ಅಪಘಾತದಲ್ಲಿ ಸಾವನಪ್ಪಿದ 'ಮಗಳು ಜಾನಕಿ' ಖ್ಯಾತಿಯ ನಟಿ ಶೋಭಾ

Recommended Video

Magalu Janaki Serial : ಮಗಳು ಜಾನಕಿ ಖ್ಯಾತಿಯ ನಟಿ ಶೋಭಾ ಅಲಿಯಾಸ್ ಮಂಗಳಕ್ಕ ಇನ್ನಿಲ್ಲ

ಖ್ಯಾತ ಕಿರುತೆರೆ ನಟಿ ಶೋಭಾ ಎಮ್.ವಿ ನಿನ್ನೆ(ಜುಲೈ 17) ಘಟಿಸಿದ ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಚಿತ್ರದುರ್ಗದ ಹೊರವಲಯ ರಾಷ್ಟ್ರೀಯ ಹೆದ್ದಾರಿ-4ರ ಕುಂಚಿಗನಾಳು ಗ್ರಾಮದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಶೋಭಾ ಸೇರಿದಂತೆ ಐವರು ಮೃತಪಟ್ಟಿದ್ದು, ಇನ್ನೂ ಮೂವರು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿ ಒಟ್ಟು ಎಂಟು ಜನ ಪ್ರಯಾಣಿಸುತ್ತಿದ್ದು ಇವರೆಲ್ಲಾ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಬಾಗಲಕೋಟೆ ಜಿಲ್ಲೆಯ ಬದಾಮಿ ಬನಶಂಕರಿ ದೇವಾಲಯಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ.

ಗಾಯಾಳುಗಳಲ್ಲಿ ಇಬ್ಬರು ಮಕ್ಕಳೂ ಸೇರಿದ್ದು ಎಲ್ಲಾ ಗಾಯಾಳುಗಳನ್ನು ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂ ಆಗಿದ್ದು, ಸ್ಥಳಕ್ಕೆ ಚಿತ್ರದುರ್ಗ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಮಗಳು ಜಾನಕಿಯಲ್ಲಿ ಶೋಭಾ ಅವರು ಮಂಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆನಂದ್ ಬೆಳಗೂರ್ ತಾಯಿಯಾಗಿ ಅದ್ಭುತ ಅಭಿನಯ ಮಾಡುತ್ತಿದ್ದ ಮಂಗಳಕ್ಕ ಇನ್ಮುಂದೆ ನೆನಪು ಮಾತ್ರ.

ಸಹಜ ಮತ್ತು ನೈಜ ಅಭಿನಯದ ಮೂಲಕವೆ ವೀಕ್ಷಕರ ಮನಗೆದ್ದಿದ್ದ ಶೋಭಾ ಧಾರಾವಾಹಿಯ ಪಾತ್ರಧಾರಿಯಂತೆ, ನಿಜ ಜೀವನದಲ್ಲೂ ಅತ್ಯಂತ ಸಜ್ಜನ ಮತ್ತು ಸೌಮ್ಯ ಸ್ವಭಾವದವರಾಗಿದ್ದರು. ಮಗಳು ಜಾನಕಿ ಧಾರಾವಾಹಿ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡಿದ್ದಾರೆ ಶೋಭಾ.

magalu janaki serial actress shobha passes away

ಶೋಭಾ ಅವರ ನಿಧನಕ್ಕೆ ಮಗಳು ಜಾನಕಿ ಧಾರಾವಾಹಿ ತಂಡ ಮತ್ತು ಅಭಿಮಾನಿ ಬಳಗ ಸಂತಾಪ ಸೂಚಿಸಿದೆ. ಶೋಭಾ ಅವರ ಅಗಲಿಗೆ ತಂಡಕ್ಕೆ ದೊಡ್ಡ ನಷ್ಟ ಎಂದು ಧಾರಾವಾಹಿ ತಂಡ ಹೇಳಿಕೊಂಡಿದೆ. ಅಲ್ಲದೆ ಈ ಧಾರಾವಾಹಿಯ ಅತೀ ದೊಡ್ಡ ಫೇಸ್ ಬುಕ್ ಗ್ರೂಪ್ ನವರು ಕೂಡ ಶುಭಾ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

ಮಂಗಳಕ್ಕ ಆಗಿ ಧಾರಾವಾಹಿಯಲ್ಲಿ ಎಲ್ಲರ ಅಚ್ಚುಮೆಚ್ಚಾಗಿದ್ದರು ಶೋಭಾ. ಮಗಳು ಜಾನಕಿ ಧಾರಾವಾಹಿ ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ವಿಭಿನ್ನ ಕಥಾಹಂದರದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸೆಳೆದಿದೆ ಈ ಧಾರಾವಾಹಿ.

More from Filmibeat

English summary
Colors Kannada channel's popular serial 'Magalu Janaki' actress Shobha passes away. Shobha got accident yesterday (July 17th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X