ಪಾತ್ರಕ್ಕಾಗಿ ಈ ರೀತಿ ಬದಲಾದ ನಟ ಯಾರೆಂದು ಗುರುತಿಸಿ
ಕಲಾವಿದರು ಒಂದು ಪಾತ್ರವನ್ನು ಪ್ರೀತಿಸಬೇಕು. ಆ ಪಾತ್ರ ಏನು ಕೇಳುತ್ತದೆಯೋ ಅದನ್ನು ನೀಡಬೇಕು. ಆಗ ಮಾತ್ರ ಒಂದು ಪಾತ್ರ ಯಶಸ್ವಿಯಾಗಿ ಪ್ರೇಕ್ಷಕರನ್ನು ತಲುಪುತ್ತದೆ.
ದಕ್ಷಿಣ ಭಾರತದ ಜನಪ್ರಿಯ ನಟರೊಬ್ಬರು ಈಗ ಪಾತ್ರಕ್ಕಾಗಿ ಮಾಡಿರುವ ಪ್ರಯತ್ನ ಎಲ್ಲರಿಗೆ ಅಚ್ಚರಿ ಮೂಡಿಸಿದೆ. ಆ ಫೋಟೋ ಈ ಕೆಳಗೆ ಇದ್ದು, ಆ ನಟ ಯಾರು ಎಂದು ನೀವು ಕೂಡ ಊಹಿಸಬಹುದಾಗಿದೆ.
ಅಂದಹಾಗೆ, ಪಾತ್ರಕ್ಕಾಗಿ ಈ ರೀತಿ ಬದಲಾಗಿರುವುದು ಕಾಲಿವುಡ್ ನಟ ಮಾಧವನ್. ಇಷ್ಟು ದಿನ ನಟನೆಯಷ್ಟೇ ಮಾಡುತ್ತಿದ್ದ ಇರುವ ಈಗ ನಿರ್ದೇಶನಕ್ಕೆ ಇಳಿದಿದ್ದಾರೆ. ತಮ್ಮ ನಿರ್ದೇಶನದ ಮೊದಲ ಸಿನಿಮಾಗೆ ಈ ರೀತಿ ವೇಷ ತೊಟ್ಟಿದ್ದಾರೆ.

'ರಾಕೆಟ್ರಿ : ದಿ ನಂಬಿ ಎಫೆಕ್ಟ್' ಎಂಬ ಚಿತ್ರವನ್ನು ಮಾದವನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ISRO ವಿಜ್ಞಾನಿ ಎಸ್ ನಂಬಿ ನಾರಾಯಣನ್ ಪಾತ್ರವನ್ನ ಮಾಧವನ್ ನಿರ್ವಹಿಸುತ್ತಿದ್ದಾರೆ. ಸುಮಾರು 70 - 75 ವರ್ಷದ ಪಾತ್ರದಲ್ಲಿ ಮಾಧವನ್ ಸಿನಿಮಾದಲ್ಲಿ ಇರುತ್ತಾರೆ.
ಈ ಸಿನಿಮಾ ಬಗ್ಗೆ ತಮ್ಮ ಇನ್ಟಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಮಾಧವನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತಮಿಳು, ತೆಲಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.


Click it and Unblock the Notifications











