»   » ವಿಘ್ನ ನಿವಾರಣೆ ಆಯ್ತು, ಜ.1ಕ್ಕೆ ವೀರಪ್ಪನ್ ಬೇಟೆ ಪಕ್ಕಾ

ವಿಘ್ನ ನಿವಾರಣೆ ಆಯ್ತು, ಜ.1ಕ್ಕೆ ವೀರಪ್ಪನ್ ಬೇಟೆ ಪಕ್ಕಾ

Posted By:
Subscribe to Filmibeat Kannada

ವರ್ಮಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರಕ್ಕೆ ಬೆಂಗಳೂರಿನಲ್ಲಿ ಈಗಾಗಲೇ ಹಲವಾರು ಕೇಸ್ ಗಳು ದಾಖಲಾಗಿ ಅದು ನಿವಾರಣೆಯಾಯಿತು ಎನ್ನುವಷ್ಟರಲ್ಲಿ ಮದ್ರಾಸ್ ಹೈಕೋರ್ಟ್ ನಲ್ಲಿ ಕೇಸ್ ಗಳು ದಾಖಲಾಗಲು ಆರಂಭವಾಯಿತು.

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ತಪ್ಪು ತಪ್ಪು ಮಾಹಿತಿ ಆಧರಿಸಿ ನಿರ್ಮಾಣಗೊಂಡಿದೆ, ಇದು ಚಿತ್ರದ ಟ್ರೈಲರ್ ನಲ್ಲಿ ಸಾಬೀತಾಗಿದೆ, ಚಿತ್ರ ಬಿಡುಗಡೆ ಆದರೆ ಕರ್ನಾಟಕ-ತಮಿಳುನಾಡು ನಡುವೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಸೇಲಂ ಜಿಲ್ಲೆಯ ಪನ್ನಿರ್ ಸೆಲ್ವಿ ಎಂಬುವವರು ಮದ್ರಾಸ್ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ದೂರನ್ನು ನ್ಯಾಯಾಲಯ ತಳ್ಳಿ ಹಾಕಿದೆ.['ಕಿಲ್ಲಿಂಗ್ ವೀರಪ್ಪನ್' ಟ್ರೈಲರ್ ಮೆಚ್ಚಿದ ಸೂಪರ್ ಸ್ಟಾರ್ ಬಿಗ್ ಬಿ]

Madras High Court refused to stay the release of Varma's 'Killing Veerappan'

ಆದ್ದರಿಂದ ಇದೀಗ ಕಿಲ್ಲಿಂಗ್ ವೀರಪ್ಪನ್ ಗೆ ಇದ್ದ ಅತ್ಯಂತ ದೊಡ್ಡ ವಿಘ್ನ ನಿವಾರಣೆ ಆಗಿರುವುದರಿಂದ, ಚಿತ್ರತಂಡ ಹೇಳಿದಂತೆ ಜನವರಿ 1 ರಂದು ಶಿವಣ್ಣ ಹಾಗೂ ವರ್ಮಾ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಕಿಲ್ಲಿಂಗ್ ವೀರಪ್ಪನ್' ಭರ್ಜರಿಯಾಗಿ ಬಿಡುಗಡೆ ಆಗಲಿದೆ.

ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ತಮಿಳು ಜನರನ್ನು ಹಾಗೂ ಮಹಿಳೆಯರನ್ನು ಅವಹೇಳನ ಮಾಡಲಾಗಿದೆ. ಕರ್ನಾಟಕ ಪೊಲೀಸರು ಮಾತ್ರವೇ ವೀರಪ್ಪನ್ ಅಟ್ಟಹಾಸವನ್ನು ಮಟ್ಟಹಾಕಲು, ಆತನ ಕಥೆಯನ್ನು ಮುಗಿಸಲು ಯತ್ನಿಸಿದರು ಎಂಬಂತೆ ಚಿತ್ರದಲ್ಲಿ ಚಿತ್ರಿಸಲಾಗಿದೆ ಎಂದು ದೂರುದಾರ ಪನ್ನಿರ್ ಸೆಲ್ವಿ ಆರೋಪಿಸಿ, ಚಿತ್ರಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.[ವರ್ಮಾ ವಿರುದ್ಧ ಕೇಸ್: 'ಕಿಲ್ಲಿಂಗ್ ವೀರಪ್ಪನ್'ಗೆ ಮತ್ತೊಂದು ಕಂಟಕ]

Madras High Court refused to stay the release of Varma's 'Killing Veerappan'

ಆದರೆ ಹೈಕೋರ್ಟ್ ಪನ್ನಿರ್ ಸೆಲ್ವಿ ಅವರ ಅರ್ಜಿ ವಜಾಗೊಳಿಸುವುದರೊಂದಿಗೆ ಚಿತ್ರದ ಬಿಡುಗಡೆಗೆ ಇದ್ದ ವಿಘ್ನ ನಿವಾರಣೆ ಆಗಿ ಜನವರಿ 1ಕ್ಕೆ ಚಿತ್ರ ಸುಸೂತ್ರವಾಗಿ ಬಿಡುಗಡೆ ಆಗುತ್ತಿದೆ.

English summary
Madras High Court refused to stay the release of Varma's 'Killing Veerappan'. A petition seeking to put on hold the release of Ram Gopal Varma's multilingual film Killing Veerappan has been filed in Madras High Court. The petitioner claims the film is full of "false information" on the forest brigand. In her statement, petitioner Paneerselvi of Salem said: "The film is filled with false information and will create law and order problems in Tamil Nadu if allowed to release."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada