daily Alerts

  ಚಿತ್ರ ಪ್ರೇಮಿಗಳಿಗೆ ಮದನ್ ಪಟೇಲ್ ಭರ್ಜರಿ ಆಫರ್

  By Rajendra
  |
  ನಟ, ನಿರ್ಮಾಪಕ ಹಾಗೂ ನಿರ್ದೇಶಕ ಮದನ್ ಪಟೇಲ್ ಅವರು ಕೆಜೆಪಿ ಪಕ್ಷದಿಂದ ಹೊರಬಿದ್ದ ಬಳಿಕ ಮತ್ತೆ 'ಸತ್ಯಾನಂದ' ಜಪ ಶುರುವಚ್ಚಿಕೊಂಡಿದ್ದಾರೆ. ಸತತ ಎರಡು ವರ್ಷಗಳಿಂದ ತಮ್ಮ ಮಹತ್ವಾಕಾಂಕ್ಷಿ 'ಸತ್ಯಾನಂದ' ಚಿತ್ರಕ್ಕೆ ಮುಕ್ತಿ ಕಲ್ಪಿಸಲು ಅವರು ಅಹರ್ನಿಶಿ ಶ್ರಮಿಸುತ್ತಾ ಬಂದಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

  'ಸತ್ಯಾನಂದ' ಎಂಬ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಅವರು ಈಗ ಹೊಸ ಐಡಿಯಾ ಮಾಡಿದ್ದಾರೆ. ಅದೇನೆಂದರೆ ತಮ್ಮ ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಸೂಚಿಸಿ. ಆಯ್ಕೆಯಾದವರಿಗೆ ರು.5 ಲಕ್ಷ ಬೆಲೆಬಾಳುವ ಕಾರುನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  ಆಸಕ್ತರು ಎಸ್ಎಂಎಸ್ ಮೂಲಕವಾದರೆ 99644 50787 ಅಥವಾ 82773 64449 ಸಂಖ್ಯೆಗೆ ಕಳುಹಿಸಬಹುದು. ಇ-ಮೇಲ್ ವಿಳಾಸ: madanpatel@gmail.comಗೆ ತಮ್ಮ ಶೀರ್ಷಿಕೆಗಳನ್ನು ರವಾನಿಸಬಹುದು. ಗುರುವಾರ (ಫೆ.7) ಸಂಜೆ 5ಗಂಟೆವರೆಗೂ ಅವಕಾಶ ನೀಡಲಾಗಿದೆ.

  ಒಂದು ದೂರವಾಣಿ ಸಂಖ್ಯೆಯಿಂದ ಒಂದೇ ಒಂದು ಶೀರ್ಷಿಕೆ ಕಳುಹಿಸಬೇಕು. ಜೊತೆಗೆ 'ಸತ್ಯಾನಂದ' ಚಿತ್ರದಲ್ಲಿ ನಿಮಗೆ ಇಷ್ಟವಾದ ಹಾಡು ಯಾವುದು ಎಂಬುದನ್ನೂ ತಿಳಿಸಬೇಕು ಎಂಬೆರೆಡು ಕಂಡೀಷನ್ಸ್ ಇಟ್ಟಿದ್ದಾರೆ ಮದನ್ ಪಟೇಲ್.

  ಚಿತ್ರಕ್ಕೆ ಸೂಕ್ತ ಶೀರ್ಷಿಕೆ ಸಿಕ್ಕ ಕೂಡಲೆ ಸಿನಿಮಾ ರಿಲೀಸ್ ಮಾಡಬೇಕು ಎಂದು ಮದನ್ ಪಟೇಲ್ ನಿರ್ಧರಿಸಿದ್ದಾರೆ. ಸ್ವಾಮಿ ನಿತ್ಯಾನಂದನ ಕಡೆಯಿಂದ ಮತ್ತೆ ಚಿತ್ರದ ಬಿಡುಗಡೆಗೆ ಅಡ್ಡಿಯಾದರೆ. ಈ ಬಾರಿ ಸುಮ್ಮನಿರಲ್ಲ. ಅವರ ಬಿಡದಿ ಆಶ್ರಮದ ಬಳಿ ತಮಟೆ ಚಳವಳಿ ಹಮ್ಮಿಕೊಳ್ಳುತ್ತೇನೆ. ಅವರು ಅಲ್ಲಿಂದ ಕಾಲ್ಕೀಳುವವರೆಗೂ ತಮಟೆ ಚಳವಳಿಯಲ್ಲಿ ಹಿಂಬಾಲಿಸುತ್ತೇವೆ ಎಂದು ಮದನ್ ಎಚ್ಚರಿಸಿದ್ದಾರೆ.

  ಚಿತ್ರದ ನಾಯಕ ನಟ ರವಿ ಚೇತನ್ ಅವರು ಮಾತನಾಡುತ್ತಾ, ನನಗೆ ಜೀವ ಬೆದರಿಕೆ ಇದ್ದು. ನನಗಾಗಲಿ ನನ್ನ ಕುಟುಂಬಕ್ಕಾಗಲಿ ಏನಾದರೂ ಆದರೆ ಅದಕ್ಕೆ ನಿತ್ಯಾನಂದನೇ ಹೊಣೆ. ಹಾಗೆಂದು ನಾನು ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ನೀಡಿದ್ದೇನೆ ಎಂದರು. (ಏಜೆನ್ಸೀಸ್)

  English summary
  Kannada films producer Madan Patel decides to change his "Satyananda" film title. He invites for title contest. The title should be sent to madhanpatelgmail.com, interested persons can SMS title to phone No. 9964450787 and 8277364490. Last date 7th Feb, at 5 pm. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X