»   » 'ಮಾಸ್ತಿಗುಡಿ' ವಿಲನ್ ಉದಯ್ ಗೆ ಧ್ವನಿ ನೀಡಿದ ಮಧು ಗುರುಸ್ವಾಮಿ

'ಮಾಸ್ತಿಗುಡಿ' ವಿಲನ್ ಉದಯ್ ಗೆ ಧ್ವನಿ ನೀಡಿದ ಮಧು ಗುರುಸ್ವಾಮಿ

Posted By:
Subscribe to Filmibeat Kannada

'ಮಾಸ್ತಿಗುಡಿ' ಚಿತ್ರದ ಖಳನಾಯಕ ಉದಯ್ ಅವರ ಪಾತ್ರಕ್ಕೆ ಕನ್ನಡದ ಮತ್ತೊಬ್ಬ ಖಳನಟ ಮಧು ಗುರುಸ್ವಾಮಿ ಡಬ್ಬಿಂಗ್ ಮಾಡಿದ್ದಾರೆ. ಕಳೆದ ಕೆಲದಿನಗಳ ಹಿಂದೆ 'ಮಾಸ್ತಿಗುಡಿ' ಚಿತ್ರದ ಮತ್ತೊಬ್ಬ ವಿಲನ್ ಅನಿಲ್ ಅವರ ಪಾತ್ರಕ್ಕೆ ನಟ ವಸಿಷ್ಠ ಸಿಂಹ ಧ್ವನಿ ನೀಡಿದ್ದರು. ಈಗ ಉದಯ್ ಅವರ ಪಾತ್ರಕ್ಕೆ ಡಬ್ಬಿಂಗ್ ಪೂರ್ಣಗೊಂಡಿದೆ.['ಮಾಸ್ತಿ ಗುಡಿ' ಶೂಟಿಂಗ್ ವೇಳೆ ಕೆರೆಗೆ ಹಾರಿದ ಖಳನಾಯಕ ಅನಿಲ್, ಉದಯ್ ಸಾವು]

'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ನೀರಿಗೆ ಹಾರಿ ಖಳನಟ ಅನಿಲ್ ಮತ್ತು ಉದಯ್ ಇಬ್ಬರು ಸಾವಿಗೀಡಾಗಿದ್ದರು. ಹೀಗಾಗಿ, ದುರಂತ ಸಾವಿಗೀಡಾಗಿದ್ದ ಇಬ್ಬರು ಖಳ ನಟರಿಗೆ ಬೇರೆ ಕಲಾವಿದರಿಂದ ಧ್ವನಿ ಕೊಡಿಸಲಾಗುತ್ತಿದೆ.['ಮಾಸ್ತಿ ಗುಡಿ' ಖಳನಟರ ದುರಂತ ಸಾವು: ದುರ್ಘಟನೆಯ ಸಂಪೂರ್ಣ ವಿವರ]


Madhu Guruswamy is lending his voice for Uday in Masti Gudi

ಉದಯ್ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವ ಮಧು ಗುರುಸ್ವಾಮಿ, ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ', 'ವಜ್ರಕಾಯ', ಶರಣ್ ಅಭಿನಯದ 'ಜೈ ಮಾರುತಿ 800' ಚಿತ್ರಗಳು ಸೇರಿದಂತೆ ಕನ್ನಡದ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದಕ್ಕೂ ಮಿಗಿಲಾಗಿ ಉದಯ್ ಅವರಿಗೆ ಸ್ನೇಹಿತನೂ ಕೂಡ ಆಗಿದ್ದರು.['ಮಾಸ್ತಿಗುಡಿ' ಚಿತ್ರದ ಅಸಲಿ ಕಥೆ ಮತ್ತು ಚಿತ್ರಕಥೆ ಏನು?]


Madhu Guruswamy is lending his voice for Uday in Masti Gudi

ಸದ್ಯ, 'ಮಾಸ್ತಿಗುಡಿ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು. ದುನಿಯಾ ವಿಜಯ್ ಈ ಚಿತ್ರದ ನಾಯಕನಾಗಿದ್ದು, ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಸುಂದರ್ ಪಿ ಗೌಡ ನಿರ್ಮಾಣ ಮಾಡಿದ್ದು, ಸಾಹಸ ನಿರ್ದೇಶಕ ರವಿವರ್ಮ ಸ್ಟಂಟ್ ಮಾಡಿದ್ದಾರೆ. ಉಳಿದಂತೆ ಅಮೂಲ್ಯ, ಕೃತಿಕರಬಂಧ, ಅನಿಲ್, ಉದಯ್, ರಂಗಾಯಣ ರಘು, ಸುಹಾಸಿನಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದರು.

English summary
Actor Madhu Guruswamy, who has Acted in Bhajarangi, Vajrakaya, Jai maruthi 800, has Recently finished Dubbing for late Actor-Stunt man Uday for Maasti Gudi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada