For Quick Alerts
  ALLOW NOTIFICATIONS  
  For Daily Alerts

  'ಕೋಟಿಗೊಬ್ಬ' ಸುದೀಪ್ ಗಾಗಿ ಬಂದಳು ಸೌತ್ ಸ್ಟಾರ್ ನಟಿ

  By Naveen
  |
  Kotigobba 3 Kannada movie : ಕೋಟಿಗೊಬ್ಬ ಕಿಚ್ಚನಿಗೆ ಸಾಥ್ ಕೊಡ್ತಿದ್ದಾಳೆ ಮಲಯಾಳಿ ಬ್ಯೂಟಿ | Oneindia Kannada

  ನಟ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾದ ಶೂಟಿಂಗ್ ಈಗಾಗಲೇ ಶುರು ಆಗಿದೆ. ಚಿತ್ರದ ನಟ, ನಟಿ ಇಲ್ಲದೆ ಚಿತ್ರೀಕರಣ ಶುರು ಮಾಡಿದ್ದ ನಿರ್ದೇಶಕರು ಕೆಲ ಸಣ್ಣ ಪುಟ್ಟ ದೃಶ್ಯಗಳ ಶೂಟಿಂಗ್ ಪ್ರಾರಂಭ ಮಾಡಿದ್ದರು. ಆದರೆ, ಇದೀಗ ಈ ಸಿನಿಮಾಗೆ ಒಬ್ಬ ನಾಯಕ ನಟಿ ಸಿಕ್ಕಿದ್ದಾಳೆ.

  'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ! 'ಕೋಟಿಗೊಬ್ಬ-3' ಚಿತ್ರದಲ್ಲಿ ನಟಿಸಲು ಸುದೀಪ್ ಗೆ ದಾಖಲೆಯ ಸಂಭಾವನೆ!

  ಸುದೀಪ್ ಗೆ ಈ ಬಾರಿ ಮತ್ತೊಬ್ಬ ಪರಭಾಷೆಯ ಸ್ಟಾರ್ ನಟಿ ಜೋಡಿಯಾಗಿದ್ದಾರೆ. 'ಹೆಬ್ಬುಲಿ' ಸಿನಿಮಾದಲ್ಲಿ ಮೊದಲ ಬಾರಿಗೆ ಅಮಲಾ ಪೌಲ್ ಕಾಣಿಸಿಕೊಂಡಿದ್ದು, 'ಕೋಟಿಗೊಬ್ಬ 3' ಚಿತ್ರದ ಮೂಲಕ ಸಹ ಮತ್ತೊಬ್ಬ ಮಲೆಯಾಳಂ ನಟಿ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ, ಬಹು ನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾದಲ್ಲಿ ಸುದೀಪ್ ಗೆ ಜೋಡಿಯಾಗಿರುವುದು ನಟಿ ಮಡೋನ ಸೆಬಾಸ್ಟಿಯನ್. ಮುಂದೆ ಓದಿ...

  ಕನ್ನಡಕ್ಕೆ ಬಂದ ಮಡೋನ ಸೆಬಾಸ್ಟಿಯನ್

  ಕನ್ನಡಕ್ಕೆ ಬಂದ ಮಡೋನ ಸೆಬಾಸ್ಟಿಯನ್

  ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಪರಭಾಷ ಚೆಲುವೆಯ ಆಗಮನ ಆಗಿದೆ. ಮಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ನಟಿಸಿರುವ ಮಡೋನ ಸೆಬಾಸ್ಟಿಯನ್ ಇದೀಗ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾಗೆ ಆಯ್ಕೆ ಆಗಿದ್ದಾರೆ. ಇದು ಮಡೋನ ಅವರ ಮೊದಲ ಕನ್ನಡ ಸಿನಿಮಾ ಆಗಿದೆ.

