ಮದಗಜ ತೆಲುಗು ಟೀಸರ್‌ಗೆ ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿ

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾ ತೆಲುಗಿನಲ್ಲಿ ಅಬ್ಬರಿಸಲಿದೆ. ಕನ್ನಡದಲ್ಲಿ ಸದ್ದು ಮಾಡ್ತಿದ್ದ ಮದಗಜ ಈಗ ಗಡಿರಾಜ್ಯ ಆಂಧ್ರ-ತೆಲಂಗಾಣದಲ್ಲಿ ಘರ್ಜಿಸಲಿದೆ.

ಹೊಸ ವರ್ಷದ ಪ್ರಯುಕ್ತ ಮದಗಜ ಸಿನಿಮಾದ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ. ಈ ಕುರಿತು ಸ್ವತಃ ಶ್ರೀಮುರಳಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಇದೀಗ, ತೆಲುಗು ಟೀಸರ್ ಬಗ್ಗೆ ಮತ್ತೊಂದು ಮಾಹಿತಿ ಹೊರಬಿದ್ದಿದೆ.

ಮದಗಜ ತೆಲುಗು ಭಾಷೆಯಲ್ಲಿ ಸ್ವತಃ ಶ್ರೀಮುರಳಿ ಅವರೇ ಹಿನ್ನೆಲೆ ಧ್ವನಿ ನೀಡಿದ್ದಾರೆ. ತೆಲುಗು ಡಬ್ ಮಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಟೀಸರ್‌ಗೆ ಮಾತ್ರನಾ ಅಥವಾ ಸಿನಿಮಾ ಮೂರ್ತಿ ಶ್ರೀಮುರಳಿ ಅವರೇ ಡಬ್ ಮಾಡ್ತಾರಾ ಕುತೂಹಲ ಮೂಡಿಸಿದೆ.

Madha Gaja Telugu version will have the sri murali lending his voice

ಇನ್ನುಳಿದಂತೆ ಜನವರಿ 1 ರಂದು ಬೆಳಗ್ಗೆ 10.10 ನಿಮಿಷಕ್ಕೆ ಆನಂದ್ ಆಡಿಯೋದಲ್ಲಿ ಮದಗಜ ತೆಲುಗು ಟೀಸರ್ ರಿಲೀಸ್ ಆಗಲಿದೆ. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, 'ಅಯೋಗ್ಯ' ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ.

Recommended Video

ಮದಗಜ ನಿಗೆ ಸಾಥ್ ನೀಡಿದ ಪ್ರಶಾಂತ್ ನೀಲ್ | PrashanthNeel | Filmibeat Kannada

ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿರುವ ಮದಗಜ ಸಿನಿಮಾ ತಂಡ ಅಂತಿಮ ಹಂತದ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ. ಶ್ರೀಮುರಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ.

ಡಿಸೆಂಬರ್ 17 ರಂದು ಶ್ರೀಮುರಳಿಯ ಹುಟ್ಟುಹಬ್ಬದ ಪ್ರಯುಕ್ತ ಮದಗಜ ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ಇದೀಗ, ಹೊಸ ಹರ್ಷದ ಪ್ರಯುಕ್ತ ತೆಲುಗು ವರ್ಷನ್ ಟೀಸರ್ ರಿಲೀಸ್ ಮಾಡುತ್ತಿದ್ದಾರೆ.

More from Filmibeat

English summary
Madha Gaja Telugu version will have the lead hero sri murali lending his voice. The Roaring star at the recording studio dubbed for the Teaser which will out on January 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X