ಪ್ರಶಾಂತ್ ನೀಲ್ 'ಸಲಾರ್'ಗೆ ವಿಲನ್ ಆದ ಕನ್ನಡಿಗ; ಪ್ರಭಾಸ್ ಎದುರು 'ಭಜರಂಗಿ' ನಟನ ಅಬ್ಬರ

ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಇಂಡಿಯನ್ ಸಿನಿಮಾ ಸಲಾರ್ ಚಿತ್ರೀಕರಣ ಪ್ರಾರಂಭವಾಗಿದೆ. ಈಗಾಗಲೆ ಪ್ರಭಾಸ್, ನಟಿ ಶ್ರುತಿ ಹಾಸನ್ ಸೇರಿದಂತೆ ಬಹುತೇಕರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Recommended Video

ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada

ಪ್ರಭಾಸ್ ಸಲಾರ್ ನಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ಕುತೂಹಲ ಒಂದೆಡೆಯಾದರೆ, ಕನ್ನಡ ಕಲಾವಿದರು ಯಾರೆಲ್ಲ ಇರಲಿದ್ದಾರೆ ಎನ್ನುವ ಕೌತುಕ ಮತ್ತೊಂದೆಡೆ. ಇದೀಗ ಚಿತ್ರಕ್ಕೆ ವಿಲನ್ ಎಂಟ್ರಿಯಾಗಿರುವ ಮಾಹಿತಿ ಬಹಿರಂಗವಾಗಿದೆ. ಸಲಾರ್ ಸಿನಿಮಾದಲ್ಲಿ ವಿಲನ್ ಆಗಿ ಕನ್ನಡ ಖ್ಯಾತ ನಟ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಸಲಾರ್ ನ ವಿಲನ್ ಪಾತ್ರಕ್ಕೆ ಸಾಕಷ್ಟು ಕಲಾವಿದರ ಹೆಸರು ಕೇಳಿಬಂದಿತ್ತು. ಆದರೀಗ ಕನ್ನಡ ನಟ ಪ್ರಭಾಸ್ ಎದುರು ಅಬ್ಬರಿಸುತ್ತಿದ್ದಾರೆ.

ಪ್ರಭಾಸ್ ಗೆ ವಿಲನ್ ಆದ ಮಧು ಗುರುಸ್ವಾಮಿ

ಪ್ರಭಾಸ್ ಗೆ ವಿಲನ್ ಆದ ಮಧು ಗುರುಸ್ವಾಮಿ

ದಕ್ಷಿಣದ ಸ್ಟಾರ್ ಕಲಾವಿದರಿಂದ ಬಾಲಿವುಡ್ ಸ್ಟಾರ್ ಕಲಾವಿದರ ಹೆಸರುಗಳು ಜೋರಾಗಿ ಸದ್ದು ಮಾಡುತ್ತಿತ್ತು. ಆದರೀಗ ಪ್ರಭಾಸ್ ಎದುರು ಅಬ್ಬರಿಸಲು ಕನ್ನಡದ ಕಲಾವಿದ ಆಯ್ಕೆ ಆಗಿದ್ದಾರೆ. ಹೌದು, ಕನ್ನಡದ ಖ್ಯಾತ ನಟ ಮಧು ಗುರುಸ್ವಾಮಿ ಖಳ ನಟನಾಗಿ ಮಿಂಚುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಮಧು

ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ಮಧು

ಕನ್ನಡದಲ್ಲಿ ಭಜರಂಗಿ, ವಜ್ರಕಾಯ, ಮಫ್ತಿ ಸಿನಿಮಾಗಳಲ್ಲಿ ಮಿಂಚಿರುವ ಮಧು ಗುರುಸ್ವಾಮಿ, ತೆಲುಗು ಸಿನಿಮಾರಂಗದಲ್ಲೂ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಇದೀಗ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಮಧು ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಸಲಾರ್ ಬಗ್ಗೆ ಮಧು ಗುರುಸ್ವಾಮಿ ಹೇಳಿದ್ದೇನು?

ಸಲಾರ್ ಬಗ್ಗೆ ಮಧು ಗುರುಸ್ವಾಮಿ ಹೇಳಿದ್ದೇನು?

'ನನ್ನ ಮುಂದಿನ ಸಿನಿಮಾ ಸಲಾರ್ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ. ಸಲಾರ್ ಸಿನಿಮಾದಲ್ಲಿ ನಟಿಸಲು ಸಖತ್ ಎಕ್ಸಾಯಿಟ್ ಆಗಿದ್ದೀನಿ. ಅವಕಾಶ ನೀಡಿದ್ದಕ್ಕೆ ಪ್ರಶಾಂತ್ ನೀಲ್ ಮತ್ತು ವಿಜಯ್ ಕಿರಗಂದೂರ್ ಅವರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ವಿಜಯ್ ಸೇತುಪತಿ ಹೆಸರು ಕೇಳಿಬರುತ್ತಿತ್ತು

ವಿಜಯ್ ಸೇತುಪತಿ ಹೆಸರು ಕೇಳಿಬರುತ್ತಿತ್ತು

ಸಲಾರ್ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆೆ ಎನ್ನಲಾಗಿತ್ತು. ಆದರೀಗ ಮಧು ಸ್ವಾಮಿ ಆಯ್ಕೆ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದಹಾಗೆ ಸಲಾರ್ ಸಿನಿಮಾದ ಚಿತ್ರೀಕರಣ ಗೋದಾವರಿ ಗಣಿಯಲ್ಲಿ ನಡೆಯುತ್ತಿದೆ.

ಉಗ್ರಂ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್

ಉಗ್ರಂ ರಿಮೇಕ್ ಅಲ್ಲ ಎಂದ ಪ್ರಶಾಂತ್ ನೀಲ್

ಸಲಾರ್ ಸಿನಿಮಾ ಉಗ್ರಂ ಸಿನಿಮಾದ ರಿಮೇಕ್ ಇರಬಹುದಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಆದರೆ ಪ್ರಶಾಂತ್ ನೀಲ್ ಸ್ಪಷ್ಟನೆ ನೀಡುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ.

More from Filmibeat

English summary
Kannada Actor Madhu Guruswamy playing villain in Prabhas starrer Salaar movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X