  'ಪ್ರೇಮಂ' ಖ್ಯಾತಿಯ ನಟಿ

  'ಪ್ರೇಮಂ' ಖ್ಯಾತಿಯ ನಟಿ

  ಮಡೋನ ಸೆಬಾಸ್ಟಿಯನ್ ಸದ್ಯಕ್ಕೆ ಮಲೆಯಾಳಂ, ತಮಿಳು, ತೆಲುಗು ಭಾಷೆಯ ಏಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಎರಡು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಈಗ ಕನ್ನಡದ 'ಕೋಟಿಗೊಬ್ಬ 3' ಸಿನಿಮಾ ಸೇರಿಕೊಂಡಿದೆ. 'ಪ್ರೇಮಂ' ಚಿತ್ರದ ಮೂಲಕ ಮಡೋನ ಸಿನಿ ಕೆರಿಯರ್ ಶುರು ಆಗಿದ್ದು, ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದೆ.

  'ಪವರ್ ಪಾಂಡಿ'ಯಲ್ಲಿ ನಟಿಸಿದ್ದರು

  'ಪವರ್ ಪಾಂಡಿ'ಯಲ್ಲಿ ನಟಿಸಿದ್ದರು

  ತಮಿಳಿನ 'ಪವರ್ ಪಾಂಡಿ' ಸಿನಿಮಾದಲ್ಲಿ ಧನುಷ್ ಜೋಡಿಯಾಗಿ ಮಡೋನ ಸೆಬಾಸ್ಟಿಯನ್ ನಟಿಸಿದ್ದರು. ವಿಶೇಷ ಅಂದರೆ ಈ ಚಿತ್ರವೇ ಕನ್ನಡದಲ್ಲಿ 'ಅಂಬಿ ನಿಂಗೆ ವಯಸ್ತಾಯ್ತೋ' ಸಿನಿಮಾವಾಗ್ತಿದೆ. ಇಲ್ಲಿ ಧನುಷ್ ಪಾತ್ರದಲ್ಲಿ ಸುದೀಪ್, ಮಡೋನ ಪಾತ್ರದಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ.

  ಕನ್ನಡ ಚಿತ್ರದಲ್ಲಿ ಅಫ್ತಾಬ್ ಶಿವದಾಸಾನಿ

  ಕನ್ನಡ ಚಿತ್ರದಲ್ಲಿ ಅಫ್ತಾಬ್ ಶಿವದಾಸಾನಿ

  ಈ ಹಿಂದೆ 'ಮಿಸ್ಟರ್ ಇಂಡಿಯಾ', 'ಶೆಹನ್ ಷಾ' ಸಿನಿಮಾಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದ ಅಫ್ತಾಬ್ ಶಿವದಾಸಾನಿ 'ಕೋಟಿಗೊಬ್ಬ 3' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾವಾಗಿದ್ದು, ಇಂಟರ್ ಪೋಲ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇನ್ನು 'ಕೋಟಿಗೊಬ್ಬ 3' ಚಿತ್ರಕ್ಕೆ ಶಿವ ಕಾರ್ತಿಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಸರ್ಬಿಯಾದಲ್ಲಿ ಶೂಟಿಂಗ್

  ಸರ್ಬಿಯಾದಲ್ಲಿ ಶೂಟಿಂಗ್

  ಸದ್ಯ ಸುದೀಪ್ 'ಪೈಲ್ವಾನ್' ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡು ಯುರೋಪ್ ನ ಸರ್ಬಿಯಾಗೆ ತೆರಳಲಿದ್ದಾರೆ. ಅಲ್ಲಿ ಸುಮಾರು 40 ದಿನಗಳ ಕಾಲ ಅಲ್ಲಿ ಶೂಟಿಂಗ್ ನಡೆಯಲಿದೆ. ಸುದೀಪ್ ಸೇರಿದಂತೆ ನಲವತ್ತು ಜನರ ತಂಡ ಜೂನ್ 15ಕ್ಕೆ ಅಲ್ಲಿಗೆ ಹೋಗಲಿದೆ. ಅಂದಹಾಗೆ, 'ಕೋಟಿಗೊಬ್ಬ 3' ಸೂರಪ್ಪ ಬಾಬು ನಿರ್ಮಾಣದ ಸಿನಿಮಾವಾಗಿದೆ.

  English summary
  Mollywood actress Madonna Sebastian is selected to play lead opposite Kannada Actor Kiccha Sudeep in 'Kotigobba 3' movie. The movie is producing by Surappa Baabu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X