»   » ತೆಲುಗು ನಟ ನಾನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಮಾಧವಿ.!

ತೆಲುಗು ನಟ ನಾನಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಮಾಧವಿ.!

Posted By:
Subscribe to Filmibeat Kannada

ತೆಲುಗು ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್' ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹಲವು ಯುವ ನಟಿಯರು ಟಿವಿ ಸಂದರ್ಶನದಲ್ಲಿ ಬೆಚ್ಚಿಬೀಳಿಸುವ ಸಂಗತಿಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ತೆಲುಗು ಸಿನಿ ಲೋಕದಲ್ಲಿ ಯಾವ ರೀತಿ 'ಕಾಸ್ಟಿಂಗ್ ಕೌಚ್' ನಡೆಯುತ್ತಿದೆ. ನಟಿಯರನ್ನ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ನಗ್ನ ಸತ್ಯವನ್ನ ಈಗ ನಟಿ ಮಾಧವಿ ಲತಾ ಬಿಚ್ಚಿಟ್ಟಿದ್ದಾರೆ.

ಅಷ್ಟೇ ಅಲ್ಲದೇ ತೆಲುಗು ಸ್ಟಾರ್ ನಟ ನಾನಿ ಬಗ್ಗೆ ಅಚ್ಚರಿ ಹೇಳಿಕೆ ನೀಡುವುದರ ಮೂಲಕ ತೆಲುಗು ಇಂಡಸ್ಟ್ರಿಯನ್ನ ಕಾಡುತ್ತಿದ್ದಾರೆ. ಅಷ್ಟಕ್ಕೂ, ಮಾಧವಿ ಲತಾ ಬಹಿರಂಗಪಡಿಸಿದ ಆ ನಗ್ನ ಸತ್ಯಗಳೇನು.? ನಾನಿ ಬಗ್ಗೆ ಏನಂದ್ರು.? ಮಾಧವಿ ಲತಾ ಯಾವ ರೀತಿ ಕಿರುಕುಳಕ್ಕೆ ಒಳಗಾಗಿದ್ದರು ಎಂಬ ಸಂಪೂರ್ಣ ವಿವರಗಳನ್ನ ತಿಳಿಯಲು ಮುಂದೆ ಓದಿ....

ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದ ನಟ

ಮಾಧವಿ ಲತಾ ಅಭಿನಯಿಸುತ್ತಿದ್ದ ಸಿನಿಮಾ ಚಿತ್ರೀಕರಣ ವೇಳೆ ನಟನೊಬ್ಬ ಬಲವಂತವಾಗಿ ಎಳೆದು ಮುತ್ತಿಡಲು ಯತ್ನಿಸಿದ್ದ ಎಂಬ ವಿಷ್ಯವನ್ನ ಬಹಿರಂಗಪಡಿಸಿದ್ದಾರೆ. ''ಬಿಡುವಿನ ವೇಳೆಯಲ್ಲಿ ನಾಯಕ ಕರೆದ ಅಂತ ಹೇಳಿ ಅವರ ರೂಮಿಗೆ ಹೋಗಿದ್ದೇ. ತುಂಬ ಸಿಗರೇಟ್ ಸೇದುತ್ತಿದ್ದ. ಏನು ಕರೆದಿದ್ದು ಅಂತ ಕೇಳಿದೆ. ಅದಕ್ಕೆ ಆತ ಸುಮ್ಮನೆ ತುಂಬ ದಿನ ಆಯ್ತಲ್ವ ಮಾತನಾಡಿ ಅದಕ್ಕೆ ಎಂದ. ಅದಕ್ಕೆ ಕೆಳಗೆ ಕಾಫಿ ಶಾಪ್ ಗೆ ಬರಬಹುದಿತ್ತು ಅಲ್ವಾ ಅಂದೆ. ಸರಿ ಅಲ್ಲೇ ಹೋಗೋಣ ಬಿಡು ಅಂದ''.....

