ರಕುಲ್ ಪ್ರೀತ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಮಾಧವಿ ಲತಾ.!

By Bharath Kumar

ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಸಮಸ್ಯೆ ಹೆಚ್ಚಿದೆ ಎಂದು ನಟಿಯರು ಆರೋಪಿಸಿದ್ದರು. ನಟಿ ಶ್ರೀರೆಡ್ಡಿ ಮತ್ತು ಮಾಧವಿ ಲತಾ ಇಬ್ಬರು ಟಾಲಿವುಡ್ ಕರಾಳ ಮುಖವನ್ನ ಬಿಚ್ಚಿಟ್ಟಿದ್ದರು.

ಇದರ ವಿರುದ್ಧವಾಗಿ ತೆಲುಗು ಕಲಾವಿದರು ಸಾಮೂಹಿಕ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಟಿ ರಕುಲ್ ಪ್ರೀತ್ ಸಿಂಗ್ ಭಾಗವಹಿಸಿ 'ಕಾಸ್ಟಿಂಗ್ ಕೌಚ್' ಬಗ್ಗೆ ಮಾತನಾಡಿದ್ದರು.

''ಸದ್ಯ ಎಲ್ಲೇ ಹೋದರು ಮಾಧ್ಯಮದವರು ಕಾಸ್ಟಿಂಗ್ ಕೌಚ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಅದು ತುಂಬ ಕಿರಿಕಿರಿ ಉಂಟು ಮಾಡುತ್ತಿದೆ. ನನ್ನ 5 ವರ್ಷದ ವೃತ್ತಿ ಜೀವನದಲ್ಲಿ ನನಗೆ ಎಲ್ಲಿಯೂ ಈ ಅನುಭವ ಆಗಿಲ್ಲ. ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಇಲ್ಲ. ಇದೊಂದು ಉತ್ತಮ ಸಿನಿರಂಗ'' ಎಂದು ಹೇಳಿಕೆ ನೀಡಿದ್ದರು.

Madhavi Latha Sensational Comments On Rakul Preet Singh

ಈ ಹೇಳಿಕೆಯನ್ನ ಖಂಡಿಸಿರುವ ನಟಿ ಮಾಧವಿ ಲತಾ, ರಕುಲ್ ಪ್ರೀತ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ. ''ಒಂದು ಹೆಣ್ಣು ಎಂಬ ಕಾರಣಕ್ಕೆ ಕೀಳಾಗಿ ನೋಡುವುದು ಎಲ್ಲ ರಂಗದಲ್ಲೂ ಇದೆ. ಸಿನಿಮಾ ಕ್ಷೇತ್ರದಲ್ಲಿ ಇದು ಹೆಚ್ಚಾಗಿದೆ. ರಕುಲ್ ಈ ಬಗ್ಗೆ ತಪ್ಪು ಹೇಳುತ್ತಿದ್ದಾರೆ. ಇದನ್ನ ನಾನು ಒಪ್ಪುವುದಿಲ್ಲ'' ಎಂದು ಮಾಧವಿ ಲತಾ ಮಾತನಾಡಿದ್ದಾರೆ.

ಮಾತು ಮುಂದುವರೆಸಿದ ಮಾಧವಿ ''ನಾನು ಸಿನಿಮಾ ರಂಗ ಕೆಟ್ಟದ್ದು ಅಂತ ಹೇಳುತ್ತಿಲ್ಲ. ಕಾಸ್ಟಿಂಗ್ ಕೌಚ್ ಎಲ್ಲ ಕಡೆಯೂ ಇದೆ ಎನ್ನುತ್ತಿದ್ದೇನೆ ಅಷ್ಟೇ. ಅದನ್ನ ಹೇಗೆ ತಪ್ಪಿಸಿಕೊಂಡು ಮುಂದಕ್ಕೆ ಹೋಗುವುದು ಎಂಬುದು ಜಾಣ್ಮೆ. ಆದ್ರೆ, ಇದು ಇಂಡಸ್ಟ್ರಿಯಲ್ಲಿ ಇಲ್ಲವೇ ಇಲ್ಲ ಎನ್ನುವುದು ತಪ್ಪು'' ಎನ್ನುತ್ತಾರೆ ಮಾಧವಿ.

Madhavi Latha Sensational Comments On Rakul Preet Singh

ಇನ್ನು ರಕುಲ್ ಪ್ರೀತ್ ಹೇಳಿಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ಒಂದು ವೇಳೆ 'ಕಾಸ್ಟಿಂಗ್ ಕೌಚ್' ಇಂಡಸ್ಟ್ರಿಯಲ್ಲಿ ಇಲ್ಲ ಎನ್ನುವುದಾದರೇ ದೊಡ್ಡ ದೊಡ್ಡ ಚರ್ಚೆ ಕಾರ್ಯಕ್ರಮಗಳನ್ನ ನಡೆಸುತ್ತಿರುವ ನಟಿಯರು ಹೇಳುತ್ತಿರುವುದು ಸುಳ್ಳಾ.? ಎಂದು ಪ್ರಶ್ನಿಸುತ್ತಿದ್ದಾರೆ.

More from Filmibeat

English summary
Actress Madhavi Latha Sensational Comments On Rakul Preet Singh. Actress who had exposed casting couch in Telugu industry replying to Rakul Preet Singh's comments said as a star heroine she doesn't feel the pain, but that they are facing hardships in the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X