twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಬಜೆಟ್ 25 ಕೋಟಿ.. ಒಟ್ಟು ಗಳಿಕೆ 50 ಕೋಟಿ: ಏನಿದು 'ಮದಗಜ'ನ ಲೆಕ್ಕ?

    |

    ರೋರಿಂಗ್ ಸ್ಟಾರ್ ಶ್ರೀಮುರಳಿಯ 'ಮದಗಜ' ಡಿಸೆಂಬರ್ 03ರಂದು ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿತ್ತು. ಮಾಸ್ ಸ್ಟೋರಿ ಜೊತೆ ತಾಯಿ ಸೆಂಟಿಮೆಂಟ್ ಸೇರಿಸಿ ಹೆಣೆದ ಕತೆ ಇತ್ತು. ಮೊದಲ ವಾರದಲ್ಲಿ 'ಮದಗಜ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. 25 ಕೋಟಿ ವೆಚ್ಚದ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ದಾಖಲೆ ಬರೆಯುತ್ತಾ? ಅನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಅದರಂತೆ 'ಮದಗಜ' ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

    ಪ್ರೇಕ್ಷಕರು ಮಾಸ್ ಸಿನಿಮಾ 'ಮದಗಜ' ನೋಡಲು ಚಿತ್ರಮಂದಿರಕ್ಕೆ ದಾಪುಗಾಲು ಹಾಕುತ್ತಿದ್ದಾರೆ. ಕರ್ನಾಟಕದಲ್ಲಿಯೇ ಮೊದಲ ವಾರ ಸುಮಾರು 800 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಬಹುತೇಕ ಕಡೆ ಮೊದಲ ಮೂರು ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಹೀಗಾಗಿ ಎರಡನೇ ವಾರಕ್ಕೆ 'ಮದಗಜ' ಸಿನಿಮಾ ತಂಡ ವಿಜಯಯಾತ್ರೆಯನ್ನು ಪ್ಲ್ಯಾನ್ ಮಾಡಿತ್ತು. ಅದರಂತೆ ಮೊದಲ ಹಂತದ ವಿಜಯಯಾತ್ರೆಯನ್ನು ಮುಗಿಸಿ, ಬೆಂಗಳೂರಿಗೆ ಮರಳಿದೆ. ಈ ಮಧ್ಯೆ 'ಮದಗಜ' ಗಳಿಕೆ 50 ಕೋಟಿ ದಾಟಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಹಾಗಿದ್ದರೆ, ಮದಗಜನ 50 ಕೋಟಿ ಲೆಕ್ಕವೇನು?

    'ಮದಗಜ' ವಿಜಯಯಾತ್ರೆ ಮುಗೀತು

    'ಮದಗಜ' ವಿಜಯಯಾತ್ರೆ ಮುಗೀತು

    'ಮದಗಜ' ಸಿನಿಮಾ ವಿಜಯಯಾತ್ರೆ ಡಿಸೆಂಬರ್ 12 ಹಾಗೂ 13ರಂದು ಚಿತ್ರತಂಡ ಹಮ್ಮಿಕೊಂಡಿತ್ತು. ಭಾನುವಾರ ಬೆಳಗ್ಗೆ ಚನ್ನಪಟ್ಟಣದಿಂದ ಥಿಯೇಟರ್‌ಗಳಿಗೆ ಭೇಟಿ ನೀಡಲು ಆರಂಭಿಸಿತ್ತು ಚಿತ್ರತಂಡ. ಚನ್ನಪಟ್ಟಣ್ಣದ ಶಿವಾನಂದ ಚಿತ್ರಮಂದಿರದಿಂದ ಶುರುವಾಗಿ, ಮಂಡ್ಯದ ಸಂಜಯ್ ಚಿತ್ರಮಂದಿರ, ಶ್ರೀರಂಗಪಟ್ಟಣದ ಶ್ರೀದೇವಿ ಚಿತ್ರಮಂದಿರ, ಮೈಸೂರಿನ ವುಡ್ ಲ್ಯಾಂಡ್ ಚಿತ್ರಮಂದಿರ ಸೇರಿದಂತೆ ಡಿಆರ್‌ಸಿ ಥಿಯೇಟರ್‌ಗೂ ಭೇಟಿ ನೋಡಿದ್ದರು. ಈ ವೇಳೆ ಅಭಿಮಾನಿಗಳ ಜೊತೆ ಶ್ರೀ ಮುರಳಿ ಬೈಕ್ ರೈಡ್ ಕೂಡ ಮಾಡಿದ್ದರು.

    2ನೇ ದಿನ ವಿಜಯಯಾತ್ರೆ ಹೇಗಿತ್ತು?

    2ನೇ ದಿನ ವಿಜಯಯಾತ್ರೆ ಹೇಗಿತ್ತು?