ಹಿಂದೆಯಿಂದ ಬಂದು ಹಿಡಿದುಕೊಂಡ

''ಸರಿ ನಾನು ಹೋಗ್ತೀನಿ ಅಂತ ಹೇಳಿದೆ. ಅದಕ್ಕೆ ಅವರು ನಾನು ಬಾಗಿಲು ಹತ್ರ ಬರ್ತೀನಿ ಇರು ಅಂತ ಹೇಳಿ ಬಂದ್ರು. ಬಂದ ತಕ್ಷಣ ಹಿಂದೆಯಿಂದ ನನ್ನನ್ನ ಹಿಡ್ಕೊಂಡು ಕಿಸ್ ಮಾಡೋದಕ್ಕೆ ಮುಂದಾದ. ನಾನು ಒದ್ದಾಡಿದೆ. ನಂತರ ಅವನ ಕೈಯಿಂದ ಬಿಡಿಸುಕೊಂಡು ಬಂದೆ. ಆಮೇಲೆ ಸಾರಿ ಸಾರಿ ಅಂದ. ನಾನು ಅಲ್ಲಿಂದ ಬಂದೆ. ಆಮೇಲೆ ಅವರ ಜೊತೆ ಮಾತನಾಡಲೇ ಇಲ್ಲ'' ಎಂದು ಘಟನೆಯನ್ನ ಹಂಚಿಕೊಂಡರು.

ನಾನಿ ಬಗ್ಗೆ ಹೇಳಿದ್ದೇನು.?

ಟಿವಿ ನಿರೂಪಕಿ ಮಾಧವಿ ಲತಾ ಅವರಿಗೆ ''ನೀವು ನಾನಿ ಜೊತೆ ಅಭಿನಯಿಸಿದ್ದೀರಾ, ಅವರ ಬಗ್ಗೆ ಕೇಳಿದ ರೂಮರ್ ಏನು'' ಎಂದು ಕೇಳಿದರು. ಅದಕ್ಕೆ ಮಾಧವಿ ''ನೀವು ಏನೂ ಕೇಳಿದ್ದೀರೋ ನಾನು ಅದೇ ಕೇಳಿದ್ದೀನಿ'' ಅಂದರು. ಜೊತೆಗೆ ''ಸಾಮಾನ್ಯವಾಗಿ ಹೀರೋಗಳ ಬಗ್ಗೆ ರೂಮರ್ ಅಂತ ಕೇಳಿದ್ರೆ, ಅದು ನಟಿಯರ ಬಗ್ಗೆನೇ ಇರುತ್ತೆ. ಸೋ ಇದು ಅಷ್ಟೇ. ಇದು ಕೇವಲ ನಾನಿ ಬಗ್ಗೆ ಮಾತ್ರವಲ್ಲ. ಎಲ್ಲ ನಟರ ಬಗ್ಗೆಯೂ ಇದೆ'' ಎಂದರು. ಆದ್ರೆ, ಆ ರೂಮರ್ ಏನು? ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.

ಯಾರು ಈ ಮಾಧವಿ ಲತಾ.?

ಮಾಧವಿ ಲತಾ ತೆಲುಗಿನ ಖ್ಯಾತ ನಟಿ. 2007 ರಲ್ಲಿ ಮಹೇಶ್ ಬಾಬು 'ಅತಿಥಿ' ಚಿತ್ರದಲ್ಲಿ ಎಂಟ್ರಿಯಾಗಿದ್ದರು. ನಂತರ 'ನಚ್ಚಾವೇ', 'ಶ್', 'ಸ್ನೇಹಿತಡು', 'ಹುಷಾರು', 'ಅರವಿಂದ್-2', 'ಅಂಬಾಲ' ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಕಳೆದ ಮೂರು ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ.

Read more about: casting couch tollywood kollywood
English summary
Telugu Actress Madhavi Latha has Reveals Shocking Comments On telugu actor Hero Nani in tv interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X