    ಸೋಮವಾರ ಕೂಡ ಶ್ರೀ ಮುರಳಿ ವಿಜಯಯಾತ್ರೆ ಮುಂದುವರೆದಿತ್ತು. ಬೇಲೂರಿನ ರೇಣುಕಾ ಚಿತ್ರಮಂದಿರಕ್ಕೆ ಭೇಟಿ ನೀಡಲಾಗಿತ್ತು. ಬಳಿಕ ಹಾಸನದ ಎಸ್‌ಬಿಜಿ ಥಿಯೇಟರ್, ಕುಣಿಗಲ್‌ನ ಆಕಾಶ್, ತುಮಕೂರಿನ ಕೃಷ್ಣ ಚಿತ್ರಮಂದಿರಕ್ಕೆ ಶ್ರೀಮುರಳಿ, ಕೆಜಿಎಫ್ ನಟ ಗರುಡ ರಾಮ್ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಭೇಟಿ ನೀಡಿದ್ದರು. ಈ ಎರಡು ದಿನಗಳಲ್ಲಿ 4 ಜಿಲ್ಲೆಗಳು, 4 ತಾಲೂಕುಗಳು ಸೇರಿದಂತೆ 12 ಚಿತ್ರಮಂದಿರಗಳಿಗೆ ಭೇಟಿ ಕೊಟ್ಟು ವಿಜಯೋತ್ಸವ ಆಚರಿಸಿದೆ.

    12 ದಿನಗಳಲ್ಲಿ ಶ್ರೀಮುರಳಿ ಮದಗಜ ಗಳಿಸಿದ್ದೆಷ್ಟು?

    12 ದಿನಗಳಲ್ಲಿ ಶ್ರೀಮುರಳಿ ಮದಗಜ ಗಳಿಸಿದ್ದೆಷ್ಟು?

    ಡಿಸೆಂಬರ್ 3 ರಂದು ತೆರೆಕಂಡಿದ್ದ ಸಿನಿಮಾಗೆ ಮೊದಲ ಮೂರು ದಿನದ ಗಳಿಕೆಯೇ 15 ಕೋಟಿ ದಾಟಿತ್ತು. ಈಗ 12 ದಿನಗಳತ್ತ ಕಾಲಿಡುತ್ತಿದ್ದು, ಸಿನಿಮಾದ ಬಾಕ್ಸಾಫೀಸ್‌ನಲ್ಲಿ ಭರ್ಜರಿಯಾಗೇ ಗಳಿಸಿದೆ ಎನ್ನಲಾಗಿದೆ. ಸುಮಾರು 26 ಕೋಟಿಗೂ ಅಧಿಕ ಮೊತ್ತದ ಹಣವನ್ನು 'ಮದಗಜ' ಸಿನಿಮಾಗೆ ಥಿಯೇಟರ್‌ ಕಲೆಕ್ಷನ್‌ನಿಂದಲೇ ಬಂದಿದೆ ಎನ್ನಲಾಗಿದೆ. ಹೀಗಾಗಿ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಸಿನಿಮಾ ಸಕ್ಸಸ್ ಲಿಸ್ಟ್ ಸೇರಿದೆ. ಸದ್ಯ 279 ಚಿತ್ರಮಂದಿರಗಳಲ್ಲಿ 'ಮದಗಜ' ಪ್ರದರ್ಶನ ಕಾಣುತ್ತಿದೆ.

    'ಮದಗಜ' ದೋಚಿದ ಒಟ್ಟು ಹಣವೆಷ್ಟು?

    'ಮದಗಜ' ದೋಚಿದ ಒಟ್ಟು ಹಣವೆಷ್ಟು?

    ಶ್ರೀಮುರಳಿ 'ಮದಗಜ' ಸಿನಿಮಾ ಬಿಡುಗಡೆಗೂ ಮುನ್ನವೇ ಲಾಭದಲ್ಲಿತ್ತು. ನಿರ್ಮಾಪಕ ಉಮಾಪತಿ ಜೇಬು ತುಂಬಿಸಿತ್ತು ಎನ್ನಲಾಗಿದೆ. ಹಿಂದಿ ಡಬ್ಬಿಂಗ್ ರೈಟ್ಸ್ 8 ಕೋಟಿ, ಸ್ಯಾಟಲೈಟ್ ರೈಟ್ಸ್ 6 ಕೋಟಿ, ಒಟಿಟಿ ರೈಟ್ಸ್ 6 ರಿಂದ 8 ಕೋಟಿಗೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಇನ್ನು ತೆಲುಗು, ತಮಿಳಿನಿಂದ 4 ಕೋಟಿ ದಾಟಿದೆ ಅನ್ನೋದು ಸುದ್ದಿ. ಒಟ್ಟು 24 ರಿಂದ 25 ಕೋಟಿ ಥಿಯೇಟರ್ ಕಲೆಕ್ಷನ್ ಬಿಟ್ಟು ಬಂದಿದೆ. ಇನ್ನು ಚಿತ್ರಮಂದಿರಗಳಿಂದ ಗ್ರಾಸ್ ಕೆಲಕ್ಷನ್ 26 ಕೋಟಿ ದಾಟಿದೆ. ಒಂದು ಅಂದಾಜಿನ ಪ್ರಕಾರ, ಈಗಾಗಲೇ ಶ್ರೀಮುರಳಿಯ 'ಮದಗಜ' 50 ಕೋಟಿ ಲೂಟಿ ಮಾಡಿದೆ ಅಂತಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಸರಿಯಾದ ಮಾಹಿತಿ ನೀಡಬೇಕಿದೆ.

    English summary
    Srimurali and madhagaja team finished first phase vijayayathre success meet in theaters. They covered 4 districts 4 taluks and 12 theaters. Madhagaja had collected 50 crores.
    Wednesday, December 15, 2021, 9:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X